ಐಸಿಸಿ ರ‍್ಯಾಂಕಿಂಗ್ ಪ್ರಕಟ, ಏಕದಿನ-ಟಿ20ಯಲ್ಲಿ ಭಾರತ ನಂ.1, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
ಐಸಿಸಿ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಎರಡು ಮಾದರಿಯಲ್ಲಿ ಭಾರತ ನಂಬರ್ 1 ಆಗಿದ್ದರೆ, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದೆ. ಐಸಿಸಿ ರ‍್ಯಾಂಕಿಂಗ್ ಪಟ್ಟಿ ಇಲ್ಲಿದೆ.

ಐಸಿಸಿ ರ್‍ಯಾಂಕಿಂಗ್ಸ್ ಇಂಡಿಯಾ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ರ್‍ಯಾಂಕಿಂಗ್ಸ್‌ನಲ್ಲಿ ಭಾರತ ಪುರುಷರ ತಂಡ ಏಕದಿನ ಮತ್ತು ಟಿ20ಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆದರೆ, ಟೆಸ್ಟ್‌ನಲ್ಲಿ ಭಾರತದ ಕುಸಿತ ಕಂಡಿದ್ದರೆ, ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಐಸಿಸಿ ಟೆಸ್ಟ್ ರ್‍ಯಾಂಕಿಂಗ್ಸ್
ಆಸ್ಟ್ರೇಲಿಯಾ ತಂಡ 126 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐಸಿಸಿ ಟೆಸ್ಟ್ ರ್‍ಯಾಂಕಿಂಗ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ 113 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದರೆ, ದಕ್ಷಿಣ ಆಫ್ರಿಕಾ 111 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತ 105 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಇಂಗ್ಲೆಂಡ್ ತಂಡ ಕಳೆದ ವರ್ಷ ಆಡಿದ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ್ದರಿಂದ ಮೇಲಕ್ಕೆ ಏರಿದೆ. ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ಸೋಲು, ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಕಳೆದುಕೊಂಡಿದ್ದರಿಂದ ಭಾರತದ ಶ್ರೇಯಾಂಕ ಕುಸಿದಿದೆ. ಟೆಸ್ಟ್ ರ್‍ಯಾಂಕಿಂಗ್ಸ್‌ನಲ್ಲಿ ಇಂಗ್ಲೆಂಡ್ ಎರಡು ಸ್ಥಾನ ಮೇಲಕ್ಕೆ ಏರಿದ್ದು ವಿಶೇಷ.
ಆಸ್ಟ್ರೇಲಿಯಾ 126 ರೇಟಿಂಗ್‌ನೊಂದಿಗೆ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ, ಇಂಗ್ಲೆಂಡ್ 113 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ, ದಕ್ಷಿಣ ಆಫ್ರಿಕಾ 111 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿ, ಭಾರತ 105 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ ತಂಡಗಳು ಕ್ರಮವಾಗಿ 5, 6, 7ನೇ ಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಇವೆ.
ಐಸಿಸಿ ಏಕದಿನ ರ್‍ಯಾಂಕಿಂಗ್ಸ್
ಐಸಿಸಿ ಏಕದಿನ ರ್‍ಯಾಕಿಂಗ್‌ನಲ್ಲಿ ಭಾರತ 124 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ 109 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಶ್ರೀಲಂಕಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳಿವೆ. ಇಂಗ್ಲೆಂಡ್ 8, ವೆಸ್ಟ್ ಇಂಡೀಸ್ 9, ಬಾಂಗ್ಲಾದೇಶ 10ನೇ ಸ್ಥಾನದಲ್ಲಿವೆ.
ಟೀಮ್ ಇಂಡಿಯಾ
ಐಸಿಸಿ ಟಿ20 ರ್‍ಯಾಂಕಿಂಗ್ಸ್
ಐಸಿಸಿ ಟಿ20 ರ್‍ಯಾಂಕಿಂಗ್ಸ್‌ನಲ್ಲಿ ಭಾರತ 271 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (262 ಪಾಯಿಂಟ್‌ಗಳು) ಎರಡನೇ ಸ್ಥಾನದಲ್ಲಿ, ಇಂಗ್ಲೆಂಡ್ (254 ಪಾಯಿಂಟ್‌ಗಳು) ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ನಂತರದ ಸ್ಥಾನಗಳಲ್ಲಿವೆ.