ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ, ನತಾಶಾ ಬೇರೆಯಾದ್ರಂತೆ, ಬಯಲಾಯ್ತು ಸಂಸಾರದ ಗುಟ್ಟು!
2020ರ ಮೇ ತಿಂಗಳಿನಲ್ಲಿ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ-ನತಾಶಾ ಸ್ಟ್ಯಾಂಕೋವಿಚ್ ಜೋಡಿ ಕಳೆದ ಜುಲೈ 2024ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಅಷ್ಟಕ್ಕೂ ಸುಂದರವಾಗಿದ್ದ ಈ ಜೋಡಿ ಬೇರೆ-ಬೇರೆಯಾಗಿದ್ದೇಕೆ ಎನ್ನುವ ಕುತೂಹಲಕ್ಕೆ ಇದೀಗ ಕೊನೆಗೂ ತೆರೆಬಿದ್ದಿದೆ

ನತಾಶಾ ಸ್ಟ್ಯಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಪರಸ್ಪರ ಸಮ್ಮತಿಯಿಂದ ಬೇರ್ಪಟ್ಟಿದ್ದರು. ಈ ವಿಚಾರವನ್ನು ಈ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕವೇ ಖಚಿತಪಡಿಸಿದ್ದರು.
ಕಳೆದೊಂದು ವರ್ಷದಿಂದಲೂ ಈ ತಾರಾ ಜೋಡಿಯ ನಡುವೆ ಮನಸ್ತಾಪಗಳು ಏರ್ಪಟ್ಟಿವೆ ಎಂಬಂತಹ ಮಾತುಗಳು ಹರಿದಾಡುತ್ತಿದ್ದವು. ಇದೀಗ ಈ ಜೋಡಿ ಬೇರ್ಪಟ್ಟಿದ್ದೇಕೆ ಎನ್ನುವುದನ್ನು ಅವರ ಕುಟುಂಬದ ಆತ್ಮೀಯರೊಬ್ಬರು ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ನತಾಶಾ ತಮಗೆ ಇಷ್ಟಬಂದಂತೆ ಇರುವುದನ್ನು ಸಹಿಸಲಿಲ್ಲವಂತೆ. ಆತ ತಾನು ಅಂದುಕೊಂಡಂತೆ ನತಾಶಾ ಇರಬೇಕು ಎಂದು ಬಯಸಿದ್ದರು. ಇದೇ ವಿಚಾರಕ್ಕೆ ಪಾಂಡ್ಯ-ನತಾಶಾ ದಾಂಪತ್ಯದಲ್ಲಿ ಬಿರುಕು ಮೂಡುವಂತೆ ಮಾಡಿತ್ತು.
ಇನ್ನು ಈ ಕುಟುಂಬಕ್ಕೆ ಹತ್ತಿರವಿದ್ದ ವ್ಯಕ್ತಿಯೊಬ್ಬರು, ನತಾಶಾ, ಹಾರ್ದಿಕ್ ನಡವಳಿಕೆಯಿಂದ ಬಳಲಿ ಹೋಗಿದ್ದರು. ಇಬ್ಬರ ಒಳಿತನ ದೃಷ್ಟಿಯಿಂದ ಬೇರ್ಪಡುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ
ಹಾರ್ದಿಕ್ ಪಾಂಡ್ಯ ದುರಂಕಾರದ ವ್ಯಕ್ತಿತ್ವ ಹೊಂದಿದ್ದರು. ಅವನೊಂದಿಗೆ ಜೀವನ ಸಾಗಿಸುವುದು ಬೇಸರದ ಸಂಗತಿ ಎನಿಸತೊಡಗಿತು. ಹೀಗಾಗಿ ನತಾಶಾ, ಪಾಂಡ್ಯ ಜತೆ ಮುಂದುವರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವಳು ಬೇರ್ಪಡಲು ತೀರ್ಮಾನಿಸಿದರು ಎಂದು ಟೈಮ್ಸ್ ನೌ ವರದಿ ಮಾಡಿದೆ ಹೇಳಿದೆ.
ಹಾರ್ದಿಕ್ ಪಾಂಡ್ಯ ನಡವಳಿಕೆ ಸುಧಾರಿಸಿಕೊಳ್ಳಲು ನತಾಶಾ ಸಾಕಷ್ಟು ಬಾರಿ ಚರ್ಚಿಸಿದರು. ಆದರೆ ಆತ ಬದಲಾಗದಿದ್ದಾಗ, ಕಠಿಣವೆನಿಸಿದರೂ ಅನಿವಾರ್ಯವಾಗಿ ವಿಚ್ಛೇದನಾ ಪಡೆಯಲು ಮುಂದಾದರು ಎಂದು ನತಾಶಾ ಅವರ ಆತ್ಮೀಯರೊಬ್ಬರು ಹೇಳಿಕೊಂಡಿದ್ದಾರೆ.
ವಿಚ್ಛೇದನದ ಸುದ್ದಿ ಘೋಷಿಸುವ ವೇಳೆ ಇದು 'ಕಠಿಣ ನಿರ್ಧಾರ' ಎಂದು ಹೇಳಿದ್ದರು ಮತ್ತು ಅವರು ತಮ್ಮ ಮಗು ಅಗಸ್ತ್ಯನನ್ನು ಸಹ-ಪಾಲನೆ ಮಾಡುವುದನ್ನು ಮುಂದುವರೆಸುವುದಾಗಿಯೂ ಹೇಳಿದ್ದರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.