IPL 2021: ಕ್ರಿಕೆಟಿಗರನ್ನು ಮದುವೆಯಾಗಿ ಬಾಲಿವುಡ್ಗೆ ಬಾಯ್ ಹೇಳಿದ ನಟಿಯರು!
ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧ ವರ್ಷಗಳಷ್ಟು ಹಳೆಯದು. ಸಾಮಾನ್ಯವಾಗಿ ಕ್ರಿಕೆಟಿಗರ ಹೆಸರುಗಳು ಬಾಲಿವುಡ್ ನಾಯಕಿಯರೊಂದಿಗೆ ಕೇಳಿಬರುತ್ತವೆ. ಅನೇಕ ಆಟಗಾರರು ಪ್ರಸಿದ್ಧ ಬಾಲಿವುಡ್(Bollywood) ನಟಿಯರನ್ನು(Actress) ಮದುವೆಯಾಗಿದ್ದಾರೆ. ಕ್ರಿಕೆಟಿಗರನ್ನು ಮದುವೆಯಾದ(Marriage) ನಂತರ ಕೆಲಸ ನಿಲ್ಲಿಸಿದ ಕೆಲವು ಬಾಲಿವುಡ್ ನಟಿಯರಿದ್ದಾರೆ. ಹಾಗೇ ಮದುವೆಯ ನಂತರ ಬಾಲಿವುಡ್ಗೆ ಗುಡ್ ಬಾಯ್ ಹೇಳಿದ ನಟಿಯರು ಇವರು.
ಗೀತಾ ಬಸ್ರಾ: ಬಾಲಿವುಡ್ ನಟಿ ಗೀತಾ ಬಸ್ರಾ 2015 ರಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ವಿವಾಹವಾದರು. ಗೀತಾ ಇತ್ತೀಚೆಗೆ 10 ನೇ ಜುಲೈನಲ್ಲಿ ಜೋವನ್ ವೀರ್ ಸಿಂಗ್ ಪ್ಲಾಹಾ ಎಂಬ ಮಗುವಿಗೆ ಜನ್ಮ ನೀಡಿದರು. ಅವರು 2016 ರಲ್ಲಿ ಮಗಳು ಹಿನಯಾಗೆ ಜನ್ಮ ನೀಡಿದ್ದರು. ವೋ ಅಜ್ನಬೀ ಹಾಡಿನೊಂದಿಗೆ ಪ್ರಸಿದ್ಧವಾದ ಗೀತಾ ಕೊನೆಯ ಬಾರಿಗೆ 2016ರಲ್ಲಿ ಬಿಡುಗಡೆಯಾದ ಪಂಜಾಬಿ ಸಿನಿಮಾದಲ್ಲಿ(Cinema) ಕಾಣಿಸಿಕೊಂಡಿದ್ದರು. ಅಂದಿನಿಂದ, ಅವರು ಚಲನಚಿತ್ರ ಪ್ರಪಂಚದಿಂದ ದೂರ ಉಳಿದಿದ್ದಾರೆ.
ನತಾಶಾ ಸ್ಟ್ಯಾಂಕೋವಿಕ್: ಸತ್ಯಾಗ್ರಹ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ನತಾಶಾ ಸ್ಟ್ಯಾಂಕೋವಿಕ್ ಮದುವೆಯ ನಂತರ ತಾಯಿ ಮತ್ತು ಪತ್ನಿಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅವರು ಅನೇಕ ರಿಯಾಲಿಟಿ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡರು. ಆದರೆ ಕಳೆದ ವರ್ಷ COVID-19 ಮೊದಲ ಲಾಕ್ಡೌನ್ ಸಮಯದಲ್ಲಿ ಅವರು ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ವಿವಾಹವಾದರು. ಪ್ರಸ್ತುತ ನತಾಶಾ ಮತ್ತು ಹಾರ್ದಿಕ್ ಗೆ ಅಗಸ್ತ್ಯ ಎಂಬ ಮಗನಿದ್ದಾನೆ.
ಸಾಗರಿಕಾ ಘಾಟ್ಗೆ: ಶಾರುಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ಚಕ್ ದೇ ಇಂಡಿಯಾ ಹುಡುಗಿ ಸಾಗರಿಕಾ ಘಾಟ್ಗೆ 2017 ರಲ್ಲಿ ಜಹೀರ್ ಖಾನ್ ಅವರನ್ನು ವಿವಾಹವಾದರು. ನಂತರ ಅವರು ಬೆಳ್ಳಿತೆರೆಗೆ ವಿದಾಯ ಹೇಳಿದರು.
ಅನುಷ್ಕಾ ಶರ್ಮಾ- ಧನಶ್ರೀ ವರ್ಮಾ:IPL ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ನೋಡಿ!
ಹೇಜೆಲ್ ಕೀಚ್: ಬಾಡಿಗಾರ್ಡ್ ಸಿನಿಮಾದ ನಟಿ ಹೇಜೆಲ್ ಕೀಚ್ 2016 ರಲ್ಲಿ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು. ಮದುವೆಯ ನಂತರ, ಅವರು ನಟನೆಯನ್ನು ತೊರೆದರು. ಅವರ ಕೊನೆಯ ಚಿತ್ರ 2016 ರಲ್ಲಿ ಬಿಡುಗಡೆಯಾದ ಬಾಂಕೀ ಕಿ ಕ್ರೇಜಿ ಬಾರಾತ್.
ಸಂಗೀತಾ ಬಿಜ್ಲಾನಿ: 90 ರ ದಶಕದ ಪ್ರಸಿದ್ಧ ನಟಿ ಸಂಗೀತಾ ಬಿಜಲಾನಿ 1996 ರಲ್ಲಿ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ವಿವಾಹವಾದರು. ಸಂಗೀತಾ ಕೊನೆಯದಾಗಿ ಮಿಥುನ್ ಚಕ್ರವರ್ತಿ ಜೊತೆ ನಿರ್ಭಯ್ ಸಿನಿಮಾದಲ್ಲಿ ಕೆಲಸ ಮಾಡಿದರು. ಅದರ ನಂತರ ಅವರು ಚಲನಚಿತ್ರ ಪ್ರಪಂಚವನ್ನು ತೊರೆದರು. ಆದಾಗ್ಯೂ, ಸಂಗೀತಾ ಮತ್ತು ಅಜರುದ್ದೀನ್ 2010 ರಲ್ಲಿ ವಿಚ್ಛೇದನ ಪಡೆದರು.