- Home
- Sports
- Cricket
- Vaibhav Suryavanshi: ವೈಭವ್ ಸೂರ್ಯವಂಶಿಗೆ 500 Missed Call; ಖಡಕ್ ವಾರ್ನಿಂಗ್ ಕೊಟ್ಟ ರಾಹುಲ್ ದ್ರಾವಿಡ್
Vaibhav Suryavanshi: ವೈಭವ್ ಸೂರ್ಯವಂಶಿಗೆ 500 Missed Call; ಖಡಕ್ ವಾರ್ನಿಂಗ್ ಕೊಟ್ಟ ರಾಹುಲ್ ದ್ರಾವಿಡ್
ಐಪಿಎಲ್‌ನಲ್ಲಿ ಎಲ್ಲರ ಗಮನ ಸೆಳೆದ 14 ವರ್ಷದ ವೈಭವ್ ಸೂರ್ಯವಂಶಿ ಪ್ರತಿಭೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಪಂಜಾಬ್ ಕಿಂಗ್ಸ್‌ನ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ಗೆ, ವೈಭವ್ ಕೇವಲ 38 ಎಸೆತಗಳಲ್ಲಿ 101 ರನ್‌ಗಳ ಚೊಚ್ಚಲ IPL ಶತಕವನ್ನು ಗಳಿಸಿ, ಇತಿಹಾಸ ನಿರ್ಮಿಸಿದ್ದರು. ಈ ಸಾಧನೆಯೊಂದಿಗೆ ಅವರು IPLನ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈಗ ಇವರಿಗೆ ರಾಹುಲ್ ದ್ರಾವಿಡ್ ಒಂದು ಎಚ್ಚರಿಕೆ ಕೊಟ್ಟಿದ್ದಾರಂತೆ.

ಈಗ IPL ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಟ ಮುಕ್ತಾಯಗೊಂಡಿದ್ದರೂ, ವೈಭವ್ ಸೂರ್ಯವಂಶಿಯ ಜನಪ್ರಿಯತೆ ಮಾತ್ರ ಹೆಚ್ಚುತ್ತಲೇ ಇದೆ. ತಮ್ಮ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಮುಕ್ತ ಸಂಭಾಷಣೆಯಲ್ಲಿ, ಶತಕ ಬಾರಿಸಿದ ಬಳಿಕ 500ಕ್ಕೂ ಹೆಚ್ಚು ಮಿಸ್ಡ್ ಕಾಲ್‌ಗ ಬಂತು, ಆದರೆ ನಾನು ಫೋಕಸ್ ಆಗಿರಲು ಪ್ರಯತ್ನಪಡ್ತಿದ್ದೀನಿ ಎಂದು ಅವರು ಹೇಳಿದ್ದಾರೆ.
"ನಾನು ಕಳೆದ 3-4 ವರ್ಷಗಳಿಂದ ಕ್ರಿಕೆಟ್ ತಯಾರಿ ಮಾಡುತ್ತಿದ್ದೇನೆ. ಆ ಶ್ರಮಕ್ಕೆ ಫಲವೂ ಸಿಕ್ಕಿದೆ. ನನ್ನಲ್ಲಿ ಏನೇನು ಕೊರತೆಯಿತ್ತೋ, ಅದನ್ನು ಸರಿಪಡಿಸಿಕೊಂಡಿದ್ದೇನೆ. ಕಷ್ಟ ಆಗಿದ್ದೆಲ್ಲವೂ ಈಗ ಸುಲಭ ಆಗಿದೆ. ಫೋಕಸ್ ಮಾಡೋದು ಎಷ್ಟು ಕಷ್ಟ ಅಂತ ನನಗೆ ಅರ್ಥ ಆಗಿದೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಡಬೇಕು. ಇದಕ್ಕೆ ಒಂದಿಷ್ಟು ಪ್ರಯತ್ನ ಹಾಕೋ ಬದಲು, ನನಗೆ ಯಾವುದೋ ಆಗತ್ತೋ ಅಲ್ಲಿ ಆಟ ಆಡಿ ತಂಡವನ್ನು ಗೆಲ್ಲಿಸಬೇಕು" ಎಂದು ವೈಭವ್ ಹೇಳಿದ್ದಾರೆ.
