MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Sports
  • Cricket
  • Cricket: ಇದು ಯಾವ ಸೀಮೆ ಸೆಲೆಕ್ಷನ್? ಅಶ್ವಿನ್ ಹೇಳಿದ ಆ ಮಾತು ನಿಜವಾಯ್ತಾ! ಕಡೆಗೂ ಆ ಭಾವುಕತೆ, ಆಕ್ರೋಶಕ್ಕೆ ಸಾಕ್ಷಿಯಾಯ್ತಾ ಈ ಸ್ಕ್ವಾಡ್!

Cricket: ಇದು ಯಾವ ಸೀಮೆ ಸೆಲೆಕ್ಷನ್? ಅಶ್ವಿನ್ ಹೇಳಿದ ಆ ಮಾತು ನಿಜವಾಯ್ತಾ! ಕಡೆಗೂ ಆ ಭಾವುಕತೆ, ಆಕ್ರೋಶಕ್ಕೆ ಸಾಕ್ಷಿಯಾಯ್ತಾ ಈ ಸ್ಕ್ವಾಡ್!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಪ್ರಕಟಿಸಿದ ಭಾರತೀಯ ತಂಡದ ಆಯ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಶ್ವಿನ್‌ ಹೇಳಿದ ಆ ಒಂದು ಮಾತು ನಿಜವಾಗಿಯೇ ಹೋಯ್ತಾ? ಅಷ್ಟಕ್ಕೂ ಆ ಮಾತೇನು?

2 Min read
Author : Bhimasi M Koleppanavar
Published : Sep 17 2026, 07:42 PM IST
Share this Photo Gallery
  • FB
  • TW
  • Linkdin
  • Whatsapp
15
ಏನಿದು ಆಕ್ರೋಶ!
Image Credit : Asianet News

ಏನಿದು ಆಕ್ರೋಶ!

ಸೆಪ್ಟೆಂಬರ್ 16ರಂದು ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಿತು. ಶುಭಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರು ಮೈದಾನಕ್ಕೆ ಮರಳುತ್ತಿದ್ದಾರೆ ಎಂಬುದು ನಿಜ. ಆದರೆ, ಈ ತಂಡದ ಆಯ್ಕೆ ಪಟ್ಟಿಯನ್ನು ನೋಡಿದಾಗ ಪ್ರತಿಯೊಬ್ಬ ನಿಜವಾದ ಕ್ರಿಕೆಟ್ ಅಭಿಮಾನಿಯ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಒಂದೇ ಒಂದು ಪ್ರಶ್ನೆ ಏನೆಂದರೆ? ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರೇ, ಇದು ಯಾವ ಸೀಮೆ ಸೆಲೆಕ್ಷನ್? ಇದು ಅಜಿತ್ ಅಗರ್ಕರ್ ಅವರ ನೇತೃತ್ವದ ಆಯ್ಕೆ ಸಮಿತಿಯ ಕೊನೆಯ ಸಭೆ ಇರಬಹುದು. ಭಾರತ ತಂಡಕ್ಕಾಗಿ ಅವರು ಮಾಡುತ್ತಿರುವ ಕೊನೆಯ ಸೆಲೆಕ್ಷನ್ ಇದಾಗಿರಬಹುದು. ಆದರೆ, ದೇಶಕ್ಕಾಗಿ ಆಡಿದ ಅನುಭವಿ ಆಟಗಾರರನ್ನು ಸೈಲೆಂಟ್ ಆಗಿ ಮೂಲೆಗೆ ತಳ್ಳುತ್ತಿರುವ ಈ ಧೋರಣೆ ಇದೆಯಲ್ಲ, ಅದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಭಾವುಕತೆ ಮತ್ತು ಆಕ್ರೋಶ ಹುಟ್ಟುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಈ ಹಿಂದೆ ಅಶ್ವಿನ್‌ ಹೇಳಿದ್ದೇನು?
Image Credit : AFP

ಈ ಹಿಂದೆ ಅಶ್ವಿನ್‌ ಹೇಳಿದ್ದೇನು?

ಇದೇ ಸನ್ನಿವೇಶವನ್ನು ಮುಂದಿಟ್ಟುಕೊಂಡು ಭಾರತದ ಹಿರಿಯ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಹಿಂದೆ ಆಡಿದ ಕಟು ಮಾತುಗಳು ನಿನ್ನೆ ಪ್ರಕಟವಾದ ಸ್ಕ್ವಾಡ್ ಮೂಲಕ ಶೇ. 100% ನಿಜವಾಗಿ ಕಣ್ಣೆದುರು ನಿಂತಿವೆ. ಅಶ್ವಿನ್ ಹೇಳಿದ್ದರು: ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಬೌಲರ್‌ಗಳನ್ನು ತಂಡದಿಂದ ಕೈಬಿಟ್ಟರೆ 10 ಜನ ಕೇಳ್ತಾರೆ, 100 ಜನ ಕೇಳ್ತಾರೆ, ಹೆಚ್ಚೆಂದರೆ 10,000 ಜನ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಾರೆ, ಅಷ್ಟೇ! ಯಾರೂ ಬೀದಿಗೆ ಇಳಿದು ಗಲಾಟೆ ಮಾಡಲ್ಲ. ಅದೇ ಬೌಲರ್‌ಗಳಿಗಾಗಿಯೂ ಜನ ಸೌಂಡ್ ಮಾಡೋ ದಿನ ಬಂದರೆ, ಅವರನ್ನು ಡ್ರಾಪ್ ಮಾಡೋದು ಅಸಾಧ್ಯವಾಗುತ್ತದೆ ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ತಂಡದಿಂದ ತೆಗೆದುಹಾಕುವುದು ಎಷ್ಟು ಅಸಾಧ್ಯವೋ ಹಾಗೆ!

Related Articles

Related image1
Cricket: ಬಿಸ್ಮಿಲ್ಲಾಹಿ ರಹ್ಮಾನಿ ರಹೀಮ್! ಇಶಾನ್ ಕಿಶನ್ ಅವರ ಮೊದಲ ಪದ! ಆದರೆ ಅಫ್ಘಾನ್ ಆಟಗಾರರು ಪ್ರತಿಕ್ರಿಯೆ ಹೇಗಿತ್ತು?
Related image2
Cricket; ಪಂತ್‌ ಬಗ್ಗೆ ಯೋಚಿಸಲು ಇಲ್ಲ; ಏಕದಿನ ತಂಡಕ್ಕೆ ಹೊಸ ವಿಕೆಟ್ ಕೀಪರ್, 3 ಹೊಸ ಮುಖಗಳಿಗೆ ಬಿಗ್ ಚಾನ್ಸ್!
35
100ಕ್ಕೆ ನೂರು ನಿಜವಾಯ್ತಾ ಆ ಮಾತು?
Image Credit : Getty

100ಕ್ಕೆ ನೂರು ನಿಜವಾಯ್ತಾ ಆ ಮಾತು?

