MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2021: CSK ವಿರುದ್ದದ ಪಂದ್ಯಕ್ಕೆ RCB ತಂಡದಲ್ಲಿಂದು ಒಂದು ಮಹತ್ವದ ಬದಲಾವಣೆ..?

IPL 2021: CSK ವಿರುದ್ದದ ಪಂದ್ಯಕ್ಕೆ RCB ತಂಡದಲ್ಲಿಂದು ಒಂದು ಮಹತ್ವದ ಬದಲಾವಣೆ..?

ಶಾರ್ಜಾ: ವಿರಾಟ್ ಕೊಹ್ಲಿ(Virat Kohli) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(‌Royal Challengers Bangalore) ತಂಡವಿಂದು ಶಾರ್ಜಾ ಮೈದಾನದಲ್ಲಿ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌(CSK) ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೆ ಸಜ್ಜಾಗಿದೆ. ಶಾರ್ಜಾ ಮೈದಾನದಲ್ಲಿಂದು ರನ್‌ ಮಳೆ ನಿರೀಕ್ಷಿಸಲಾಗಿದೆ. ಕೆಕೆಆರ್ ಎದುರು ಆಘಾತಕಾರಿ ಸೋಲು ಕಂಡಿರುವ ಆರ್‌ಸಿಬಿ ತಂಡವಿಂದು ಚೆನ್ನೈ ಎದುರಿನ ಪಂದ್ಯಕ್ಕೆ 1 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಶಾರ್ಜಾದಲ್ಲಿ ನಡೆಯಲಿರುವ ಸಿಎಸ್‌ಕೆ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ:

2 Min read
Author : Suvarna News | Asianet News
Published : Sep 24 2021, 03:18 PM IST
Share this Photo Gallery
  • FB
  • TW
  • Linkdin
  • Whatsapp
111
1. ದೇವದತ್ ಪಡಿಕ್ಕಲ್‌

1. ದೇವದತ್ ಪಡಿಕ್ಕಲ್‌

ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌ ಚೆನ್ನೈ ಎದುರು ಉತ್ತಮ ಆರಂಭವನ್ನು ಒದಗಿಸಿಕೊಡಬೇಕಿದೆ. ಪಡಿಕ್ಕಲ್‌ ಮೇಲೆ ಆರ್‌ಸಿಬಿ ಅಭಿಮಾನಿಗಳು ದೊಡ್ಡ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

211
2. ವಿರಾಟ್ ಕೊಹ್ಲಿ

2. ವಿರಾಟ್ ಕೊಹ್ಲಿ

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ದೊಡ್ಡ ಮೊತ್ತ ಗಳಿಸಲು ಪದೇ ಪದೇ ಎಡವುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಾದರೂ ನಾಯಕ ವಿರಾಟ್ ಕೊಹ್ಲಿ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

311
3. ಶ್ರೀಕರ್ ಭರತ್

3. ಶ್ರೀಕರ್ ಭರತ್

ಆರ್‌ಸಿಬಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌. ಕೆಕೆಆರ್ ಎದುರಿನ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.

411
4. ಗ್ಲೆನ್‌ ಮ್ಯಾಕ್ಸ್‌ವೆಲ್‌

4. ಗ್ಲೆನ್‌ ಮ್ಯಾಕ್ಸ್‌ವೆಲ್‌

ಆರ್‌ಸಿಬಿ ಸ್ಟಾರ್ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೆಕೆಆರ್ ಎದುರಿನ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದರು. ಶಾರ್ಜಾ ಅತ್ಯಂತ ಚಿಕ್ಕ ಮೈದಾನವಾಗಿದ್ದರಿಂದ ಮ್ಯಾಕ್ಸ್‌ವೆಲ್ ದೊಡ್ಡ ಮೊತ್ತ ಗಳಿಸುವ ಸಾಧ್ಯತೆಯಿದೆ

511
5. ಎಬಿ ಡಿವಿಲಿಯರ್ಸ್‌

5. ಎಬಿ ಡಿವಿಲಿಯರ್ಸ್‌

ಆರ್‌ಸಿಬಿ ಪಾಲಿನ ಆಪತ್ಭಾಂದವ. ಕೆಕೆಆರ್ ಎದುರಿನ ಪಂದ್ಯದಲ್ಲಿ ಶೂನ್ಯ ಸುತ್ತಿ ನಿರಾಸೆ ಮೂಡಿಸಿದ್ದ ಎಬಿಡಿ, ಶಾರ್ಜಾ ಮೈದಾನದಲ್ಲಿ ರನ್‌ ಮಳೆ ಹರಿಸಲಿದ್ದಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ

611
6. ವನಿಂದು ಹಸರಂಗ

6. ವನಿಂದು ಹಸರಂಗ

ಲಂಕಾ ಸ್ಟಾರ್ ಆಲ್ರೌಂಡರ್ ಹಸರಂಗ, ಆರ್‌ಸಿಬಿ ಪರ ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದರು. ಇಂದಿನ ಪಂದ್ಯದಲ್ಲಿ ಹಸರಂಗ ತಮ್ಮ ಕೈಚಳಕ ತೋರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

711
7. ಮೊಹಮ್ಮದ್ ಅಜರುದ್ದೀನ್‌

7. ಮೊಹಮ್ಮದ್ ಅಜರುದ್ದೀನ್‌

ಆರ್‌ಸಿಬಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌. ಸಚಿನ್‌ ಬೇಬಿ ಬದಲಿಗೆ ಇಂದು ಮೊಹಮ್ಮದ್ ಅಜರುದ್ದೀನ್‌ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

811
8. ಕೈಲ್ ಜೇಮಿಸನ್‌

8. ಕೈಲ್ ಜೇಮಿಸನ್‌

ಕಿವೀಸ್‌ ಮೂಲದ ವೇಗದ ಬೌಲರ್ ಕೈಲ್ ಜೇಮಿಸನ್‌ ಕೆಕೆಆರ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಜೇಮಿಸನ್ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. 

911
9. ಹರ್ಷಲ್‌ ಪಟೇಲ್‌

9. ಹರ್ಷಲ್‌ ಪಟೇಲ್‌

ಹರ್ಷಲ್‌ ಪಟೇಲ್‌ ಆರ್‌ಸಿಬಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದು, ಯುಎಇ ಚರಣದಲ್ಲೂ ವಿರಾಟ್ ಪಡೆ ಗೆಲುವಿನಲ್ಲಿ ಹರ್ಷಲ್‌ ಪಟೇಲ್‌ ಪ್ರಮುಖ ಪಾತ್ರವನ್ನು ನಿಭಾಯಿಸಬೇಕಾಗಿದೆ

1011
10. ಮೊಹಮ್ಮದ್ ಸಿರಾಜ್‌

10. ಮೊಹಮ್ಮದ್ ಸಿರಾಜ್‌

ಆರ್‌ಸಿಬಿ ವೇಗದ ಬೌಲರ್ ಸಿರಾಜ್ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ತೋರಿದ್ದರು. ಆದರೆ ವಿಕೆಟ್ ಕಬಳಿಸಲು ವಿಫಲವಾಗಿದ್ದರು. ಬೌಲಿಂಗ್‌ನಲ್ಲಿ ಸಿರಾಜ್ ಮೊನಚಾದ ದಾಳಿ ನಡೆಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

1111
11. ಯುಜುವೇಂದ್ರ ಚಹಲ್‌

11. ಯುಜುವೇಂದ್ರ ಚಹಲ್‌

ಆರ್‌ಸಿಬಿ ಸ್ಪಿನ್‌ ಬೌಲಿಂಗ್ ಅಸ್ತ್ರ. ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರೂ ಸಹಾ ಯಾವುದೇ ಸಂದರ್ಭದಲ್ಲಿ ಸಹಾ ಬೇಕಾದರೂ ವಿಕೆಟ್ ಕಬಳಿಸಿ ಆರ್‌ಸಿಬಿಗೆ ಮುನ್ನಡೆ ಒದಗಿಸಿಕೊಡಬಲ್ಲ ಬೌಲರ್.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?
Recommended image2
ಭ್ರಮನಿರಸನಗೊಂಡ ಕರ್ನಾಟಕ, ರಣಜಿ ಕಿರೀಟ ಗೆದ್ದು ಭಾರತದ ಹೊಸ ಕ್ರಿಕೆಟ್ ರಾಜನಾದ ಜಮ್ಮು-ಕಾಶ್ಮೀರ!
Recommended image3
ಸ್ಮೃತಿ ಮಂಧನಾ ಜತೆ ಬ್ರೇಕ್‌ಅಪ್; ಪಲಾಶ್ ಮುಚ್ಚಲ್ ಒಳ್ಳೆಯ ವ್ಯಕ್ತಿ ಎಂದ ಬಾಲಿವುಡ್ ನಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved