MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ರೋ-ಕೊ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರೋಬ್ಬರಿ 7 ವರ್ಷಗಳ ನಂತರ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ ಟೀಂ ಇಂಡಿಯಾ!

ರೋ-ಕೊ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರೋಬ್ಬರಿ 7 ವರ್ಷಗಳ ನಂತರ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ ಟೀಂ ಇಂಡಿಯಾ!

ನಿಧಾನವಾಗಿ ಐಪಿಎಲ್‌ ಗುಂಗಿನಿಂದ ಹೊರಬರುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್‌ ನ್ಯೂಸ್ ಸಿಕ್ಕಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫ್ಯಾನ್ಸ್‌ಗಿದು ಶುಭ ಸುದ್ದಿ. ಅಷ್ಟಕ್ಕೂ ಐದು ಪಂದ್ಯಗಳ ಏಕದಿನ ಸರಣಿ ಯಾವ ತಂಡದ ವಿರುದ್ದ? ಯಾವಾಗ? ನೋಡೋಣ 

1 Min read
Author : Naveen Kodase
Published : Jun 03 2026, 12:42 PM IST
Share this Photo Gallery
  • FB
  • TW
  • Linkdin
  • Whatsapp
16
ರೋಹಿತ್ ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್
Image Credit : Asianet News

ರೋಹಿತ್-ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಿಹಿ ಸುದ್ದಿಯೊಂದನ್ನು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ನೀಡಿದೆ. ಕಿವೀಸ್ ಎದುರು ಭಾರತ ತಂಡವು ಬರೋಬ್ಬರಿ ಏಳು ವರ್ಷಗಳ ಬಳಿಕ ಮೊದಲ ಸಲ ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲು ರೆಡಿಯಾಗಿದೆ. ಏಕದಿನ ಸರಣಿಯಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೀಂ ಇಂಡಿಯಾ ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ ಪ್ರಕಟ
Image Credit : AFP

ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ ಪ್ರಕಟ

ಹೌದು, ಮುಂಬರುವ ಹೋಮ್ ಸೀಸನ್‌ನ ಭಾಗವಾಗಿ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಪ್ರವಾಸದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ.

Related Articles

Related image1
IPL 2026 ಟೂರ್ನಿಯಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳಿವರು! ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ
Related image2
IPL 2026: ಈ ಆಟಗಾರನ ಒಂದು ರನ್‌ಗೆ ಫ್ರಾಂಚೈಸಿ ಖರ್ಚು ಮಾಡಿದ್ದು ₹86.66 ಲಕ್ಷ..! ಹರಾಜಿನಲ್ಲೇ ದೊಡ್ಡ ಎಡವಟ್ಟು
36
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದೀರ್ಘಕಾಲಿಕ ಪ್ರವಾಸ
Image Credit : X Handle

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದೀರ್ಘಕಾಲಿಕ ಪ್ರವಾಸ

ಮುಂಬರುವ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಭಾರತ ತಂಡವು ಕಿವೀಸ್ ಪ್ರವಾಸದಲ್ಲಿರಲಿದೆ. ಇದರಲ್ಲಿ ಭಾರತ ತಂಡ ಐದು ಟಿ20, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಪಂದ್ಯಗಳ ಸಂಖ್ಯೆಯ ದೃಷ್ಟಿಯಿಂದ, ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ದೀರ್ಘ ದ್ವಿಪಕ್ಷೀಯ ಸರಣಿ ಎನಿಸಿದೆ.

46
7 ವರ್ಷಗಳ ಬಳಿಕ ಐದು ಪಂದ್ಯಗಳ ಏಕದಿನ ಸರಣಿ
Image Credit : AFP

7 ವರ್ಷಗಳ ಬಳಿಕ ಐದು ಪಂದ್ಯಗಳ ಏಕದಿನ ಸರಣಿ

2019ರ ನಂತರ ಭಾರತ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಅಷ್ಟೇ ಅಲ್ಲ, ಬರೋಬ್ಬರಿ 7 ವರ್ಷಗಳ ಬಳಿಕ ಟೀಂ ಇಂಡಿಯಾ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿರುವುದು ಈ ಪ್ರವಾಸದ ಮತ್ತೊಂದು ವಿಶೇಷ ಎನಿಸಿಕೊಂಡಿದೆ.

56
ಟಿ20 ಸರಣಿ:
Image Credit : Getty

ಟಿ20 ಸರಣಿ:

ಮೊದಲ ಟಿ20: ಅಕ್ಟೋಬರ್ 22 (ಕ್ರೈಸ್ಟ್‌ಚರ್ಚ್)

ಎರಡನೇ ಟಿ20: ಅಕ್ಟೋಬರ್ 24 (ಕ್ರೈಸ್ಟ್‌ಚರ್ಚ್)

ಮೂರನೇ ಟಿ20: ಅಕ್ಟೋಬರ್ 27 (ವೆಲ್ಲಿಂಗ್ಟನ್)

ನಾಲ್ಕನೇ ಟಿ20: ಅಕ್ಟೋಬರ್ 30 (ಆಕ್ಲೆಂಡ್)

ಐದನೇ ಟಿ20: ನವೆಂಬರ್ 1 (ಹ್ಯಾಮಿಲ್ಟನ್)

66
ಏಕದಿನ ಸರಣಿ:
Image Credit : Getty

ಏಕದಿನ ಸರಣಿ:

ಮೊದಲ ಏಕದಿನ: ನವೆಂಬರ್ 4 (ಆಕ್ಲೆಂಡ್)

ಎರಡನೇ ಏಕದಿನ: ನವೆಂಬರ್ 7 (ವೆಲ್ಲಿಂಗ್ಟನ್)

ಮೂರನೇ ಏಕದಿನ: ನವೆಂಬರ್ 10 (ಹ್ಯಾಮಿಲ್ಟನ್)

ನಾಲ್ಕನೇ ಏಕದಿನ: ನವೆಂಬರ್ 13 (ಮೌಂಟ್ ಮೌಂಗನುಯಿ)

ಐದನೇ ಏಕದಿನ: ನವೆಂಬರ್ 15 (ಮೌಂಟ್ ಮೌಂಗನುಯಿ)

ಟೆಸ್ಟ್ ಸರಣಿ:

ಮೊದಲ ಟೆಸ್ಟ್: ನವೆಂಬರ್ 19 - 23 (ವೆಲ್ಲಿಂಗ್ಟನ್)

ಎರಡನೇ ಟೆಸ್ಟ್: ನವೆಂಬರ್ 27 - ಡಿಸೆಂಬರ್ 1 (ಕ್ರೈಸ್ಟ್‌ಚರ್ಚ್)

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಬಿಸಿಸಿಐ
ನ್ಯೂಜಿಲೆಂಡ್
Latest Videos
Recommended Stories
Recommended image1
ರೋಹಿತ್ ಶರ್ಮಾ, ಕೊಹ್ಲಿ ಅಭಿಮಾನಿಗಳಿಗೆ ಬಂಪರ್, ಖುಷಿ ಸುದ್ದಿ ನೀಡಿದ ಬಿಸಿಸಿಐ
Recommended image2
'ಕಾಲು ಸ್ವಲ್ಪ ನೆಲದ ಮೇಲೆ ಇರಲಿ..': ವೈಭವ್ ಸೂರ್ಯವಂಶಿಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಖಡಕ್ ವಾರ್ನಿಂಗ್
Recommended image3
ಮಹಾರಾಜ ಟ್ರೋಫಿ: ಬೆಂಗಳೂರಿಗೆ ಒಲಿದ ಫೈನಲ್ ಭಾಗ್ಯ!
Related Stories
Recommended image1
IPL 2026 ಟೂರ್ನಿಯಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳಿವರು! ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ
Recommended image2
IPL 2026: ಈ ಆಟಗಾರನ ಒಂದು ರನ್‌ಗೆ ಫ್ರಾಂಚೈಸಿ ಖರ್ಚು ಮಾಡಿದ್ದು ₹86.66 ಲಕ್ಷ..! ಹರಾಜಿನಲ್ಲೇ ದೊಡ್ಡ ಎಡವಟ್ಟು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved