ಇವರೇ ಕ್ರಿಕೆಟ್ ಇತಿಹಾಸದ ಅಪಾಯಕಾರಿ ಬ್ಯಾಟರ್ಸ್! ಕ್ರೀಸ್‌ಗೆ ಬಂದ್ರೆ ಬೌಲರ್‌ಗಳಿಗೆ ನಡುಕ!
ಕ್ರಿಕೆಟ್ ಜಗತ್ತನ್ನು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಆಳಿದ ಆಟಗಾರರು ಹಲವರಿದ್ದಾರೆ. ಆದರೆ ಈ ಐವರು ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ಕ್ರೀಸ್‌ಗೆ ಬಂದರೆ ಬೌಲರ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದರು.
16

Image Credit : our own
ಗೇಲ್‌ನಿಂದ ಸೆಹ್ವಾಗ್‌ವರೆಗೆ: ಕ್ರಿಕೆಟ್ ಇತಿಹಾಸವನ್ನೇ ಅಲುಗಾಡಿಸಿದ 5 ಡೇಂಜರಸ್ ಹಿಟ್ಟರ್‌ಗಳು
ಕ್ರಿಕೆಟ್ ಅಂದರೆ ಬ್ಯಾಟ್ ಮತ್ತು ಬಾಲ್ ನಡುವಿನ ಯುದ್ಧ. ಆದರೆ ಕೆಲ ಬ್ಯಾಟರ್‌ಗಳು ಮೈದಾನಕ್ಕೆ ಇಳಿದರೆ ಅದು ಯುದ್ಧದಂತೆ ಕಾಣುವುದಿಲ್ಲ, ಬದಲಾಗಿ ಏಕಪಕ್ಷೀಯ ಸಮರದಂತೆ ಇರುತ್ತದೆ. ಈ ಐವರು 'ಅತ್ಯಂತ ಅಪಾಯಕಾರಿ ಬ್ಯಾಟರ್ಸ್' ಎಂದು ಗುರುತಿಸಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
Image Credit : Getty
1. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರು ಕೇಳಿದ್ರೆ ಸಾಕು, ಬೌಲರ್‌ಗಳಿಗೆ ನಡುಕ ಶುರುವಾಗುತ್ತಿತ್ತು. ಗೇಲ್ ಒಮ್ಮೆ ಕ್ರೀಸ್‌ನಲ್ಲಿ ಸೆಟ್ ಆದರೆ, ಅವರನ್ನು ಔಟ್ ಮಾಡುವುದು ಕಷ್ಟಸಾಧ್ಯವಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,593 ರನ್ ಮತ್ತು 553 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
36
Image Credit : Getty
2. ನಜಫ್‌ಗಢದ ನವಾಬ ವೀರೇಂದ್ರ ಸೆಹ್ವಾಗ್ (ಭಾರತ)
ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ (300+) ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಸೆಹ್ವಾಗ್. ಏಕದಿನ ಪಂದ್ಯದಲ್ಲೂ ದ್ವಿಶತಕ ಬಾರಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,253 ರನ್ ಗಳಿಸಿದ್ದು, ಇದರಲ್ಲಿ 38 ಶತಕ ಮತ್ತು 72 ಅರ್ಧಶತಕಗಳಿವೆ.
46
Image Credit : our own
3. ಮಿಸ್ಟರ್ 360 ಡಿಗ್ರೀಸ್ ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)
ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಬಾರಿಸುವ ಸಾಮರ್ಥ್ಯ ಎಬಿಡಿಗಿದೆ. 2015ರಲ್ಲಿ ಕೇವಲ 31 ಎಸೆತಗಳಲ್ಲಿ ಏಕದಿನ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 20,014 ರನ್, 47 ಶತಕ, 109 ಅರ್ಧಶತಕ ಹಾಗೂ 328 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
56
Image Credit : Getty
4. ಸನತ್ ಜಯಸೂರ್ಯ (ಶ್ರೀಲಂಕಾ)
ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ ಆರಂಭಿಕ ಬ್ಯಾಟಿಂಗ್‌ಗೆ ಹೊಸ ಭಾಷ್ಯ ಬರೆದವರು. ಪವರ್‌ಪ್ಲೇನಲ್ಲಿ ಬೌಲರ್‌ಗಳನ್ನು ದಂಡಿಸುವುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 21,032 ರನ್ ಗಳಿಸಿದ್ದು, 352 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
66
Image Credit : x/icc
5. ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್. ಇವರು ಕ್ರೀಸ್‌ಗೆ ಬಂದರೆ ಸ್ಕೋರ್ ಬೋರ್ಡ್ ರಾಕೆಟ್ ವೇಗದಲ್ಲಿ ಸಾಗುತ್ತಿತ್ತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15,461 ರನ್, 33 ಶತಕ, 81 ಅರ್ಧಶತಕ ಹಾಗೂ 262 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos
