ಭಾರತದ ನೆಲದಲ್ಲಿ ಕನಿಷ್ಟ ಟೆಸ್ಟ್ ಸ್ಕೋರ್; ಅಪಖ್ಯಾತಿಗೆ ಒಳಗಾದ ಟೀಂ ಇಂಡಿಯಾ!
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕೇವಲ 46 ರನ್ ಗಳಿಗೆ ಆಲೌಟ್ ಆಗಿದೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವರು ಡಕೌಟ್ ಆದ್ರು. ಇದಷ್ಟೇ ಅಲ್ಲದೇ ಟೀಂ ಇಂಡಿಯಾ ಅಪಖ್ಯಾತಿಗೂ ಒಳಗಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ಭಾರತ vs ನೂಜಿಲೆಂಡ್ ಟೆಸ್ಟ್
ನ್ಯೂಜಿಲ್ಯಾಂಡ್ ಭಾರತದಲ್ಲಿ 12 ಬಾರಿ ಪ್ರವಾಸ ಮಾಡಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಕೊನೆಯದಾಗಿ 1988ರಲ್ಲಿ ಭಾರತಕ್ಕೆ ಬಂದು ಟೆಸ್ಟ್ ಸರಣಿ ಗೆದ್ದಿತ್ತು. ಇದಾದ ಬಳಿಕ ಸತತವಾಗಿ ಟೆಸ್ಟ್ ಸರಣಿ ಗೆಲ್ಲಲು ಹೆಣಗಾಡುತ್ತಲೇ ಬಂದಿದೆ
13ನೇ ಪ್ರಯತ್ನದಲ್ಲಿ ನ್ಯೂಜಿಲ್ಯಾಂಡ್ ಗೆಲುವು ಸಾಧಿಸುತ್ತಾ?
ಕಳೆದ 12 ಪ್ರಯತ್ನಗಳ ನಂತರ ನ್ಯೂಜಿಲೆಂಡ್ ಕ್ರಿಕೆಟ್ ತಂಡವು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುವ 13ನೇ ಪ್ರಯತ್ನದಲ್ಲಿದೆ. ಇದಕ್ಕೂ ಮುನ್ನ ಕಿವೀಸ್ ಪಡೆ ಶ್ರೀಲಂಕಾ ಪ್ರವಾಸದಲ್ಲಿ 2 ಪಂದ್ಯಗಳಲ್ಲೂ ಸೋತು ಭಾರತಕ್ಕೆ ಬಂದಿದೆ.
ಭಾರತ vs ನೂಜಿಲೆಂಡ್ ಟೆಸ್ಟ್
3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೊದಲ ದಿನ ಟಾಸ್ ಕೂಡ ಆಗಲಿಲ್ಲ. ಆದರೆ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಲಿಲ್ಲ
ಭಾರತ vs ನೂಜಿಲೆಂಡ್ ಟೆಸ್ಟ್
ಹೀಗಾಗಿ ಎರಡನೇ ದಿನದ ಪಂದ್ಯ 15 ನಿಮಿಷ ಮುಂಚಿತವಾಗಿ ಪಂದ್ಯ ಶುರುವಾಯಿತು. ಟಾಸ್ ಗೆದ್ದ ರೋಹಿತ್ ಬ್ಯಾಟಿಂಗ್ ಆಯ್ಕೆ ಮಾಡಿದ್ದು ತಪ್ಪು ನಿರ್ಧಾರ ಎನಿಸಲಾರಂಭಿಸಿದೆ.
ಭಾರತ vs ನೂಜಿಲೆಂಡ್ ಟೆಸ್ಟ್
ರೋಹಿತ್ ಶರ್ಮಾ 2 ರನ್:
ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರ ಪೈಕಿ ರೋಹಿತ್ ಶರ್ಮಾ 2 ರನ್ ಗಳಿಸಿ ಔಟಾದ್ರು. 8 ವರ್ಷಗಳ ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕೊಹ್ಲಿ ಡಕೌಟ್ ಆದ್ರು.
ಭಾರತ vs ನೂಜಿಲೆಂಡ್ ಟೆಸ್ಟ್
ವಿರಾಟ್ ಕೊಹ್ಲಿ ಡಕೌಟ್
2021ರಲ್ಲಿ ವಾಂಖೆಡೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಎದುರು ವಿರಾಟ್ ಕೊಹ್ಲಿ ಡಕೌಟ್ ಆಗಿದ್ರು. 33ನೇ ಇನ್ನಿಂಗ್ಸ್ ನಲ್ಲಿ ಇಂದು ಮತ್ತೆ ಡಕೌಟ್ ಆಗಿದ್ದಾರೆ
ಭಾರತ vs ನೂಜಿಲೆಂಡ್ ಟೆಸ್ಟ್
ಕೊಹ್ಲಿ ನಂತರ ಸರ್ಫರಾಜ್ ಖಾನ್ ಕೂಡ ಡಕೌಟ್ ಆದ್ರು. ಜೈಸ್ವಾಲ್ 13 ರನ್ ಗಳಿಸಿ ಔಟಾದ್ರು. ರಾಹುಲ್, ಜಡೇಜಾ ಮತ್ತು ಅಶ್ವಿನ್ ಡಕೌಟ್ ಆದ್ರು. ಹೀಗೆ ಟಾಪ್ 8ರಲ್ಲಿ 5 ಬ್ಯಾಟ್ಸ್ ಮನ್ ಗಳು ಡಕೌಟ್ ಆದ್ರು.
ಭಾರತ vs ನೂಜಿಲೆಂಡ್ ಟೆಸ್ಟ್
ತವರಿನ ಟೆಸ್ಟ್ ನಲ್ಲಿ ಟಾಪ್ 7ರಲ್ಲಿ 4 ಬ್ಯಾಟ್ಸ್ ಮನ್ ಗಳು ಡಕೌಟ್ ಆಗಿರೋದು ಇದೇ ಮೊದಲು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 2 ಬಾರಿ 3 ಬ್ಯಾಟ್ಸ್ ಮನ್ ಗಳು ಡಕೌಟ್ ಆಗಿದ್ರು.
ಭಾರತ vs ನೂಜಿಲೆಂಡ್
ಮ್ಯಾಟ್ ಹೆನ್ರಿ 13.2 ಓವರ್ ಗಳಲ್ಲಿ 15 ರನ್ ನೀಡಿ 5 ವಿಕೆಟ್ ಪಡೆದ್ರು. ವಿಲಿಯಮ್ ಓ ರೂರ್ಕ್ 4 ವಿಕೆಟ್ ಮತ್ತು ಟಿಮ್ ಸೌಥಿ 1 ವಿಕೆಟ್ ಪಡೆದ್ರು.
ಭಾರತ vs ನೂಜಿಲೆಂಡ್ ಟೆಸ್ಟ್
ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ನೆಲದಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಅಪಖ್ಯಾತಿಗೆ ಒಳಗಾಗಿದೆ.