- Home
- Sports
- Cricket
- Merry Christmas 2021: ಧೋನಿಯಿಂದ ರೊನಾಲ್ಡೋವರೆಗೆ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸಿದ ಕ್ರೀಡಾ ತಾರೆಯರು..!
Merry Christmas 2021: ಧೋನಿಯಿಂದ ರೊನಾಲ್ಡೋವರೆಗೆ ಕುಟುಂಬದೊಂದಿಗೆ ಕ್ರಿಸ್ಮಸ್ ಆಚರಿಸಿದ ಕ್ರೀಡಾ ತಾರೆಯರು..!
ಬೆಂಗಳೂರು: ಇಡೀ ಜಗತ್ತೇ ಸಂಭ್ರಮಿಸುವ ಪವಿತ್ರ ಕ್ರಿಸ್ಮಸ್ ಹಬ್ಬವನ್ನು (Merry Christmas 2021) ಬರಮಾಡಿಕೊಳ್ಳಲಾಗಿದೆ. ಇನ್ನು ಕ್ರೀಡಾ ತಾರೆಯರಾದ ಮಹೇಂದ್ರ ಸಿಂಗ್ ಧೋನಿ (MS Dhoni), ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಆದಿಯಾಗಿ ಕ್ರೀಡಾ ತಾರೆಯರು ತಮ್ಮ ಕುಟುಂಬದೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ. ಚಿತ್ರಗಳಲ್ಲಿ ಕ್ರೀಡಾ ತಾರೆಯರ ಕ್ರಿಸ್ಮಸ್ ಹೀಗಿತ್ತು ನೋಡಿ.

ಕ್ರಿಸ್ಮಸ್ ವರ್ಷದ ಕೊನೆಯ ಅತ್ಯಂತ ಸಂಭ್ರಮದ ಕ್ಷಣಗಳಲ್ಲಿ ಒಂದು ಅಲ್ಲವೇ? ಶನಿವಾರ ಇಡೀ ಜಗತ್ತಿನಾದ್ಯಂತ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಕ್ರೀಡಾ ತಾರೆಯರು ಸಹ ಶುಕ್ರವಾರವೇ ಕ್ರಿಸ್ಮಸ್ ಈವ್ ಆಚರಿಸಿದ್ದಾರೆ. ಯಾವೆಲ್ಲಾ ಕ್ರೀಡಾತಾರೆಯರು ಕ್ರಿಸ್ಮಸ್ ಆಚರಿಸಿದ್ದಾರೆಂದು ನೋಡೋಣ ಬನ್ನಿ
ಮಹೇಂದ್ರ ಸಿಂಗ್ ಧೋನಿ
ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಕುಟುಂಬದೊಂದಿಗೆ ದುಬೈನಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ. ಧೋನಿ ಪತ್ನಿ ಸಾಕ್ಷಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡ ಡೈನಿಂಗ್ ಟೇಬಲ್ ಕ್ರಿಸ್ಮಸ್ ಫೀಲ್ ಬರುವತ್ತೆ ಅಲಂಕರಿಸಲಾಗಿತ್ತು. ಮೂಲೆಯಲ್ಲಿ ಧೋನಿ ಪುತ್ರಿ ಝಿವಾ ಸಾಂತಾ ಕ್ಲಾಸ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೋ
ಪೂರ್ಚುಗೀಸ್ ತಾರಾ ಫುಟ್ಬಾಲಿಗ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಸ್ಟ್ರೈಕರ್ಸ್ ಕ್ರಿಸ್ಟಿಯಾನೋ ರೊನಾಲ್ಡೋ ಮ್ಯಾಂಚೆಸ್ಟರ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿರುವ ತಮ್ಮ ಮನೆಯಲ್ಲಿಯೇ ಗರ್ಲ್ ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಹಾಗೂ ಮಕ್ಕಳ ಜತೆ ಕ್ರಿಸ್ಮಸ್ ಬರ ಮಾಡಿಕೊಂಡಿದ್ದಾರೆ. ಈ ಸಂಭ್ರಮದ ಕ್ಷಣದಲ್ಲಿ ರೊನಾಲ್ಡೋ ತಾಯಿ ಸೇರಿದಂತೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ.
ಕ್ರಿಸ್ ಗೇಲ್
ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್ ಹಾಗೂ ಸ್ವಯಂ ಘೋಷಿತ 'ಯೂನಿವರ್ಸಲ್ ಬಾಸ್' ಖ್ಯಾತಿಯ ಕ್ರಿಸ್ ಗೇಲ್ ಕೂಡಾ ವಿನೂತನ ರೀತಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ತಂದೆಯ ಜತೆ ದೊಡ್ಡ ಕ್ರಿಸ್ಮಸ್ ಟ್ರೀ ಎದುರು ಕುಳಿತು ಗೇಲ್ ಫೋಸ್ ಕೊಟ್ಟಿದ್ದಾರೆ.
ಯುಜುವೇಂದ್ರ ಚಹಲ್
ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಸದ್ಯ ತನ್ನ ಪತ್ನಿ ಧನಶ್ರೀ ವರ್ಮಾ ಜತೆ ಮಂಜಿನ ನಗರಿ ಗುಲ್ಮಾರ್ಗ್‌ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಮಂಜು ಬೀಳುತ್ತಿರುವ ಪ್ರದೇಶದಿಂದಲೇ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಲಿಯೋನೆಲ್ ಮೆಸ್ಸಿ
ಅರ್ಜಿಂಟೀನಾದ ಸೂಪರ್ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಕೂಡಾ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಂತೆ ಕಂಡು ಬಂದಿದೆ. ಲಿಯೋನೆಲ್ ಮೆಸ್ಸಿ ತಮ್ಮ ಪತ್ನಿ ಜತೆ ಕ್ರಿಸ್ಮಸ್ ಟ್ರೀ ಮುಂದೆ ನಿಂತುಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.