- Home
- Sports
- Cricket
- IPL 2026: ಆರನೇ ಸೋಲು ಕಂಡ ಮುಂಬೈ ಇಂಡಿಯನ್ಸ್; ಆದ್ರೇ ಈಗಲೂ ಇದೆ ಪಾಂಡ್ಯ ಪಡೆಗೆ ಪ್ಲೇ ಆಫ್‌ಗೇರುವ ಚಾನ್ಸ್!
IPL 2026: ಆರನೇ ಸೋಲು ಕಂಡ ಮುಂಬೈ ಇಂಡಿಯನ್ಸ್; ಆದ್ರೇ ಈಗಲೂ ಇದೆ ಪಾಂಡ್ಯ ಪಡೆಗೆ ಪ್ಲೇ ಆಫ್‌ಗೇರುವ ಚಾನ್ಸ್!
ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ ಎದುರು ಬೃಹತ್ ಮೊತ್ತ ಗಳಿಸಿಯೂ, ಸೋಲೊಪ್ಪಿಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಹಾದಿ ಕಠಿಣ ಮಾಡಿಕೊಂಡಿದೆ. ಆದರೆ ಪ್ಲೇ ಆಫ್‌ಗೇರಲು ಈಗಲೂ ಪಾಂಡ್ಯ ಪಡೆಗೆ ಚಾನ್ಸ್ ಇದೆ.

ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಲೆಕ್ಕಾಚಾರ
ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಸೋಲಿನ ಬೆನ್ನಲ್ಲೇ ಇಂಡಿಯನ್ಸ್ ತಂಡಕ್ಕೆ ಪ್ಲೇಆಫ್‌ಗೆ ಹೋಗುವ ಅವಕಾಶ ಇನ್ನೂ ಇದೆಯಾ? ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಯಾಕಂದ್ರೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಆಡಿರೋ 8 ಮ್ಯಾಚ್‌ಗಳಲ್ಲಿ 6ರಲ್ಲಿ ಸೋತಿದೆ. ಸದ್ಯಕ್ಕೆ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡದ ಖಾತೆಯಲ್ಲಿ ಇರೋದು ಕೇವಲ 4 ಪಾಯಿಂಟ್ಸ್ ಮಾತ್ರ.
ಮುಂಬೈ ತಂಡದ ಮುಂದಿದೆ ಅಗ್ನಿ ಪರೀಕ್ಷೆ
ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲಿ ಇನ್ನು 6 ಮ್ಯಾಚ್‌ಗಳು ಬಾಕಿ ಇವೆ. ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಡಬೇಕಿದೆ.
ಮುಂಬೈ ತನ್ನ ಪಾಲಿನ ಎಲ್ಲಾ ಆರು ಪಂದ್ಯಗಳನ್ನು ಗೆಲ್ಲಬೇಕಿದೆ
ಪ್ಲೇಆಫ್‌ಗೆ ಹೋಗಬೇಕಂದ್ರೆ, ಮುಂಬೈ ಈ ಎಲ್ಲಾ 6 ಪಂದ್ಯಗಳನ್ನೂ ಗೆಲ್ಲಲೇಬೇಕು. ಆಗ ತಂಡದ ಪಾಯಿಂಟ್ಸ್ 16ಕ್ಕೆ ಏರಿಕೆಯಾಗುತ್ತೆ. ಇದರಿಂದ ಪ್ಲೇಆಫ್‌ಗೆ ಸೇಫ್ ಆಗಿ ಎಂಟ್ರಿ ಕೊಡಬಹುದು. ಒಂದೇ ಒಂದು ಮ್ಯಾಚ್ ಸೋತರೂ ಪ್ಲೇಆಫ್ ಕನಸು ಬಹುತೇಕ ಭಗ್ನವಾಗುತ್ತೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಾಲ್ಕು ತಂಡಗಳು ಪ್ಲೇ ಆಫ್ ಹೊಸ್ತಿಲಲ್ಲಿವೆ
ಇದಕ್ಕೊಂದು ಕಾರಣವೂ ಇದೆ. ಟಾಪ್ 4 ತಂಡಗಳ ಸ್ಥಿತಿ ನೋಡಿದ್ರೆ ಇದು ಗೊತ್ತಾಗುತ್ತೆ. ಮೊದಲ ಸ್ಥಾನದಲ್ಲಿರುವ ಪಂಜಾಬ್‌ಗೆ 13 ಪಾಯಿಂಟ್ಸ್ ಇದೆ. ಅದರ ನಂತರದ ಸ್ಥಾನದಲ್ಲಿರುವ ಬೆಂಗಳೂರು, ಹೈದರಾಬಾದ್ ಮತ್ತು ರಾಜಸ್ಥಾನ ತಂಡಗಳಿಗೆ ತಲಾ 12 ಪಾಯಿಂಟ್ಸ್ ಇವೆ. ಈ ನಾಲ್ಕು ತಂಡಗಳು ಪ್ಲೇಆಫ್ ಖಚಿತಪಡಿಸಿಕೊಳ್ಳಲು ಇನ್ನು ಕೇವಲ ಎರಡು ಪಂದ್ಯಗಳನ್ನು ಗೆದ್ದರೆ ಸಾಕು.
ಎಲ್ಲಾ ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆಲ್ಲಬೇಕಿದೆ
ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವು ತನ್ನ ಪಾಲಿನ ಮುಂದಿನ ಎಲ್ಲಾ ಪಂದ್ಯಗಳನ್ನು ಭಾರೀ ಅಂತರದಲ್ಲಿ ಜಯಿಸಿ, ರನ್‌ರೇಟ್ ಸುಧಾರಿಸಿಕೊಂಡರೆ ಈಗಲೂ ಪ್ಲೇ ಆಫ್‌ಗೇರುವ ಅವಕಾಶವಿದೆ. ಆದರೆ ಮುಂಬೈ ಒಂದೇ ಒಂದು ಸೋಲು ಈ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಲಿದೆ.
ಕಮ್‌ಬ್ಯಾಕ್ ಮಾಡುತ್ತಾ ಮುಂಬೈ ಇಂಡಿಯನ್ಸ್?
ಹೀಗಾಗಿ ಭರ್ಜರಿ ಕಮ್‌ಬ್ಯಾಕ್‌ಗೆ ಹೆಸರುವಾಸಿಯಾಗಿರುವ ಮುಂಬೈ ಇಂಡಿಯನ್ಸ್, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಪ್ಲೇ ಆಫ್‌ಗೇರುತ್ತಾ? ಅಥವಾ ಇನ್ನೊಂದು ಸೋಲು ಕಂಡು ಲೀಗ್ ಹಂತದಲ್ಲಿಯೇ ಹೊರಬೀಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