"ನಾನು ಐಪಿಲ್‌ನಲ್ಲಿ ಶತಕ ಬಾರಿಸಿದ ಬಳಿಕ 500ಕ್ಕೂ ಹೆಚ್ಚು ಮಿಸ್ಡ್ ಕಾಲ್ ಬಂತು. ಹೀಗಾಗಿ ನಾಲ್ಕು ದಿನ ಫೋನ್ ಸ್ವಿಚ್ ಆಫ್ ಮಾಡಿದ್ದೆ. ಜನರು ನನ್ನನ್ನು ಕಾಂಟ್ಯಾಕ್ಟ್ ಮಾಡಲು ನೋಡಿದರು. ಆದರೆ ನನಗೆ ತುಂಬ ಜನರ ಮಧ್ಯೆ ಇರೋಕೆ ಇಷ್ಟವೇ ಇಲ್ಲ. ನಾನು ನನ್ನ ಕುಟುಂಬ, ಕೆಲವು ಆಪ್ತರ ಜೊತೆ ಇರೋಕೆ ಇಷ್ಟಪಡ್ತೀನಿ” ಎಂದು ಹೇಳಿದ್ದಾರೆ.
IPL ಟೀಂನಲ್ಲಿ ಆಡಿದ ಬಳಿಕ ವೈಭವ್ ತಮ್ಮ ಮುಂದಿನ ಕ್ರಿಕೆಟ್ ಆಟಕ್ಕೋಸ್ಕರ ರೆಡಿ ಆಗುತ್ತಿದ್ದಾರೆ. ಈಗಾಗಲೇ ಭಾರತದ ಅಂಡರ್-19 ತಂಡದಲ್ಲಿ 'ಟೆಸ್ಟ್' ಪಂದ್ಯಗಳನ್ನು ಆಡಿರುವ ವೈಭವ್, ಮುಂದಿನ ತಿಂಗಳು ಇಂಗ್ಲೆಂಡ್‌ಗೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಭಾರತದ ಅಂಡರ್-19 ಟೀಂ, ಇಂಗ್ಲೆಂಡ್‌ನ ಅಂಡರ್-19 ತಂಡದ ವಿರುದ್ಧ ಐದು 50-ಓವರ್ ಪಂದ್ಯಗಳಿವೆ. ಅಲ್ಲಿ ಮೂರು ನಾಲ್ಕು-ದಿನದ ಪಂದ್ಯಗಳನ್ನು ಆಡಬೇಕು. ಇದು ವೈಭವ್‌ಗೆ ಒಳ್ಳೆಯ ಅನುಭವ ನೀಡುವುದು. ಹೀಗಾಗಿ ಮುಂದಿನ ವರ್ಷ IPL ಟೀಂನಲ್ಲಿ ಆಡುವಾಗ ವೈಭವ್‌ಗೆ ಎದುರಾಳಿ ಬೌಲರ್‌ಳು ಟಾರ್ಗೆಟ್ ಮಾಡುತ್ತಾರೆ, ಎಚ್ಚರಿಕೆಯಿಂದ ಆಡಬೇಕು ಎಂದು ರಾಹುಲ್ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.
"ಈ ರೀತಿಯೇ ಆಡುವುದನ್ನು ಮುಂದುವರಿಸಿ, ಚೆನ್ನಾಗಿ ತರಬೇತಿ ಪಡೆಯಿರಿ. ಆದರೆ ಮುಂಬರುವ ವರ್ಷ ಎದುರಾಳಿ ಬೌಲರ್‌ಗಳು ಹೆಚ್ಚಿನ ತಯಾರಿ ಮಾಡಿಕೊಂಡು ಬರುತ್ತಾರೆ ಎನ್ನೋದನ್ನು ಮರೆಯಬೇಡಿ. ಆದ್ದರಿಂದ ನಾವೂ ಹೆಚ್ಚಿನ ತಯಾರಿ ಮಾಡಬೇಕು, ಕಠಿಣ ಪರಿಶ್ರಮ ಹಾಕಬೇಕು, ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ರಾಹುಲ್ ದ್ರಾವಿಡ್ ಅವರು ಸಲಹೆ ನೀಡಿದ್ದಾರೆ.