ಸೆಹ್ವಾಗ್-ಬ್ರೂಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ತ್ರಿಶತಕ ಸಿಡಿಸಿದ ಬ್ಯಾಟರ್‌ಗಳಿವರು!
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸೋದು ಅಂದ್ರೆ ದೊಡ್ಡ ದಾಖಲೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಲವೇ ಕೆಲವು ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ. ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ತ್ರಿಶತಕ ಬಾರಿಸಿ ಟೀಂ ಇಂಡಿಯಾದ ಸೆಹ್ವಾಗ್‌ರನ್ನ ನೆನಪಿಸುವಂತೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಾಧ್ಯ ಅಂತಿದ್ದ ದಾಖಲೆಗಳೆಲ್ಲ ಈಗ ಸಾಧ್ಯ ಆಗ್ತಿವೆ. ಟೆಸ್ಟ್‌ನಲ್ಲಿ ತ್ರಿಶತಕ ಕೂಡ ಅಂಥದ್ದೇ ಸೂಪರ್ ದಾಖಲೆ. ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ ಹ್ಯಾರಿ ಬ್ರೂಕ್ ತ್ರಿಶತಕ ಬಾರಿಸಿ ಸೆಹ್ವಾಗ್‌ರನ್ನ ನೆನಪಿಗೆ ತಂದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ವೇಗದ ತ್ರಿಶತಕಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಆಟಗಾರನೇ ಮೊದಲ ಸ್ಥಾನದಲ್ಲಿದ್ದಾರೆ. ಈವರೆಗೆ ವೇಗದ ತ್ರಿಶತಕ ಬಾರಿಸಿದ ಟಾಪ್ 5 ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.
1. ವೀರೇಂದ್ರ ಸೆಹ್ವಾಗ್
ಅತಿ ವೇಗದ ತ್ರಿಶತಕ ಬಾರಿಸಿದ ಆಟಗಾರರಲ್ಲಿ ಭಾರತದ ಸೆಹ್ವಾಗ್ ಮೊದಲ ಸ್ಥಾನದಲ್ಲಿದ್ದಾರೆ. ಮುಲ್ತಾನ್ ದಾಖಲೆಯನ್ನ ಹ್ಯಾರಿ ಬ್ರೂಕ್ ಮುರಿದ್ರೂ, ವೇಗದ ತ್ರಿಶತಕದಲ್ಲಿ ಸೆಹ್ವಾಗ್ ಮುಂದಿದ್ದಾರೆ. ಸೆಹ್ವಾಗ್ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ 278 ಎಸೆತಗಳಲ್ಲಿ 42 ಬೌಂಡರಿ, 5 ಸಿಕ್ಸರ್‌ಗಳ ಸಹಾಯದಿಂದ 319 ರನ್ ಬಾರಿಸಿದ್ರು. ಅವರ ಸ್ಟ್ರೈಕ್ ರೇಟ್ 104.93. ಸೆಹ್ವಾಗ್ 278 ಎಸೆತಗಳಲ್ಲಿ ತ್ರಿಶತಕ ಪೂರ್ಣಗೊಳಿಸಿದ್ರು. ಇದು ಅತಿ ಕಡಿಮೆ ಎಸೆತಗಳಲ್ಲಿ ಬಂದ ತ್ರಿಶತಕ.
2. ಹ್ಯಾರಿ ಬ್ರೂಕ್
ಅತಿ ವೇಗದ ತ್ರಿಶತಕ ಬಾರಿಸಿದ ಆಟಗಾರರಲ್ಲಿ ಹ್ಯಾರಿ ಬ್ರೂಕ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಮ್ಯಾಥ್ಯೂ ಹೇಡನ್ ದಾಖಲೆಯನ್ನೂ ಮುರಿದಿದ್ದಾರೆ. 300 ರನ್‌ಗೆ ಬ್ರೂಕ್ 310 ಎಸೆತಗಳನ್ನ ತೆಗೆದುಕೊಂಡರು. ಪಾಕಿಸ್ತಾನ ವಿರುದ್ಧ 322 ಎಸೆತಗಳಲ್ಲಿ 317 ರನ್ ಬಾರಿಸಿ ಮಿಂಚಿದ್ರು. ಈ ಮೂಲಕ ಮುಲ್ತಾನ್‌ನಲ್ಲಿ ಸೆಹ್ವಾಗ್ 20 ವರ್ಷಗಳ ಹಿಂದೆ ಪಾಕಿಸ್ತಾನ ವಿರುದ್ಧ 309 ರನ್ ಬಾರಿಸಿದ್ದ ದಾಖಲೆಯನ್ನ ಬ್ರೂಕ್ ಮುರಿದಿದ್ದಾರೆ.
3. ವಾಲಿ ಹ್ಯಾಮಂಡ್
147 ವರ್ಷಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಯಾವಾಗಲೂ ಪೈಪೋಟಿಯ ತಂಡವಾಗಿದೆ. ಅನೇಕ ಆಟಗಾರರು ಅಸಾಧಾರಣ ಆಟ ಪ್ರದರ್ಶಿಸಿದ್ದಾರೆ. ಅಂಥವರಲ್ಲಿ ವಾಲಿ ಹ್ಯಾಮಂಡ್ ಒಬ್ಬರು. ವೇಗದ ತ್ರಿಶತಕ ಬಾರಿಸಿದ ಆಟಗಾರರಲ್ಲಿ ಹ್ಯಾಮಂಡ್ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 355 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ರು. 1933ರಲ್ಲಿ ಹ್ಯಾಮಂಡ್‌ಗೆ ಇದು ಅತಿ ವೇಗದ ತ್ರಿಶತಕ.
4. ಮ್ಯಾಥ್ಯೂ ಹೇಡನ್
ಅಂತಾರಾಷ್ಟ್ರೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಒಬ್ಬರು. ವೇಗದ ತ್ರಿಶತಕ ಬಾರಿಸಿದ ಆಟಗಾರರಲ್ಲಿ ಹೇಡನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 2003ರಲ್ಲಿ ಜಿಂಬಾಬ್ವೆ ವಿರುದ್ಧ 380 ರನ್ ಬಾರಿಸಿದ್ರು. ಅವರ ಇನ್ನಿಂಗ್ಸ್‌ನಲ್ಲಿ 38 ಬೌಂಡರಿ, 11 ಸಿಕ್ಸರ್‌ಗಳಿದ್ದವು. ಹೇಡನ್ 362 ಎಸೆತಗಳಲ್ಲಿ ತ್ರಿಶತಕ ಪೂರ್ಣಗೊಳಿಸಿದ್ರು.
5. ವೀರೇಂದ್ರ ಸೆಹ್ವಾಗ್
2004ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ 309 ರನ್, 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಬಾರಿಸಿದ ಸೆಹ್ವಾಗ್ ತ್ರಿಶತಕ ಬಾರಿಸಿದ ಮೊದಲ ಭಾರತೀಯ. ಮುಲ್ತಾನ್‌ನಲ್ಲಿ ಸೆಹ್ವಾಗ್ ಆಡಿದ ತ್ರಿಶತಕದ ಇನ್ನಿಂಗ್ಸ್ ಐದನೇ ಸ್ಥಾನದಲ್ಲಿದೆ. 309 ರನ್‌ಗಳ ಇನ್ನಿಂಗ್ಸ್ ಬಳಿಕ ಸೆಹ್ವಾಗ್‌ಗೆ 'ಮುಲ್ತಾನ್ ಸುಲ್ತಾನ್' ಎಂಬ ಬಿರುದು ಬಂತು. ಈ ಇನ್ನಿಂಗ್ಸ್‌ನಲ್ಲಿ ಸೆಹ್ವಾಗ್ 364 ಎಸೆತಗಳಲ್ಲಿ ತ್ರಿಶತಕ ಪೂರ್ಣಗೊಳಿಸಿದ್ರು.