MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಭಾರತ-ಇಂಗ್ಲೆಂಡ್ ಎರಡನೇ ಟಿ20 ಮ್ಯಾಚ್ ಆರಂಭ ರಾತ್ರಿ 10 ಗಂಟೆಗೆ ಅಲ್ಲ! ಟೀಂ ಇಂಡಿಯಾ ಫ್ಯಾನ್ಸ್‌ಗಾಗಿ ಈ ಸಮಯಕ್ಕೆ ಮ್ಯಾಚ್ ಸ್ಟಾರ್ಟ್

ಭಾರತ-ಇಂಗ್ಲೆಂಡ್ ಎರಡನೇ ಟಿ20 ಮ್ಯಾಚ್ ಆರಂಭ ರಾತ್ರಿ 10 ಗಂಟೆಗೆ ಅಲ್ಲ! ಟೀಂ ಇಂಡಿಯಾ ಫ್ಯಾನ್ಸ್‌ಗಾಗಿ ಈ ಸಮಯಕ್ಕೆ ಮ್ಯಾಚ್ ಸ್ಟಾರ್ಟ್

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲ ಟಿ20 ಪಂದ್ಯವು ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡನೇ ಮ್ಯಾಚ್ ಆರಂಭದ ಸಮಯ ಬದಲಾಗಿದೆ. 

2 Min read
Author : Naveen Kodase
Published : Jul 02 2026, 11:32 AM IST
Share this Photo Gallery
  • FB
  • TW
  • Linkdin
  • Whatsapp
16
ಎರಡನೇ ಟಿ20 ಮ್ಯಾಚ್ ಜುಲೈ 04ರಂದು ಆರಂಭ
Image Credit : ANI

ಎರಡನೇ ಟಿ20 ಮ್ಯಾಚ್ ಜುಲೈ 04ರಂದು ಆರಂಭ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಚಿತ್ತ ಎರಡನೇ ಟಿ20 ಮ್ಯಾಚ್ ಮೇಲೆ ನೆಟ್ಟಿದೆ. ಎರಡನೇ ಟಿ20 ಮ್ಯಾಚ್ ಜುಲೈ 04ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೊರ್ಡ್ ಮೈದಾನದಲ್ಲಿ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎರಡನೇ ಮ್ಯಾಚ್ ಕೊಂಚ ಮುಂಚಿತವಾಗಿ ಆರಂಭ
Image Credit : Getty

ಎರಡನೇ ಮ್ಯಾಚ್ ಕೊಂಚ ಮುಂಚಿತವಾಗಿ ಆರಂಭ

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡವು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನು ಮೊದಲ ಟಿ20 ಮ್ಯಾಚ್ ಭಾರತೀಯ ಕಾಲಮಾನ ರಾತ್ರಿ 10 ಗಂಟೆಯಿಂದ ಆರಂಭವಾಗಿತ್ತು. ಆದರೆ ಎರಡನೇ ಟಿ20 ಪಂದ್ಯವು ಭಾರತೀಯ ಅಭಿಮಾನಿಗಳಿಗೋಸ್ಕರ ಕೊಂಚ ಮುಂಚಿತವಾಗಿಯೇ ಆರಂಭವಾಗಲಿದೆ.

Related Articles

Related image1
'ಸುಮ್ನೆ ಎಕ್ಸಾಂಗೆ ರೆಡಿಯಾಗು, ಗಲ್ಲಿ ಕ್ರಿಕೆಟ್ ಆಡು': ದೊಡ್ಡ ಕನಸು ಕಾಣುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾಕೆ?
Related image2
'ನನಗ್ಯಾವ....' ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ವ್ಯಂಗ್ಯ? ಹೀಗ್ಯಾಕೆ ಅಂದ್ರು ಟೀಂ ಇಂಡಿಯಾ ಕ್ಯಾಪ್ಟನ್?
36
ಎರಡನೇ ಟಿ20 ಮ್ಯಾಚ್ ಸಂಜೆ 7 ಗಂಟೆಗೆ ಆರಂಭ
Image Credit : X

ಎರಡನೇ ಟಿ20 ಮ್ಯಾಚ್ ಸಂಜೆ 7 ಗಂಟೆಗೆ ಆರಂಭ

ಹೌದು, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಮ್ಯಾಚ್ ಹಗಲು ರಾತ್ರಿಯ ಮ್ಯಾಚ್ ಆಗಿತ್ತು. ಈ ಕಾರಣಕ್ಕಾಗಿಯೇ ಪಂದ್ಯ ರಾತ್ರಿ 10 ಗಂಟೆಗೆ ಆರಂಭವಾಗಿತ್ತು. ಆದರೆ ಎರಡನೇ ಟಿ20 ಮ್ಯಾಚ್ ಇಂಗ್ಲೆಂಡ್‌ನಲ್ಲಿ ಹಗಲಿನಲ್ಲಿಯೇ ನಡೆಯಲಿದೆ. ಹೀಗಾಗಿ ಎರಡನೇ ಟಿ20 ಮ್ಯಾಚ್ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇನ್ನು ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

46
ಭಾರತೀಯ ಫ್ಯಾನ್ಸ್‌ಗಾಗಿ ಈ ನಿರ್ಧಾರ
Image Credit : Getty

ಭಾರತೀಯ ಫ್ಯಾನ್ಸ್‌ಗಾಗಿ ಈ ನಿರ್ಧಾರ

ಹೌದು, ಇಂಗ್ಲೆಂಡ್‌ನಲ್ಲಿ ಟಿ20 ಮ್ಯಾಚ್ ಡೇ ಅಂಡ್ ನೈಟ್‌ ಆಯೋಜಿಸಿದರೆ ರಾತ್ರಿ 10 ಗಂಟೆಗೆ ಪಂದ್ಯ ಆರಂಭವಾಗುತ್ತದೆ. ರಾತ್ರಿ ತಡವಾಗಿ ಆರಂಭಗೊಂಡರೆ ಭಾರತದಲ್ಲಿ ಪಂದ್ಯ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಪ್ರಸಾರಕರಿಗೆ ನಷ್ಟವಾಲಿದೆ. ಹೀಗಾಗಿ ಹೀಗಾಗಿ ಪ್ರಸಾರಕರು, ಇಸಿಬಿ, ಬಿಸಿಸಿಐ ನಡುವಿನ ಮಾತುಕತೆ ಬಳಿಕ ಪಂದ್ಯ ಮುಂಚಿತವಾಗಿ ಆಯೋಜಿಸಲು ತೀರ್ಮಾನಿಸಲಾಯಿತು. ಇನ್ನು ಡೇ ಅಂಡ್ ನೈಟ್ ಮ್ಯಾಚ್ ಕೂಡಾ ರಾತ್ರಿ 11 ಗಂಟೆಗೆ ಆರಂಭವಾಗಬೇಕಿತ್ತು. ಅದು ಕೂಡಾ ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ.

56
ಭಾರತೀಯರು ಎಲ್ಲಿ ಮ್ಯಾಚ್ ವೀಕ್ಷಿಸಬಹುದು?
Image Credit : ANI

ಭಾರತೀಯರು ಎಲ್ಲಿ ಮ್ಯಾಚ್ ವೀಕ್ಷಿಸಬಹುದು?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿಯ ಪಂದ್ಯಗಳ ಭಾರತದ ಟಿವಿ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಹೀಗಾಗಿ ಸೋನಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಈ ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸಬಹುದು. ಇನ್ನು ಓಟಿಟಿ ಫ್ಲಾಟ್‌ಫಾರಂನಲ್ಲಿ ಜಿಯೋ ಹಾಟ್‌ಸ್ಟಾರ್ ಮೂಲಕವೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

66
ಎರಡನೇ ಟಿ20 ಮ್ಯಾಚ್ ಮೇಲೆ ಎಲ್ಲರ ಕಣ್ಣು
Image Credit : ANI

ಎರಡನೇ ಟಿ20 ಮ್ಯಾಚ್ ಮೇಲೆ ಎಲ್ಲರ ಕಣ್ಣು

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ರದ್ದಾಗಿರುವುದರಿಂದ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತವಿದೆ. ಉಭಯ ತಂಡಗಳು ಎರಡನೇ ಪಂದ್ಯದಲ್ಲಿ ಗೆದ್ದು, ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ. ಮ್ಯಾಂಚೆಸ್ಟರ್‌ನಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಇಂಗ್ಲೆಂಡ್ ಕ್ರಿಕೆಟ್

Latest Videos
Recommended Stories
Recommended image1
ಕ್ರಿಕೆಟ್ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಿಕ್ಸರ್, ಕೋಟಿ ಕೋಟಿ ವ್ಯವಹಾರ ಕಟ್ಟಿದ ಭಾರತದ 5 ಕ್ರಿಕೆಟಿಗರು
Recommended image2
'ಸುಮ್ನೆ ಎಕ್ಸಾಂಗೆ ರೆಡಿಯಾಗು, ಗಲ್ಲಿ ಕ್ರಿಕೆಟ್ ಆಡು': ದೊಡ್ಡ ಕನಸು ಕಾಣುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾಕೆ?
Recommended image3
ಮಳೆಯಿಂದ ಪಂದ್ಯ ರದ್ದು; ಆದರೂ ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ದಾಖಲೆ ಬರೆದ ಶ್ರೇಯಸ್ ಅಯ್ಯರ್!
Related Stories
Recommended image1
'ಸುಮ್ನೆ ಎಕ್ಸಾಂಗೆ ರೆಡಿಯಾಗು, ಗಲ್ಲಿ ಕ್ರಿಕೆಟ್ ಆಡು': ದೊಡ್ಡ ಕನಸು ಕಾಣುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾಕೆ?
Recommended image2
'ನನಗ್ಯಾವ....' ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ವ್ಯಂಗ್ಯ? ಹೀಗ್ಯಾಕೆ ಅಂದ್ರು ಟೀಂ ಇಂಡಿಯಾ ಕ್ಯಾಪ್ಟನ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved