ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ (ಆಗಸ್ಟ್ 11) ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ (Bjorn Fortuin) ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಜೋಹಾನ್ಸ್‌ಬರ್ಗ್: ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ (ಆಗಸ್ಟ್ 11) ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ (Bjorn Fortuin) ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ತ್ರಿಕೋನ ಸರಣಿ ಮತ್ತು ಏಕದಿನ ಸರಣಿ

ದಕ್ಷಿಣ ಆಫ್ರಿಕಾ ತಂಡವು ಮೊದಲು ನಮೀಬಿಯಾ ಮತ್ತು ಜಿಂಬಾಬ್ವೆ ವಿರುದ್ಧ ಟಿ20 ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿದೆ. ಈ ಸರಣಿಯು ಆಗಸ್ಟ್ 28 ರಿಂದ ಸೆಪ್ಟೆಂಬರ್ 06 ರವರೆಗೆ ವಿಂಡ್‌ಹೋಕ್‌ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 09 ರಿಂದ 13 ರವರೆಗೆ ನಮೀಬಿಯಾ ವಿರುದ್ಧ 3 ಪಂದ್ಯಗಳ ಏಕದಿನ (ODI) ಸರಣಿಯನ್ನು ಆಡಲಿದೆ. ವಿಶೇಷವೆಂದರೆ ಇವೆರಡು ದೇಶಗಳ ನಡುವೆ ನಡೆಯುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ.

ಸ್ಥಾನ ಪಡೆದ ಜಾನ್ಸೆನ್ ಸಹೋದರ

ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ಅವರ ಅವಳಿ ಸಹೋದರ ಡುವಾನ್ ಜಾನ್ಸೆನ್ (Duan Jansen) ಅವರಿಗೆ ದಕ್ಷಿಣ ಆಫ್ರಿಕಾ ಸ್ಕ್ವಾಡ್‌ನಲ್ಲಿ ಸ್ಥಾನ ನೀಡಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಈ ಅವಕಾಶ ಲಭಿಸಿದೆ. ಜೋರ್ಡಾನ್ ಹರ್ಮನ್ ಮತ್ತು ಅವರ ಸಹೋದರ ರುಬಿನ್ ಹರ್ಮನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಥನ್ ಬಾಷ್, ಕಾನ್ನರ್ ಎಸ್ಟರ್‌ಹೈಜೆನ್ ಮತ್ತು ನೊಬಾನಿ ಮೊಕೊಯೆನಾ ಅವರಂತಹ ಯುವ ಪ್ರತಿಭೆಗಳಿಗೂ ಮನ್ನಣೆ ನೀಡಲಾಗಿದೆ.

ನಮೀಬಿಯಾ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡ

ಬ್ಯೋರ್ನ್ ಫೋರ್ಚುಯಿನ್ (ನಾಯಕ), ಈಥನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜೋರ್ಜಿ, ಕಾನ್ನರ್ ಎಸ್ಟರ್‌ಹೈಜೆನ್, ಜೋರ್ಡಾನ್ ಹರ್ಮನ್, ರುಬಿನ್ ಹರ್ಮನ್, ಡುವಾನ್ ಜಾನ್ಸೆನ್, ಕ್ವೆನಾ ಮಫಾಕಾ, ಎನ್ಕೋಬಾನಿ ಮೊಕೊಯೆನಾ, ಎನ್ಕಾಬಾ ಪೀಟರ್, ಲುವಾನ್-ಡ್ರೆ ಪ್ರಿಟೋರಿಯಸ್, ಲುಥೋ ಸಿಪಾಮ್ಲಾ, ಜೇಸನ್ ಸ್ಮಿತ್ ಮತ್ತು ಪ್ರೆನೆಲನ್ ಸುಬ್ರಾಯನ್.

ಟಿ20 ತ್ರಿಕೋನ ಸರಣಿಯ ವೇಳಾಪಟ್ಟಿ

  • ಆಗಸ್ಟ್ 28: ನಮೀಬಿಯಾ vs ದಕ್ಷಿಣ ಆಫ್ರಿಕಾ
  • ಆಗಸ್ಟ್ 29: ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ
  • ಆಗಸ್ಟ್ 31: ನಮೀಬಿಯಾ vs ಜಿಂಬಾಬ್ವೆ
  • ಸೆಪ್ಟೆಂಬರ್ 01: ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ
  • ಸೆಪ್ಟೆಂಬರ್ 03: ನಮೀಬಿಯಾ vs ಜಿಂಬಾಬ್ವೆ
  • ಸೆಪ್ಟೆಂಬರ್ 04: ನಮೀಬಿಯಾ vs ದಕ್ಷಿಣ ಆಫ್ರಿಕಾ
  • ಸೆಪ್ಟೆಂಬರ್ 06: ಫೈನಲ್ ಪಂದ್ಯ

ಏಕದಿನ ಸರಣಿಯ ವೇಳಾಪಟ್ಟಿ:

  • ಸೆಪ್ಟೆಂಬರ್ 09: ಮೊದಲ ಏಕದಿನ ಪಂದ್ಯ
  • ಸೆಪ್ಟೆಂಬರ್ 11: ಎರಡನೇ ಏಕದಿನ ಪಂದ್ಯ
  • ಸೆಪ್ಟೆಂಬರ್ 13: ಮೂರನೇ ಏಕದಿನ ಪಂದ್ಯ