ಎರಡು ಟಿ20 ಪಂದ್ಯಗಳಿಂದ ಅರ್ಷ್‌ದೀಪ್ ಹೊರಗುಳಿದಿದ್ದೇಕೆ? ಬೌಲಿಂಗ್ ಕೋಚ್ ಹೇಳಿದ್ದೇನು?
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಅರ್ಷ್‌ದೀಪ್ ಸಿಂಗ್ ಅವರನ್ನು ಹೊರಗಿಟ್ಟಿದ್ದಕ್ಕೆ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಸ್ಪಷ್ಟನೆ ನೀಡಿದ್ದಾರೆ.

ಮೊದಲೆರಡು ಪಂದ್ಯದಿಂದ ಅರ್ಷದೀಪ್‌ಗಿಲ್ಲ ಸ್ಥಾನ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಅರ್ಷ್‌ದೀಪ್ ಸಿಂಗ್ ಅವರನ್ನು ಹೊರಗಿಟ್ಟಿದ್ದಕ್ಕೆ ಎನ್ನುವುದಕ್ಕೆ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕಾರಣ ನೀಡಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಬೇರೆ ಬೇರೆ ಕಾಂಬಿನೇಷನ್ ಪ್ರಯತ್ನಿಸಲು ಈ ನಿರ್ಧಾರ ಎಂದರು.
ಅರ್ಷದೀಪ್ ಅನುಭವಿ ಆಟಗಾರ
ಅರ್ಷ್‌ದೀಪ್ ಸಿಂಗ್ ಅನುಭವಿ ಆಟಗಾರ, ತಂಡದ ಸಂಯೋಜನೆಗಳ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿದೆ. ಅವರು ವಿಶ್ವದರ್ಜೆಯ ಬೌಲರ್, ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ತಂಡಕ್ಕೆ ಅವರ ಮೌಲ್ಯ ಗೊತ್ತಿದೆ, ಆದರೆ ನಾವು ಬೇರೆ ಕಾಂಬಿನೇಷನ್ ಪ್ರಯತ್ನಿಸುತ್ತಿದ್ದೇವೆ.
ತಂಡದ ಆಯ್ಕೆ ಆಟಗಾರರಿಗೂ ಸವಾಲು
ಟಿ20 ವಿಶ್ವಕಪ್‌ಗೂ ಮುನ್ನ ನಾವು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸುತ್ತಿದ್ದೇವೆ. ಅವಕಾಶ ಸಿಗದಿದ್ದಾಗ ಆಟಗಾರರು ನಿರಾಶೆಗೊಳ್ಳುವುದು ಸಹಜ. ಆದರೆ, ಅವರನ್ನು ಇನ್ನಷ್ಟು ಶ್ರಮಿಸಲು ಪ್ರೋತ್ಸಾಹಿಸುವುದು ನಮ್ಮ ಗುರಿ.
ತಂಡದ ಆಯ್ಕೆ ಆಟಗಾರರಿಗೂ ಸವಾಲು.
ಮುಂದಿನ ಟಿ20 ವಿಶ್ವಕಪ್‌ಗೂ ಮುನ್ನ ಕೆಲವೇ ಪಂದ್ಯಗಳಿವೆ. ಈ ಒತ್ತಡದ ಸಮಯದಲ್ಲಿ ಆಟಗಾರರು ಹೇಗೆ ಆಡುತ್ತಾರೆ ಎಂಬುದನ್ನು ಪರೀಕ್ಷಿಸುತ್ತಿದ್ದೇವೆ. ಆಟಗಾರರ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ, ಪಂದ್ಯ ಗೆಲ್ಲುವುದಷ್ಟೇ ನಮ್ಮ ಗುರಿ ಎಂದರು.
ಅರ್ಷದೀಪ್ ಹೊರಗಿಟ್ಟಿದ್ದಕ್ಕೆ ಎದುರಾಗಿತ್ತು ಟೀಕೆ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಭಾರತದ ಸ್ಟಾರ್ ವೇಗಿ ಅರ್ಷ್‌ದೀಪ್ ಸಿಂಗ್ ಅವರನ್ನು ತಂಡದ ಮ್ಯಾನೇಜ್‌ಮೆಂಟ್ ಬೆಂಚ್ ಕಾಯಿಸಿತ್ತು. 100ಕ್ಕೂ ಹೆಚ್ಚು ಟಿ20 ವಿಕೆಟ್ ಪಡೆದ ಬೌಲರ್ ಅನ್ನು ಹೊರಗಿಟ್ಟಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದ್ದವು.