T20 World Cup: ಟೀಮ್ ಇಂಡಿಯಾಗೆ ಶಾಕಿಂಗ್ ನ್ಯೂಸ್; ಮೊದಲ ಪಂದ್ಯದಿಂದ ಪ್ರಮುಖ ಆಟಗಾರ ಔಟ್
ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತವು ಅಮೆರಿಕವನ್ನು ಎದುರಿಸಲಿದೆ. ಆದರೆ, ವೈರಲ್ ಜ್ವರದಿಂದಾಗಿ ಪ್ರಮುಖ ವೇಗದ ಬೌಲರ್ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಗಾಯದಿಂದ ಹೊರಗುಳಿದಿದ್ದು, ತಂಡವು ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದೆ.

ಐಸಿಸಿ ಟಿ20 ವಿಶ್ವಕಪ್
ಅಮೆರಿಕ ತಂಡದ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಆಟವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾಗೆ ದೊಡ್ಡ ಸವಾಲು ಎದುರಾಗಿದ್ದು, ಪ್ರಮುಖ ಆಟಗಾರ ಪಂದ್ಯದಿಂದ ಹೊರಗುಳಿಯಲಿದ್ದಾರೆ. ವೈರಲ್ ಫೀವರ್‌ನಿಂದ ವೇಗದ ಬೌಲರ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಜಸ್ಪ್ರೀತ್ ಬುಮ್ರಾಗೆ ಜ್ವರ
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದ ಪ್ರಕಾರ, ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರು ತರಬೇತಿ ಅವಧಿಯಲ್ಲಿ ಬುಮ್ರಾ ಭಾಗವಹಿಸಿದ್ದರು. ಆದ್ರೆ ಅಭ್ಯಾಸ ಪಂದ್ಯದ ವೇಳೆ ಬುಮ್ರಾ ಭಾಗವಹಿಸಿರಲಿಲ್ಲ. ಜಸ್ಪ್ರೀತ್ ಬುಮ್ರಾ ಜ್ವರದಿಂದ ಬಳಲುತ್ತಿದ್ದಾರೆ.
13 ಸಂಪೂರ್ಣ ಫಿಟ್ ಆಟಗಾರರ ತಂಡ
ಸದ್ಯ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಕೇವಲ 13 ಸಂಪೂರ್ಣ ಫಿಟ್ ಆಟಗಾರರ ತಂಡವನ್ನು ಹೊಂದಿದೆ. ಫಿಟ್‌ನೆಸ್ ಕ್ಲಿಯರೆನ್ಸ್ ಸಿಗದ ಹಿನ್ನೆಲೆ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇನ್ನು ಟೀಂ ಇಂಡಿಯಾವನ್ನು ಸೇರಿಕೊಂಡಿಲ್ಲ. ವರದಿಗಳ ಪ್ರಕಾರ, ವಾಷಿಂಗ್ಟನ್ ಸುಂದರ್ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಕ್ಲಿಯರೆನ್ಸ್‌ಗಾಗಿ ಕಾಯುತ್ತಿದ್ದಾರೆ.
ಟೀಮ್ ಇಂಡಿಯಾ ವೇಗದ ಬೌಲರ್ ಹರ್ಷಿತ್ ರಾಣಾ
ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ಸಮಯದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾ ವೇಗದ ಬೌಲರ್ ಹರ್ಷಿತ್ ರಾಣಾ ಸಹ ಪಂದ್ಯದಿಂದ ಹೊರಗುಳಿದಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಹರ್ಷಿತ್ ರಾಣಾ ಅವರನ್ನು ಸದ್ಯ ಪಂದ್ಯಾವಳಿಗೆ ಅನರ್ಹ ಎಂದು ಹೇಳಿದೆ. ಹಾಗಾಗಿ ಟೀಂ ಇಂಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಹರ್ಷಿತ್ ರಾಣಾ ಬದಲಿಗೆ ಮೊಹಮ್ಮದ್ ಸಿರಾಜ್ ಬಂದಿದ್ದು, ಇಂದಿನ ಪಂದ್ಯ ಆಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: U19 World Cup, ಟೀಮ್ ಇಂಡಿಯಾ ಆಟಗಾರರಿಗೆ ICC ಯಿಂದ ಸಿಗ್ತಿಲ್ಲ ಒಂದೇ ಒಂದು ರೂಪಾಯಿ!
ಟೀಂ ಇಂಡಿಯಾ ಸಂಭಾವ್ಯ ಆಟಗಾರರು
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲದೀಪ್ ಚಕ್ರಬೋರ್ತಿ, ವರುಣ್‌ಶ್‌ಮಿಂಗ್ಟನ್ ಸಿದರ್, ವರುಣ್‌ಶ್‌ಮಿಂಗ್ಟನ್ ಯಾದವ್
ಇದನ್ನೂ ಓದಿ: ಟಿ20 ವಿಶ್ವಕಪ್: 20 ತಂಡಗಳ ಕದನದಲ್ಲಿ ಯಾರಾಗ್ತಾರೆ ಬಾಸ್?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

