ಜಗತ್ತಿನ ಯಾವ ಕ್ರಿಕೆಟಿಗನೂ ಮಾಡಿರದ ಅಪರೂಪದ ರೆಕಾರ್ಡ್ ನಿರ್ಮಿಸಿದ ರವೀಂದ್ರ ಜಡೇಜಾ!
ಬರ್ಮಿಂಗ್‌ಹ್ಯಾಮ್: ಭಾರತ & ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆಕರ್ಷಕ ದ್ವಿಶತಕ ಹಾಗೂ ಎಡಗೈ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ & ರವೀಂದ್ರ ಜಡೇಜಾ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದೆ. ಇನ್ನು ಜಡೇಜಾ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ.

ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್(269) ಹಾಗೂ ರವೀಂದ್ರ ಜಡೇಜಾ(89) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟೀಂ ಇಂಡಿಯಾ ಆಲ್ರೌಂಡರ್ ಜಡೇಜಾ ಬ್ಯಾಟಿಂಗ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದು, ಇದೀಗ ಬೌಲಿಂಗ್‌ನಲ್ಲೂ ಕಮಾಲ್ ಮಾಡಲು ಎದುರು ನೋಡುತ್ತಿದೆ.
ಇನ್ನು ಜಡೇಜಾ ಆಕರ್ಷಕ 89 ರನ್ ಸಿಡಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದರ ಜತೆಗೆ ಜಗತ್ತಿನ ಯಾವ ಕ್ರಿಕೆಟಿಗನೂ ಮಾಡದ ಹೊಸ ದಾಖಲೆ ನಿರ್ಮಿಸಿದ್ದಾರೆ.
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ್ದರು. ಇದರ ಬೆನ್ನಲ್ಲೇ ಜಡ್ಡು ಆಯ್ಕೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಆದರೆ ಎಜ್‌ಬಾಸ್ಟನ್ ಟೆಸ್ಟ್‌ನಲ್ಲೂ ಜಡ್ಡು ಬ್ಯಾಟ್ ಮೂಲಕ ಅಬ್ಬರಿಸಿದ್ದಾರೆ. ಇದರ ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 2000 ರನ್ ಹಾಗೂ 100 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರವೀಂದ್ರ ಜಡೇಜಾ ಸದ್ಯ ಬ್ಯಾಟಿಂಗ್‌ನಲ್ಲಿ 2010 ರನ್ ಹಾಗೂ ಬೌಲಿಂಗ್‌ನಲ್ಲಿ 132 ವಿಕೆಟ್ ಕಬಳಿಸಿದ್ದಾರೆ.
ಟೀಂ ಇಂಡಿಯಾ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಒಂದು ಹಂತದಲ್ಲಿ 211 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ಆರನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಜಡೇಜಾ ಜೋಡಿ ಆಕರ್ಷಕ 203 ರನ್‌ಗಳ ಜತೆಯಾಟವಾಡಿತು.