#Happy Birthday MSD - ಕ್ಯಾಪ್ಟನ್ ಕೂಲ್ ಬಗ್ಗೆ ಗೊತ್ತಿರದ ಸಂಗತಿಗಳಿವು
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು(ಜು.07) 39 ವರ್ಷನೇ ಹುಟ್ಟಿದ ಹಬ್ಬ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಜುಲೈ 7, 1981 ರಂದು ಜಾರ್ಖಂಡ್ (ಆಗಿನ ಬಿಹಾರ) ರಾಂಚಿಯಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಹೊರತಾಗಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ (ಐಪಿಎಲ್) ಸಹ ಮಾಡಿದ ಇವರ ಅನೇಕ ದಾಖಲೆಗಳನ್ನು ಬೇರೆ ಆಟಗಾರರು ಮುರಿಯುವುದು ಅಷ್ಟು ಸುಲಭದ ಮಾತಲ್ಲ. ಭಾರತದ ಅತ್ಯಂತ ಯಶಸ್ವಿ ನಾಯಕನಾದ ಸಾಧಾರಣ ಹುಡುಗನ ಬಗ್ಗೆ ಒಂದಷ್ಟು ಮಾಹಿತಿಗಳಿವೆ ಇಲ್ಲಿ.
ರಾಂಚಿಯ ಸಾಧಾರಣ ಹುಡುಗನಿಂದ ಕಾಪ್ಟನ್ ಕೂಲ್ ಆದ ಮಹೇಂದ್ರ ಸಿಂಗ್ ಧೋನಿ.
ಎಂ ಎಸ್ ಧೋನಿ ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿರುವ ಕ್ರಿಕೆಟಿಗ. ಟೆಸ್ಟ್‌ನಿಂದ ನಿವೃತ್ತರಾಗುವ ಮೊದಲು ಅವರ ಸರಾಸರಿ ಆದಾಯವು ವಾರ್ಷಿಕ 150-190 ಕೋಟಿ ರುಪಾಯಿಗಳಾಗಿತ್ತು.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಐಸಿಸಿ ವಿಶ್ವ-ಟಿ 20 (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013 ರಲ್ಲಿ) ಗೆದ್ದಿದೆ. ಮೂರು ಟ್ರೋಫಿಗಳನ್ನು ಗೆದ್ದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆ ಇವರಿಗಿದೆ.
ಎಂ ಎಸ್ ಧೋನಿ ಶಾಲಾ ತಂಡದಲ್ಲಿ ಫುಟ್ಬಾಲ್ ಗೋಲ್‌ಕೀಪರ್ ಆಗಿದ್ದರು. ಫುಟ್ಬಾಲ್ ನಂತರ, ಬ್ಯಾಡ್ಮಿಂಟನ್ ಧೋನಿಯ ಇನ್ನೊಂದು ಫೇವರೇಟ್ ಆಟ.
ಮೋಟಾರ್ ರೇಸಿಂಗ್ ಬಗ್ಗೆ ತುಂಬಾ ಒಲವಿರುವ ಕ್ಯಾಪ್ಟನ್ ಕೂಲ್ ಮಹೀ, ರೇಸಿಂಗ್ ಟೀಮ್‌ನ ಓನರ್ ಕೂಡ ಹೌದು.
ಹೇರ್ ಸ್ಟೈಲ್‌ಗೆ ಹೆಸರುವಾಸಿಯಾಗಿರುವ ಇವರು ಕಾಲಕಾಲಕ್ಕೆ ಕೇಶವಿನ್ಯಾಸವನ್ನು ಬದಲಾಯಿಸುತ್ತಿರುತ್ತಾರೆ. ಸಿನಿಮಾ ನಟ ಜಾನ್ ಅಬ್ರಹಾಂ ಕೂದಲಿನ ದೊಡ್ಡ ಫ್ಯಾನ್ ಅಂತೆ ಧೋನಿ.
ಮಹೇಂದ್ರ ಸಿಂಗ್ ಧೋನಿ ಅವರನ್ನು 2011ರಲ್ಲಿ ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಿಸಲಾಯಿತು. ಭಾರತೀಯ ಸೇನೆಗೆ ಸೇರುವುದು ತನ್ನ ಬಾಲ್ಯದ ಕನಸು ಎಂದು ಧೋನಿ ಹಲವು ಬಾರಿ
ಹೇಳಿದ್ದಾರೆ.
2015ರಲ್ಲಿ ಮಹೇಂದ್ರ ಸಿಂಗ್ ಧೋನಿ ಆಗ್ರಾದಲ್ಲಿ ನಡೆದ ಭಾರತೀಯ ಸೇನಾ ಪ್ಯಾರಾ ರೆಜಿಮೆಂಟ್‌ನಿಂದ ಪ್ಯಾರಾ ಜಂಪ್‌ಗಳನ್ನು ಪ್ರದರ್ಶಿಸಿದ ಮೊದಲ ಕ್ರೀಡಾಳು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪ್ಯಾರಾ ಟ್ರೂಪರ್ ತರಬೇತಿ ಶಾಲೆಯಿಂದ ತರಬೇತಿ ಪಡೆದ ನಂತರ, ಅವರು ಸುಮಾರು 15,000 ಅಡಿ ಎತ್ತರದಿಂದ ಐದು ಜಂಪ್‌ಗಳನ್ನು ಮಾಡಿದರು.ಇದರಲ್ಲಿ ಒಂದು ಜಂಪ್ ರಾತ್ರಿಯಲ್ಲಿ ಮಾಡಿದ ಕೀರ್ತಿ ಇವರದ್ದು.
ಇನ್ನೂ ಧೋನಿ ಮೋಟಾರು ಬೈಕುಗಳ ಹುಚ್ಚು ಎಲ್ಲರಿಗೂ ತಿಳಿದೆ. ಆದರೆ ನಿಮಗೆ ಗೊತ್ತಾ, ಧೋನಿ ಎರಡು ಡಜನ್ ಆಧುನಿಕ ಮೋಟಾರ್ ಬೈಕುಗಳನ್ನು ಹೊಂದಿದ್ದಾರೆ.
ಇದಲ್ಲದೇ, ಕಾರುಗಳನ್ನು ತುಂಬಾ ಇಷ್ಟಪಡುವ ಮಹಿ, ಹಮ್ಮರ್ ನಂತಹ ಅನೇಕ ದುಬಾರಿ ಕಾರುಗಳ ಮಾಲೀಕ.
ಧೋನಿ ಅನೇಕ ಟಾಪ್ ನಟಿಯರೊಂದಿಗೆ ಸಂಬಂಧ ಹೊಂದಿದ್ದ ರೂಮರ್‌ಗಳು ಸುದ್ದಿಯಾಗಿದ್ದವು. ನಂತರ ಜುಲೈ 4, 2010 ರಂದು ಡೆಹ್ರಾಡೂನ್‌ನ ಸಾಕ್ಷಿ ರಾವತ್‌ರನ್ನು ಮದುವೆಯಾದರು. ಈಗ ಝಿವಾ ಎಂಬ ಮಗಳೂ ಇದ್ದಾಳೆ ಈ ಜೋಡಿಗೆ.
ಧೋನಿ ಟೀಂ ಇಂಡಿಯಾ ಸೇರುವುದಕ್ಕೂ ಮುನ್ನ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಿದ್ದರು. ಗ್ರಾಮೀಣ ಪ್ರದೇಶದಿಂದ ಬಂದ ಧೋನಿ ಒಂದೂವರೆ ದಶಕಗಳಿಂದ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ.