ಆರ್‌ಸಿಬಿ ಫ್ಯಾನ್ಸ್‌ನಿಂದ ಮಹತ್ವದ ನಿರ್ಧಾರ, ಮೇ.17ರ ಪಂದ್ಯಕ್ಕೆ ರೆಡ್ ಅಲ್ಲ ವೈಟ್ ಜರ್ಸಿ
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕೊಹ್ಲಿಗೆ ಟ್ರಿಬ್ಯೂಟ್ ನೀಡಲು ಆರ್‌ಸಿಬಿ ಅಭಿಮಾನಿಗಳು ಸಜ್ಜಾಗಿದ್ದಾರೆ. ಇದಕ್ಕೆ ಆರ್‌ಸಿಬಿ ಅಭಿಮಾನಿಗಳು ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
- FB
- TW
- Linkdin
Follow Us
)
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ನೀಡಿದ್ದಾರೆ. ಕೊಹ್ಲಿ ಫಿಟ್ನೆಸ್, ಫಾರ್ಮ್ ನೋಡಿದರೆ ಇನ್ನು ಕ್ರಿಕೆಟ್ ಬಾಕಿ ಇದೆ ಎಂದು ಮಾಜಿ ಕ್ರಿಕೆಟಿಗರು, ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಕೊಹ್ಲಿ ವಿದಾಯ ಹೇಳಿದ್ದಾರೆ. ಕೊಹ್ಲಿಯ ಈ ನಿರ್ಧಾರ ಹಲವರ ಬೇಸರಕ್ಕೆ ಕಾರಣವಾಗಿದೆ. ಕೊಹ್ಲಿ ಇನ್ನು ತಂಡದಲ್ಲಿ ಇರಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಇತ್ತ ಆರ್‌ಸಿಬಿ ಅಭಿಮಾನಿಗಳು ಇದೀಗ ಕೊಹ್ಲಿ ಟೆಸ್ಟ್ ನಿವತ್ತಿಗೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸಲು ನಿರ್ಧರಿಸಿದೆ.
ವಿರಾಟ್ ಕೊಹ್ಲಿ ಸರಣಿ ನಡುವೆ ಅಥವಾ ಮೊದಲೇ ಘೋಷಿಸಿ ಗಾರ್ಡ್ ಆಫ್ ಹಾನರ್ ಪಡೆದು ನಿವೃತ್ತಿಯಾಗಿದ್ದರೂ ಕೊಹ್ಲಿ ಅಭಿಮಾನಿಗಳು ಕೊಂಚ ಸಮಾಧಾನ ಪಡುತ್ತಿದ್ದರು. ಆದರೆ ಏಕಾಏಕಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ವಿದಾಯ ಘೋಷಿಸಿದ್ದಾರೆ. ಇದೀಗ ಆರ್‌ಸಿಬಿ ಅಭಿಮಾನಿಗಳು ಕೊಹ್ಲಿಗೆ ಗೌರವಯುತ ವಿದಾಯ ಹೇಳಲು ಸಜ್ಜಾಗಿದ್ದಾರೆ. ಇದಕ್ಕಾಗಿ ವೈಟ್ ಅಂಡ್ ವೈಟ್ ಮನವಿ ಮಾಡಿದ್ದಾರೆ.
ಐಪಿಎಲ್ ಟೂರ್ನಿಯ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಮುಂದಿನ ಆರ್‌ಸಿಬಿ ಪಂದ್ಯಕ್ಕೆ ಅಭಿಮಾನಿಗಳು ವೈಟ್ ಜರ್ಸಿಯಲ್ಲಿ ಹಾಜರಾಗಲು ಮನವಿ ಮಾಡಲಾಗಿದೆ.ಅಭಿಮಾನಿಗಳು ವೈಟ್ ಜರ್ಸಿಯಲ್ಲಿ ಹಾಜರಾಗುವ ಮೂಲಕ ವಿರಾಟ್ ಕೊಹ್ಲಿಗೆ ಗೌರವ ಸೂಚಿಸಬೇಕು ಎಂದು ಆರ್‌ಸಿಬಿ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಅಭಿಮಾನಿಗಳು ಮುಂದಿನ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಾಜರಾಗುವಾಗ ವೈಟ್ ಜರ್ಸಿ ಅಥವಾ ವೈಟ್ ಟಿಶರ್ಟ್ ಧರಿಸಿ ಬರುವಂತೆ ಆರ್‌ಸಿಬಿ ಅಭಿಮಾನಿಗಳು ಮನವಿ ಮಾಡಿದ್ದಾರೆ. ಗಡಿ ಸಂಘರ್ಷ ಕಾರಣದಿಂದ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಮೇ 17 ರಿಂದ ಆರಂಭಗೊಳ್ಳುತ್ತಿದೆ. ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೀಗ ಈ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ವೈಟ್ ಜರ್ಸಿಯಲ್ಲಿ ಆಗಮಿಸುವಂತೆ ಮನವಿ ಮಾಡಿದ್ದಾರೆ.
ಹಲವು ಆರ್‌ಸಿಬಿ ಅಭಿಮಾನಿಗಳು ಈಗಾಗಲೇ ವಿರಾಟ್ ಕೊಹ್ಲಿಯ ಟೆಸ್ಟ್ ಜರ್ಸಿ ಖರೀದಿಸಿದ್ದಾರೆ. ಮೇ.17ರ ಪಂದ್ಯ ಹಲವು ವಿಶೇಷೆ ಇದೆ. ಪ್ರಮುಖವಾಗಿ ಯುದ್ಧ ಭೀತಿಯಿಂದ ಐಪಿಎಲ್ ಮುಂದೂಡಿಕೆ ಮಾಡಿದ ಬಳಿಕ ಪುನರ್ ಆರಂಭಗೊಳ್ಳತ್ತಿದೆ. ಇದರ ಮೊದಲ ಪಂದ್ಯ ಮೇ.17ಕ್ಕೆ. ಇದರ ಜೊತೆಗೆ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದು. ಹೀಗಾಗಿ ಅಭಿಮಾನಿಗಳು ಸಂಪೂರ್ಣ ವೈಟ್ ಜರ್ಸಿಯಲ್ಲಿ ಕಾಣಿಸಿಕೊಂಡು ಟ್ರಿಬ್ಯೂಟ್ ನೀಡಲು ನಿರ್ಧರಿಸಿದೆ.
ಆರ್‌ಸಿಬಿ ಅಭಿಮಾನಿಗಳ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಕೊಹ್ಲಿಗೆ ಟೆಸ್ಟ್ ಟ್ರಿಬ್ಯೂಟ್ ಜೊತೆಗೆ ವಿಶ್ವಕ್ಕೆ ಶಾಂತಿಯ ಸಂದೇಶ ನೀಡುತ್ತೇವೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮಾ.17ರ ಪಂದ್ಯ ಆರ್‌ಸಿಬಿ ಅಭಿಮಾನಿಗಳಿಗೆ ಭಾರಿ ವಿಶೇಷವಾಗಿದೆ.