ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಒಟ್ಟು ಸಂಪತ್ತು ಎಷ್ಟು? ಅಮಿತ್ ಶಾ ಪುತ್ರನ ಎಜುಕೇಷನ್ ಏನು?
ಬೆಂಗಳೂರು: ಬಿಸಿಸಿಐ ಕಾರ್ಯದರ್ಶಿಯಾಗಿ ಸೈ ಎನಿಸಿಕೊಂಡಿರುವ ಜಯ್ ಶಾ ಇದೀಗ, ಜಾಗತಿಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬನ್ನಿ ನಾವಿಂದು ಅಮಿತ್ ಶಾ ಅವರ ಒಟ್ಟು ಸಂಪತ್ತು ಎಷ್ಟು? ಅವರು ಶಿಕ್ಷಣ ಪಡೆದಿದ್ದು ಎಷ್ಟು ಎನ್ನುವುದನ್ನು ನೋಡೋಣ ಬನ್ನಿ
ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಜಯ್ ಶಾ ಇದೀಗ, ಅವಿರೋಧವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಕೇವಲ 35 ವರ್ಷದ ಜಯ್ ಶಾ ಇದೀಗ ಜಾಗತಿಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹುದ್ದೆಗೇರುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಜಯ್ ಶಾ ಪಾತ್ರರಾಗಿದ್ದಾರೆ.
ಜಯ್ ಶಾ ಈಗಾಗಲೇ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರೂ, ಅವರ ಅಧಿಕಾರ ಸ್ವೀಕರಿಸುವುದು ಡಿಸೆಂಬರ್ 01, 2024ರಿಂದ. ಅಲ್ಲಿಂದ ಮೂರು ವರ್ಷಗಳ ಕಾಲ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಐಸಿಸಿ ಚೇರ್‌ಮನ್ ಆಗುವ ಮುನ್ನ ಜಯ್ ಶಾ 2019ರ ಅಕ್ಟೋಬರ್‌ನಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಹಾಗೂ 2021ರ ಜನವರಿಯಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಯ್ ಶಾ, ಭತ್ಯೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಬಳವನ್ನು ಬಿಸಿಸಿಐನಿಂದ ಪಡೆದುಕೊಂಡಿರಲಿಲ್ಲ.
ಇನ್ನು ಕೆಲವು ವರದಿಗಳ ಪ್ರಕಾರ, ಜಯ್ ಶಾ ಅವರ ಒಟ್ಟು ಆದಾಯ ಬರೋಬ್ಬರಿ 124 ಕೋಟಿ ರುಪಾಯಿಗಳು ಎನ್ನಲಾಗುತ್ತಿದೆ. ಜಯ್ ಶಾ ಟೆಂಪಲ್ ಎಂಟರ್‌ಪ್ರೈಸೆಸ್ ಎನ್ನುವ ಉದ್ದಿಮೆಯ ಡೈರೆಕ್ಟರ್ ಆಗಿದ್ದಾರೆ. ಇದರ ಜತೆಗೆ ಕುಸುಮ್ ಫಿನ್ ಸರ್ವ್ ಕಂಪನಿಯ ಶೇ.60% ಷೇರು ಹೊಂದಿದ್ದಾರೆ.
Jay shah
ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ ಜಯ್ ಶಾ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನಿರ್ಮಾ ಎನ್ನುವ ಖಾಸಗಿ ಯೂನಿವರ್ಸಿಟಿಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.