ಅಶ್ವಿನ್ ಅವರ ಈ ಮಾತು ಕೇವಲ ಒಂದು ಹೇಳಿಕೆಯಾಗಿರಲಿಲ್ಲ, ಅದು ಈ ಕ್ರಿಕೆಟ್ ವ್ಯವಸ್ಥೆಯ ಕಟು ವಾಸ್ತವವಾಗಿತ್ತು. ನಿನ್ನೆಯ ಸ್ಕ್ವಾಡ್ ಲಿಸ್ಟ್ ನೋಡಿ! ಒಂದೆಡೆ ಮೊಹಮ್ಮದ್ ಶಮಿ ದುಲೀಪ್ ಟ್ರೋಫಿಯಲ್ಲಿ ಸಾಲು ಸಾಲು ಸುದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡಿ ವಿಕೆಟ್ ಉಡಾಯಿಸುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್‌ನೆಸ್ ಸಾಬೀತುಪಡಿಸುತ್ತಿದ್ದರೂ ವೆಸ್ಟ್ ಇಂಡೀಸ್ ಸರಣಿಯ ಸ್ಕ್ವಾಡ್‌ನಲ್ಲಿ ಅವರ ಹೆಸರೇ ಇಲ್ಲ! ಇನ್ನೊಂದೆಡೆ ಭುವನೇಶ್ವರ್ ಕುಮಾರ್... ಒಡಿಐ ಇರಲಿ, ಟಿ20 ಇರಲಿ, ಆಡಿದ್ದನ್ನೆಲ್ಲಾ 'ಗೋಲ್ಡ್' ಮಾಡುತ್ತಿದ್ದಾರೆ! ಐಪಿಎಲ್‌ನ ಕೊನೆಯ ಎರಡು ಸೀಸನ್‌ಗಳಲ್ಲಿ ಬರೋಬ್ಬರಿ 45 ವಿಕೆಟ್‌ಗಳು (28 ಮತ್ತು 17), ಇತ್ತೀಚಿನ ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡವನ್ನು ತಮ್ಮ ವಿಕೆಟ್‌ಗಳ ಮೂಲಕವೇ ಫೈನಲ್‌ಗೆ ಕರೆದೊಯ್ದ ಸೈಲೆಂಟ್ ಹೀರೋ! ಆದರೂ ಈ ಇಬ್ಬರೂ ದಿಗ್ಗಜ ಬೌಲರ್‌ಗಳಿಗೆ ಈ ಒಡಿಐ ತಂಡದಲ್ಲಿ ಜಾಗವಿಲ್ಲ.

45
ಈ ಸೆಲೆಕ್ಷನ್ ವಿಚಿತ್ರ!
Image Credit : Social Media

ಈ ಸೆಲೆಕ್ಷನ್ ವಿಚಿತ್ರ!

ಬ್ಯಾಟಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲೂ ಪರ್ಫಾರ್ಮ್ ಮಾಡಿದ ಆಟಗಾರರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಐಪಿಎಲ್‌ನಲ್ಲಿ ಬರೋಬ್ಬರಿ 501 ರನ್ ಚಚ್ಚಿ, ತನ್ನ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ರಜತ್ ಪಟಿದಾರ್‌ಗೆ ಯಾವುದೇ ಅವಕಾಶವಿಲ್ಲ. ಇನ್ನು ಐಪಿಎಲ್ ಫೈನಲ್‌ನಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಆಗಿದ್ದ ಕೃಣಾಲ್ ಪಾಂಡ್ಯ ಕಥೆಯೇನು? ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಲಭ್ಯವಿಲ್ಲದಿದ್ದರೂ ಕೃಣಾಲ್ ಪಾಂಡ್ಯ ಹೆಸರು ಸೆಲೆಕ್ಟರ್ಸ್ ಕಣ್ಣಿಗೆ ಕಾಣಿಸಲಿಲ್ಲ. ಆದರೆ, ಆಕಿಬ್ ನಬೀ ಮತ್ತು ಗುರ್ನೂರ್ ಬ್ರಾರ್ ಅವರಂತಹ ಯುವ ಆಟಗಾರರು ನೇರವಾಗಿ ಭಾರತೀಯ ತಂಡದ ಒಳಗೆ ಬಂದುಬಿಡುತ್ತಾರೆ! ಯಾವ ಆಧಾರದ ಮೇಲೆ, ಯಾವ ಮಾನದಂಡದ ಮೇಲೆ ಈ ಆಯ್ಕೆ ನಡೆಯುತ್ತಿದೆ? ಮೈದಾನದಲ್ಲಿ ಶ್ರಮವಹಿಸಿ ಪರ್ಫಾರ್ಮ್ ಮಾಡುವ ಆಟಗಾರರಿಗೆ ಸಿಗುತ್ತಿರುವ ಪ್ರತಿಫಲ ಇದೇನಾ?

55
ಆ ಉಡಾಫೆ ಧೋರಣೆ ಏನು?
Image Credit : ANI

ಆ ಉಡಾಫೆ ಧೋರಣೆ ಏನು?

ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಸಿಗುವ 'ಸ್ಟಾರ್ ಕ್ರೇಜ್' ಮತ್ತು ಸಾರ್ವಜನಿಕ ಬೆಂಬಲ ಪಂದ್ಯ ಗೆಲ್ಲಿಸಿಕೊಡುವ ಬೌಲರ್‌ಗಳಿಗೆ ಸಿಗುತ್ತಿಲ್ಲ ಎಂಬುದೇ ಆಯ್ಕೆಗಾರರ ಈ ಉಡಾಫೆಗೆ ಮುಖ್ಯ ಕಾರಣ. ವಿರಾಟ್ ಅಥವಾ ರೋಹಿತ್ ಅವರನ್ನು ಹೊರಗಿಟ್ಟರೆ ಜನಾಕ್ರೋಶ ವ್ಯಕ್ತವಾಗುತ್ತದೆ ಎಂಬ ಭಯ ಸೆಲೆಕ್ಟರ್ಸ್‌ಗೆ ಇದೆ, ಆದರೆ ಶಮಿ ಅಥವಾ ಭುವಿ ಅವರಂತಹ ಶಾಂತ ಆಟಗಾರರನ್ನು ಹೊರಗಿಟ್ಟರೆ ಯಾರೂ ಕೇಳುವುದಿಲ್ಲ ಎಂಬ ನಿರ್ಲಕ್ಷ್ಯ ಅವರಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಕ್ರಿಕೆಟ್
ಟೀಮ್ ಇಂಡಿಯಾ
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
 

Latest Videos
Recommended Stories
Recommended image1
ಪೃಥ್ವಿ ಶಾ ವೈಯಕ್ತಿಕ ಬದುಕೂ ಬರ್ಬಾದ್; ಮುರಿದುಬಿದ್ದ ನಿಶ್ಚಿತಾರ್ಥ, ಕಾರಣ ರಿವೀಲ್ ಮಾಡಿದ ಆಕೃತಿ
Recommended image2
ಪಾಕ್‌ ಕ್ರಿಕೆಟ್‌ನಲ್ಲಿ ಭೂಕಂಪ, ಬೆಟ್ಟಿಂಗ್‌ನಲ್ಲಿ ಸಿಕ್ಕಿಬಿದ್ದ ತಂಡದ ಸ್ಟಾರ್‌ ಆಟಗಾರ
Recommended image3
ವೈಭವ್ ಸೂರ್ಯವಂಶಿಗೆ ಈಗಲೇ ಚಾನ್ಸ್ ಕೊಡಬೇಡಿ, ಇನ್ನೂ ಸ್ವಲ್ಪ ಕಾಯಲಿ; ಆಯ್ಕೆ ಸಮಿತಿಗೆ ಮಾಜಿ ಆಟಗಾರನ ಎಚ್ಚರಿಕೆ!
Related Stories
Recommended image1
Cricket: ಬಿಸ್ಮಿಲ್ಲಾಹಿ ರಹ್ಮಾನಿ ರಹೀಮ್! ಇಶಾನ್ ಕಿಶನ್ ಅವರ ಮೊದಲ ಪದ! ಆದರೆ ಅಫ್ಘಾನ್ ಆಟಗಾರರು ಪ್ರತಿಕ್ರಿಯೆ ಹೇಗಿತ್ತು?
Recommended image2
Cricket; ಪಂತ್‌ ಬಗ್ಗೆ ಯೋಚಿಸಲು ಇಲ್ಲ; ಏಕದಿನ ತಂಡಕ್ಕೆ ಹೊಸ ವಿಕೆಟ್ ಕೀಪರ್, 3 ಹೊಸ ಮುಖಗಳಿಗೆ ಬಿಗ್ ಚಾನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved