IPL 2021: ತಮ್ಮ ಕೊನೆಯ ಐಪಿಎಲ್ ಪಂದ್ಯದ ಬಗ್ಗೆ ತುಟಿಬಿಚ್ಚಿದ ಎಂ ಎಸ್ ಧೋನಿ..!
ದುಬೈ: ಮಹೇಂದ್ರ ಸಿಂಗ್ ಧೋನಿ, ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಂತಹ ಏಕೈಕ ನಾಯಕ. ಇಂತಹ ಯಶಸ್ವಿ ನಾಯಕ ಭಾರತದಲ್ಲೇ ವಿದಾಯದ ಪಂದ್ಯವನ್ನಾಡಬೇಕಿತ್ತು ಎಂದು ಹಲವು ಕ್ರಿಕೆಟ್ ಅಭಿಮಾನಿಗಳ ಹೆಬ್ಬಯಕೆ. ಸದ್ಯದ ಧೋನಿ ಫಾರ್ಮ್ ನೋಡಿದರೇ ಈ ಐಪಿಎಲ್ ಧೋನಿ ಪಾಲಿನ ಕಡೆಯ ಐಪಿಎಲ್ ಆಗಬಹುದು ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ. ಹೀಗಿರುವಾಗಲೇ ಧೋನಿ ತಮ್ಮ ಕಡೆಯ ಐಪಿಎಲ್ ಪಂದ್ಯದ ಬಗ್ಗೆ ತುಟಿಬಿಚ್ಚಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೂ 3 ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ ಆಫ್‌ಗೇರಿದ ಮೊದಲ ತಂಡ ಎನ್ನುವ ಕೀರ್ತಿಗೆ ಭಾಜನವಾಗಿತ್ತು.
2020ನೇ ಸಾಲಿನಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ಗೇರಲು ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ಎಲ್ಲಾ ತಂಡಗಳಿಗಿಂತ ಮೊದಲೇ ಪ್ಲೇ ಆಫ್‌ಗೇರಿ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿದ್ದು, ಇದೀಗ 4ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಚೆನ್ನೈ ಕೂಡಾ ಒಂದು ಎನಿಸಿದೆ.
(Photo source- Instagram)
ಧೋನಿಯ ಸದ್ಯದ ಬ್ಯಾಟಿಂಗ್ ಫಾರ್ಮ್ ಗಮನಿಸಿದರೆ, ಇದೇ ಧೋನಿ ಪಾಲಿನ ಕೊನೆಯ ಐಪಿಎಲ್ ಆಗಬಹುದು ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿರುವಾಗಲೇ ಮಾಹಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ
ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲೇ ಆಡುತ್ತೇನೆ ಎನ್ನುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ ಆಡುವ ಸುಳಿವು ನೀಡಿದ್ದಾರೆ.
(photo Source- Getty)
ಲಯದ ಸಮಸ್ಯೆ ಎದುರಿಸುತ್ತಿರುವ ಧೋನಿ ಈ ಆವೃತ್ತಿ ಬಳಿಕ ಐಪಿಎಲ್‌ನಿಂದಲೂ ನಿವೃತ್ತಿ ಪಡೆಯಬಹುದು ಎನ್ನುವ ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ
(photo Source- Getty)
ಚೆನ್ನೈ ತಂಡದ ಮಾಲಿಕರಾದ ಇಂಡಿಯಾ ಸಿಮೆಂಟ್ಸ್‌ನ ಕಾರ‍್ಯಕ್ರಮವೊಂದರಲ್ಲಿ ಸಿಬ್ಬಂದಿವೊಬ್ಬರು ‘ನೀವೇಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೊದಲು ಬೀಳ್ಕೊಡುಗೆ ಪಂದ್ಯಕ್ಕಾಗಿ ಕಾಯಲಿಲ್ಲ’ ಎಂದು ಪ್ರಶ್ನೆ ಕೇಳಿದರು.
(photo Source- Getty)
ಇದಕ್ಕೆ ಉತ್ತರಿಸಿದ ಧೋನಿ ‘ನಿವೃತ್ತಿಗೆ ಅದಕ್ಕಿಂತ ಉತ್ತಮ ದಿನವಿರಲಿಲ್ಲ. ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದ್ದೇನೆ. ಅಲ್ಲಿ ನೀವು ನನ್ನ ನೋಡಬಹುದು’ ಎಂದರು. ಹೀಗಾಗಿ ಧೋನಿ 2022ರ ಐಪಿಎಲ್‌ನಲ್ಲೂ ಆಡುವುದು ಬಹುತೇಕ ಖಚಿತ ಎನಿಸಿದೆ.
(photo Source- Getty)
ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಟೀಂ ಇಂಡಿಯಾ ಪರ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು. ಇದಾದ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಘೋಷಿಸಿದ್ದರು.