ಕ್ಯಾಪ್ಟನ್ ಕೂಲ್ ಧೋನಿಗೆ ಸ್ಟಂಪಿಂಗ್ ರೂಲ್ಸ್ ಕಲಿಸಿದ್ದೇ ಪತ್ನಿ ಸಾಕ್ಷಿಯಂತೆ!
ಮಹೇಂದ್ರ ಸಿಂಗ್ ಧೋನಿ ವಿಕೆಟ್ ಮುಂದೇ ಬ್ಯಾಟ್ ಹಿಡಿದು ನಿಂತಾಗ ಎಷ್ಟು ಅಪಾಯಕಾರಿ ಬ್ಯಾಟರ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ವಿಕೆಟ್ ಹಿಂದೆ ಕೂಡಾ ವಿಕೆಟ್ ಕೀಪರ್ ಆಗಿ ಧೋನಿ ಮತ್ತಷ್ಟು ಡೇಂಜರಸ್ ಆಟಗಾರ ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಆದರೆ ಧೋನಿ ಸ್ಟಂಪಿಂಗ್ ರೂಲ್ಸ್ ಕಲಿತಿದ್ದು ಪತ್ನಿ ಸಾಕ್ಷಿಯಿಂದ ಎನ್ನುವುದು ಅಚ್ಚರಿಯೆನಿಸಿದ್ರೂ ಸತ್ಯ.
ಮೈದಾನದ ಹೊರಗೆ ಅನೇಕ ಕ್ರಿಕೆಟ್ ಆಟಗಾರರ ಪತ್ನಿಯರು ಅವರನ್ನು ಹುರಿದುಂಬಿಸುವುದನ್ನು ನೋಡಿದ್ದೇವೆ, ಅವರಲ್ಲಿ ಸಾಕ್ಷಿ ಧೋನಿ ಕೂಡ ಒಬ್ಬರು. ಅವರು ತಮ್ಮ ಪತಿ ಮಹೇಂದ್ರ ಸಿಂಗ್ ಧೋನಿಯ ಬಹುತೇಕ ಪ್ರತಿ ಪಂದ್ಯದಲ್ಲೂ ಹುರಿದುಂಬಿಸಲು ಮೈದಾನದಲ್ಲಿ ಇರುತ್ತಾರೆ. ಆದರೆ ಒಮ್ಮೆ ಧೋನಿ ಹಾಗೂ ಸಾಕ್ಷಿ ಮನೆಯಲ್ಲಿ ಕುಳಿತು ಕ್ರಿಕೆಟ್ ಆನಂದಿಸುತ್ತಿದ್ದಾಗ, ಸಾಕ್ಷಿ ಹೇಗೆ ಧೋನಿಗೆ ಕ್ರಿಕೆಟ್ ಪಾಠ ಮಾಡಿದರು ಎಂದು ನೋಡೋಣ ಬನ್ನಿ.
ಸ್ಟಂಪಿಂಗ್ ಬಗ್ಗೆ ಸಾಕ್ಷಿ ಧೋನಿಗೆ ಪಾಠ ಮಾಡಿದ್ರು
ಎಕ್ಸ್ ಪುಟದಲ್ಲಿ (ಟ್ವಿಟರ್‌ನಲ್ಲಿ) Cricketopia ಎಂಬ ಖಾತೆಯಲ್ಲಿ ಎಂ.ಎಸ್. ಧೋನಿಯವರ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ, ತನ್ನ ಪತ್ನಿ ಒಮ್ಮೆ ಕ್ರಿಕೆಟ್ ಬಗ್ಗೆ ಹೇಗೆ ದೀರ್ಘ ಉಪನ್ಯಾಸ ನೀಡಿದರು ಎಂಬುದನ್ನು ಧೋನಿ ಎಳೆಎಳೆಯಾಗಿ ವಿವರಿಸಿದ್ದಾರೆ.
ಧೋನಿಗೆ ಸಾಕ್ಷಿಯಿಂದ ಪಾಠ
ವಾಸ್ತವವಾಗಿ, ನಾವು ಮನೆಯಲ್ಲಿ ಒಂದು ಪಂದ್ಯವನ್ನು ನೋಡುತ್ತಿದ್ದೆವು. ಅದು ಒಂದು ಏಕದಿನ ಪಂದ್ಯ, ಸಾಕ್ಷಿ ಕೂಡ ನನ್ನ ಜೊತೆ ಇದ್ದರು. ನಾವು ಒಟ್ಟಿಗೆ ಇರುವಾಗ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ, ಆದರೆ ಬೌಲರ್ ಬಾಲ್ ಎಸೆದಾಗ ಅದು ವೈಡ್, ಅವರು ಸ್ಟೆಪ್ ಔಟ್ ಮಾಡಲು ಹೋಗಿ ಬ್ಯಾಟರ್ ಸ್ಟಂಪ್ ಔಟ್ ಆದರು. ಸಾಮಾನ್ಯವಾಗಿ ಅಂಪೈರ್‌ಗಳು ಮೂರನೇ ಅಂಪೈರ್‌ನ ನಿರ್ಧಾರಕ್ಕಾಗಿ ಕಾಯುತ್ತಾರೆ, ಆದರೆ ನನ್ನ ಪತ್ನಿ ಔಟ್ ಅಲ್ಲ ಅಂದರು. ಅವರು ಔಟ್ ಅಲ್ಲ ಎಂದು ಹೇಳುವವರೆಗೂ ಬ್ಯಾಟ್ಸ್‌ಮನ್ ನಡೆಯಲು ಪ್ರಾರಂಭಿಸಿದರು, ಸಾಕ್ಷಿ ನೀವು ನೋಡುತ್ತಿರಿ, ಅವರನ್ನು ವಾಪಸ್ ಕರೆಯುತ್ತಾರೆ ಎಂದರು.
ವೈಡ್ ಬಾಲ್‌ಗೆ ಸ್ಟಂಪ್ ಔಟ್ ಮಾಡಕ್ಕಾಗಲ್ಲ. ಅಂಪೈರ್‌ಗಳು ಅವರನ್ನು ವಾಪಸ್ ಕರೆಯುತ್ತಾರೆ ಎಂದು ಅವರು ಹೇಳುತ್ತಲೇ ಇದ್ದರು, ಆದರೆ ಅಷ್ಟರಲ್ಲಿ ಬ್ಯಾಟ್ಸ್‌ಮನ್ ಬೌಂಡರಿ ಗೆರೆ ದಾಟಿದ್ದರು. ನಿಮಗೆ ಏನೂ ಗೊತ್ತಿಲ್ಲ, ನೀವು ಕಾಯಿರಿ, ಮೂರನೇ ಅಂಪೈರ್ ಅವರನ್ನು ವಾಪಸ್ ಕರೆಯುತ್ತಾರೆ ಎಂದು ಸಾಕ್ಷಿ ಹೇಳಿದರು. ಆಗ ಧೋನಿ, ವೈಡ್ ಬಾಲ್‌ಗೆ ಸ್ಟಂಪಿಂಗ್ ಮಾಡಬಹುದು, ನೋ ಬಾಲ್‌ಗೆ ಮಾಡಕ್ಕಾಗಲ್ಲ ಎಂದು ಅವರಿಗೆ ವಿವರಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿಯ ಈ ತಮಾಷೆಯ ಘಟನೆ ವೈರಲ್ ಆಗುತ್ತಿದೆ, ಸಾವಿರಾರು ಜನರು ಇದನ್ನು ಲೈಕ್ ಮಾಡಿದ್ದಾರೆ.
ಐಪಿಎಲ್ 2025 ರಲ್ಲಿ ಧೋನಿ ಆಡ್ತಾರೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ನಲ್ಲಿ ಆಡುವ ಬಗ್ಗೆ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖಚಿತಪಡಿಸಿದೆ. ವರದಿಗಳ ಪ್ರಕಾರ, ಸಿಎಸ್‌ಕೆ 4 ಕೋಟಿ ರೂಪಾಯಿಗೆ ಎಂ.ಎಸ್. ಧೋನಿಯನ್ನು ಉಳಿಸಿಕೊಳ್ಳಬಹುದು, ಅವರು ಐಪಿಎಲ್‌ನ ಮುಂದಿನ ಸೀಸನ್‌ನಲ್ಲೂ ಆಡಬಹುದು. ಎಂ.ಎಸ್. ಧೋನಿಯ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಟ್ರೋಫಿ ಗೆದ್ದಿದೆ ಎಂಬುದು ಗಮನಾರ್ಹ.