'ಹೆಂಡತಿ ಜತೆಗಿದ್ದರೇ..': ಆ್ಯಂಡ್ರೆ ರಸೆಲ್ ಪತ್ನಿಯ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು..!
ಬೆಂಗಳೂರು: ವೆಸ್ಟ್ ಇಂಡೀಸ್ ತಾರಾ ಆಲ್ರೌಂಡರ್ ಆ್ಯಂಡ್ರೆ ರಸೆಲ್, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಸೆಲ್ ಆಟ ಈ ಬಾರಿ ಮಂಕಾಗಿದೆ. ಇದೆಲ್ಲದರ ನಡುವೆ ಮಡದಿ ಲೋರಾ ರಸೆಲ್ ಬಗ್ಗೆ ಕೆಕೆಆರ್ ತಾರಾ ಆಟಗಾರ ರಸೆಲ್ ಹೇಳಿದ್ದೇನು?, ಯಾರು ಈ ಲೋರಾ ರಸೆಲ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 335 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 17 ವಿಕೆಟ್ ಕಬಳಿಸಿ ಮಿಂಚಿದ್ದರು.
ಆದರೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆ್ಯಂಡ್ರೆ ರಸೆಲ್, ಕೊಂಚ ಮೊನಚು ಕಳೆದುಕೊಂಡಂತೆ ಕಂಡು ಬರುತ್ತಿದ್ದು, ಬ್ಯಾಟಿಂಗ್‌ನಲ್ಲಾಗಲಿ ಅಥವಾ ಬೌಲಿಂಗ್‌ನಲ್ಲಿ ಇಲ್ಲಿಯವರೆಗೂ ಅಂತಹ ಪ್ರದರ್ಶನ ತೋರಿಲ್ಲ.
ರಸೆಲ್‌ಗೆ ಪತ್ನಿ ಲೋರಾ ರಸೆಲ್ ಮೈದಾನದಲ್ಲಿ ಸಾಥ್ ನೀಡುತ್ತಾ ಬಂದಿದ್ದಾರೆ. ಆ್ಯಂಡ್ರೆ ರಸೆಲ್ 2016ರಲ್ಲಿ ಜೆಸ್ಸ್ಯಾಂ ಲೋರಾ ಅವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಆಲಿಯಾ ರಸೆಲ್ ಎನ್ನುವ ಮುದ್ದಾದ ಮಗಳಿದ್ದಾಳೆ.
ಆ್ಯಂಡ್ರೆ ರಸೆಲ್ ಅವರ ಪತ್ನಿ ಜೆಸ್ಸ್ಯಾಂ ಲೋರಾ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತ ಹೆಸರಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಜೆಸ್ಸ್ಯಾಂ ಲೋರಾ ಅವರಿಗೆ 3.75 ಲಕ್ಷ ಫಾಲೋವರ್ಸ್ ಇದ್ದು, ಅವರ ಅಕೌಂಟ್ ವೇರಿಫೈಡ್ ಆಗಿದೆ.
ನನ್ನ ಹೆಂಡತಿ ನನ್ನ ಜತೆಗಿದ್ದರೆ, ನಾನು ಬ್ಯಾಟಿಂಗ್ ಹಾಗೂ ಬೌಲಿಂಗ್ ಚೆನ್ನಾಗಿ ಮಾಡುತ್ತೇನೆ. ಅವರೇ ನನ್ನ ಯಶಸ್ಸಿನ ಪಿಲ್ಲರ್ ಎಂದು ಸ್ವತಃ ಆ್ಯಂಡ್ರೆ ರಸೆಲ್ ಸಂದರ್ಶನವೊಂದರಲ್ಲಿ ಪತ್ನಿಯ ಗುಣಗಾನ ಮಾಡಿದ್ದರು.
ಆ್ಯಂಡ್ರೆ ರಸೆಲ್ ಐಪಿಎಲ್ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳಲ್ಲಿ ಲೀಗ್ ಮಾದರಿಯ ಕ್ರಿಕೆಟ್ ಆಡುತ್ತಾರೆ. ರಸೆಲ್ ಆಡಲು ಹೋದಾಗ ಜೆಸ್ಸ್ಯಾಂ ಲೋರಾ ಸ್ಟೇಡಿಯಂಗೆ ಬಂದು, ಸ್ಟ್ಯಾಂಡ್‌ನಲ್ಲಿ ನಿಂತು ಪತಿಯನ್ನು ಚೆನ್ನಾಗಿ ಆಡಲು ಹುರಿದುಂಬಿಸುತ್ತಾ ಬಂದಿದ್ದಾರೆ.
ಬಿಡುವಿನ ಸಮಯವನ್ನು ಈ ಜೋಡಿ ಸಕ್ಕತ್ತಾಗಿಯೇ ಎಂಜಾಯ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರು ಜೆಸ್ಸ್ಯಾಂ ಲೋರಾ, ಹೊಸ ಹೊಸ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ.