MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಒಂದಲ್ಲ, ಎರಡೆರಡು ಅತ್ಯಾಧುನಿಕ ಶೈಲಿಯ ಐಶಾರಾಮಿ ಮನೆ ಹೊಂದಿರುವ ಕ್ರಿಕೆಟಿಗರಿವರು! ಯಾರ ಮನೆ ಎಲ್ಲಿದೆ?

ಒಂದಲ್ಲ, ಎರಡೆರಡು ಅತ್ಯಾಧುನಿಕ ಶೈಲಿಯ ಐಶಾರಾಮಿ ಮನೆ ಹೊಂದಿರುವ ಕ್ರಿಕೆಟಿಗರಿವರು! ಯಾರ ಮನೆ ಎಲ್ಲಿದೆ?

ಭಾರತೀಯ ಕ್ರಿಕೆಟ್ ತಾರೆಯರು ತಮ್ಮದೇ ಆದ  ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇದು ಕ್ರಿಕೆಟ್  ಬಗ್ಗೆ ಭಾರತೀಯರಿಗಿರುವ ಅಚಲ ಪ್ರೀತಿಯಾಗಿದೆ. ಇದಲ್ಲದೆ, ಕಟ್ಟಾ ಕ್ರಿಕೆಟ್ ಅಭಿಮಾನಿಗಳು ಯಾವಾಗಲೂ ತಮ್ಮ ನೆಚ್ಚಿನ ಆಟಗಾರರ ಬಗ್ಗೆ, ವಿಶೇಷವಾಗಿ ಅವರ ನೈಜ ಜೀವನದ ಬಗ್ಗೆ, ಕ್ರೀಡಾಂಗಣಗಳ ಆಚೆಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅವರ ವೈಯಕ್ತಿಕ ಜೀವನ, ಐಷಾರಾಮಿ ಆಸ್ತಿಗಳಿಂದ ಹಿಡಿದು ಹೊಸ ಯೋಜನೆಗಳವರೆಗೆ ತಿಳಿದುಕೊಳ್ಳುತ್ತಾರೆ. ನಿಮ್ಮ ಪೇವರಿಟ್‌ ಕ್ರಿಕೆಟರ್‌ ನ  ಐಶಾರಾಮಿ ಮನೆಯ ಬಗ್ಗೆ ತಿಳಿದುಕೊಳ್ಳೋಣ.

4 Min read
Author : Gowthami K
| Updated : May 28 2024, 04:52 PM IST
Share this Photo Gallery
  • FB
  • TW
  • Linkdin
  • Whatsapp
111

ಯುವರಾಜ್ ಸಿಂಗ್ ಮುಂಬೈನ ವರ್ಲಿಯಲ್ಲಿ ಸಮುದ್ರಕ್ಕೆ ಎದುರಾಗಿರುವ ಅದ್ದೂರಿ ಅಪಾರ್ಟ್‌ಮೆಂಟ್‌ನ ಹೆಮ್ಮೆಯ ಮಾಲೀಕರಾಗಿದ್ದಾರೆ. 16,000 ಚದರ ಅಡಿಗಳಷ್ಟು ಜಾಗವನ್ನು ಹೊಂದಿರುವ ಈ ಅಪಾರ್ಟ್ಮೆಂಟ್ ಡ್ಯುಪ್ಲೆಕ್ಸ್ ಮನೆ ಹೊಂದಿದೆ. ಇದು ಓಂಕಾರ್ ಟವರ್ಸ್‌ನ 29 ನೇ ಮಹಡಿಯಲ್ಲಿದೆ.  ಯುವರಾಜ್ 2013 ರಲ್ಲಿ 64 ಕೋಟಿ ಅಪಾರ ಮೊತ್ತಕ್ಕೆ ಈ ಆಸ್ತಿಯನ್ನು ಖರೀದಿಸಿದ್ದರು. ಅಪಾರ್ಟ್‌ಮೆಂಟ್‌ನ ಪ್ರಮುಖ ಹೈಲೈಟ್ ಎಂದರೆ ಅದರ ಗಾಜಿನ ಫಲಕದ ಬಾಲ್ಕನಿಯಿಂದ ಅರೇಬಿಯನ್ ಸಮುದ್ರದ ವಿಹಂಗಮ ನೋಟವನ್ನು ಕಾಣಬಹುದು. ಇನ್ನು ಇದರ ಜೊತೆಗೆ ಗೋವಾದಲ್ಲಿ ರಜಾದಿನವನ್ನು ಕಳೆಯಲು ಮತ್ತೊಂದು ಮನೆಯನ್ನು ಯುವಿ ಹೊಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211

ಕ್ಯಾಪ್ಟನ್ ಕೂಲ್, ಮಹೇಂದ್ರ ಸಿಂಗ್ ಧೋನಿ ಅವರು ರಾಂಚಿಯಲ್ಲಿ ಅದ್ದೂರಿ ತೋಟದ ಮನೆಯನ್ನು ಹೊಂದಿದ್ದಾರೆ. ಕೈಲಾಸಪತಿ ಎಂದು ಹೆಸರಿಟ್ಟಿದ್ದಾರೆ. ಈ ಫಾರ್ಮ್‌ಹೌಸ್ 7 ಎಕರೆ ಪ್ರದೇಶದಲ್ಲಿದೆ. ರಾಂಚಿಯ ಹೇಮು ರಸ್ತೆಯಲ್ಲಿರುವ ಧೋನಿಯ ಇನ್ನೊಂದು ಮನೆಯಿದೆ. ಇದು ಈಗಿನ ಮನೆಯಿಂದ ಕೇವಲ 20 ನಿಮಿಷಗಳ ದೂರದಲ್ಲಿದೆ. 2017 ರಲ್ಲಿ ಇದನ್ನು ಖರೀದಿ ಮಾಡಿದರು.  ಇದು 100 ಕೋಟಿಗೂ ಹೆಚ್ಚು ಮೌಲ್ಯವನ್ನು ಹೊಂದಿದೆ. ನೈಸರ್ಗಿಕ ಭೂದೃಶ್ಯ, ಪ್ರಶಾಂತ ಒಳಾಂಗಣ ಮತ್ತು ಉನ್ನತ ದರ್ಜೆಯ ಸೌಕರ್ಯಗಳು ಈ ಮನೆಯಲ್ಲಿದೆ.

311

ಸುರೇಶ್ ರೈನಾ ತಮ್ಮ ಕನಸಿನ ಮನೆಯನ್ನು ನಿರ್ಮಿಸಿದ್ದು ತನ್ನ ಹುಟ್ಟೂರಾದ ಗಾಜಿಯಾಬಾದ್‌ನಲ್ಲಿ. ಈ ಆಸ್ತಿಯನ್ನು ಕಾಟೇಜ್‌ನಂತೆಯೇ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲಾ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ರಾಜ್ ನಗರದ ಪ್ರಸಿದ್ಧ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಮನೆಯು ಬಿಳಿ ಮತ್ತು ಕಪ್ಪು ಬಣ್ಣದ ಗ್ರಾನೈಟ್ ಮಾರ್ಬಲ್  ನಿಂದ ಮಾಡಲ್ಪಟ್ಟಿದೆ. ಕ್ರಿಕೆಟಿಗ ಮತ್ತು ಅವರ ಕುಟುಂಬವು ನಿಸರ್ಗದ ಮೇಲಿನ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು,  ಮನೆಯು ಸುತ್ತಲೂ ಅದ್ದೂರಿ ಹಸಿರಿನ ತೋಟವನ್ನು ಮಾಡಿದ್ದಾರೆ. 

411

ರೋಹಿತ್ ಶರ್ಮಾ ಅವರು ಮುಂಬೈನ ವರ್ಲಿಯಲ್ಲಿರುವ ಅಹುಜಾ ಟವರ್ಸ್‌ನ 29 ನೇ ಮಹಡಿಯಲ್ಲಿ ಸಮುದ್ರಕ್ಕೆ ಎದುರಾಗಿರುವ ಭವ್ಯವಾದ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.  30 ಕೋಟಿಚ ಮೊತ್ತಕ್ಕೆ 2015ರಲ್ಲಿ ಇದನ್ನು ಖರೀದಿಸಲಾಗಿದೆ. ಇದು ನಾಲ್ಕು ಮಲಗುವ ಕೋಣೆಗಳು ಮತ್ತು ಪ್ರಭಾವಶಾಲಿ 13 ಅಡಿ ಎತ್ತರದ ಸೀಲಿಂಗ್ ಹೊಂದಿದೆ. ಹೆಚ್ಚುವರಿಯಾಗಿ, ರೋಹಿತ್ ಅವರ ಮನೆಯು ವಿಶಾಲವಾಗಿ ಕುಳಿತಿರುವ ಮೀಟಿಂಗ್ ರೂಮ್, ವಾಕ್-ಇನ್ ವಾರ್ಡ್ರೋಬ್ ಮತ್ತು ಇತರ ಅದ್ಭುತ ಸೌಕರ್ಯಗಳನ್ನು ಹೊಂದಿದೆ.  ರೋಹಿತ್ ತಮ್ಮ ಮನೆಗೆ ಅತ್ಯಾಧುನಿಕ ಹೋಮ್ ಆಟೊಮೇಷನ್ ಅನ್ನು ಕೂಡ ಮಾಡಿಸಿದ್ದಾರೆ, ಅದು ಧ್ವನಿ-ಆದೇಶದ ನಿಯಂತ್ರಣ ಫಲಕಗಳ ಮೂಲಕ ಬೆಳಕು, ಗ್ಯಾಜೆಟ್‌ಗಳು, ತಾಪಮಾನ ಮತ್ತು ಮನರಂಜನೆಯನ್ನು ದೂರದಿಂದಲೇ ನಿಯಂತ್ರಿಸಬಹುದು.

511

ಕೋಲ್ಕತ್ತಾದ ಸೌರವ್ ಗಂಗೂಲಿ ಅವರು ನಗರದ ಹೃದಯಭಾಗದಲ್ಲಿರುವ ತಮ್ಮ ಪಿತ್ರಾರ್ಜಿತ ಮನೆಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಸುಮಾರು 45 ವರ್ಷಗಳ ಹಳೆಯದಾದ ಮನೆಯಾಗಿದ್ದು, ಗಂಗೂಲಿ ಕುಟುಂಬದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಕುತೂಹಲಕಾರಿ ಎಂದರೆ ಬೆಹಾಲಾ ಪ್ರದೇಶದಲ್ಲಿರುವ ಸೌರವ್ ಅವರ ಆಸ್ತಿ ಇಡೀ ಕೋಲ್ಕತ್ತಾದ ಅತಿದೊಡ್ಡ ಖಾಸಗಿ ಮಹಲುಗಳಲ್ಲಿ ಒಂದಾಗಿದೆ. ಮನೆಯ ವಿಶೇಷ ಹೈಲೈಟ್‌ಗಳಲ್ಲಿ ಒಂದೆಂದರೆ ಅದರ ಕೊಠಡಿಯು ಸ್ಮರಣಿಕೆಗಳಿಂದ ತುಂಬಿರುತ್ತದೆ, ಅಲ್ಲಿ ದಾದಾ ತನ್ನ ಹೆಚ್ಚಿನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ವಿಸ್ತಾರವಾದ ಉದ್ಯಾನ, ಕ್ರಿಕೆಟ್ ಪಿಚ್ ಗಳು ಕೂಡ ಈ ಮನೆಯ ಹೊರಾಂಗಣದಲ್ಲಿದೆ. ಇದಲ್ಲದೆ ಕೊಲ್ಕತ್ತಾದಲ್ಲಿ ಮತ್ತೊಂದು ಮನೆಯನ್ನು ಕೂಡ ದಾದಾ ಇತ್ತೀಚೆಗೆ 40 ಕೋಟಿ ರೂ ಗೆ ಖರೀದಿ ಮಾಡಿದ್ದಾರೆ.

611

ಗುಜರಾತ್‌ನ ಜಾಮ್‌ನಗರದಲ್ಲಿರುವ ರವೀಂದ್ರ ಜಡೇಜಾ ಅವರು ಅರಮನೆಯಂತಹ ಬಂಗಲೆಯನ್ನು ಹೊಂದಿದ್ದಾರೆ. ಈ ಮನೆಯ ಮೌಲ್ಯ ರೂ. 10 ಕೋಟಿಗಳು ರಾಯಲ್ ಪ್ಲಶ್ ಫಿಟ್ಟಿಂಗ್‌ಗಳು ಈ ಮನೆಗೆ ರಾಜತ್ವದ ಕಳೆಯನ್ನು ನೀಡಿದೆ. ಮನೆಯ ಪ್ರವೇಶದ್ವಾರವಾಗಿ ಬೃಹತ್ ಮರದ ಗೇಟ್ ಇದೆ. 

711

ವಡೋದರದಲ್ಲಿ ಹಾರ್ದಿಕ್ ಪಾಂಡ್ಯ ಅವರ ಪೆಂಟ್ ಹೌಸ್ ಇದೆ.  ಅವರ ಸಹೋದರ ಕೃನಾಲ್ ಪಾಂಡ್ಯ ಕೂಡ ಇದರಲ್ಲಿ ಸಹ-ಮಾಲೀಕತ್ವವನ್ನು ಹೊಂದಿದ್ದಾರೆ. ಇದು 6000 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಸಿರುವ ಆಧುನಿಕ ವಾಸಸ್ಥಾನವಾಗಿದೆ. ನಾಲ್ಕು ಅಂತಸ್ತಿನ ಮನೆಯಾಗಿದೆ. ಇದು ಖಾಸಗಿ ಜಿಮ್ನಾಷಿಯಂ ಮತ್ತು ಖಾಸಗಿ ರಂಗಮಂದಿರದಂತಹ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ನಗರದ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ದೀಪಾವಳಿಪುರದಲ್ಲಿ ನೆಲೆಗೊಂಡಿರುವ ಈ ಆಸ್ತಿಯು ರೂ. 3.6 ಕೋಟಿ. ಮೌಲ್ಯ ಹೊಂದಿದೆ. ಇದಲ್ಲದೆ ಪಾಂಡ್ಯ ಮುಂಬೈನ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಒಂದಾದ ಖಾರ್ ವೆಸ್ಟ್‌ನಲ್ಲಿ ಐಷಾರಾಮಿ 3,838 ಚದರ ಅಡಿ ಅಪಾರ್ಟ್‌ಮೆಂಟ್ ಫ್ಲಾಟ್ ಅನ್ನು ಖರೀದಿಸಿದ್ದಾರೆ. ಈ ಫ್ಲಾಟ್ ರುಸ್ತಂಜೀ ಪ್ಯಾರಾಮೌಂಟ್ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿದೆ.

811

ಕ್ರಿಕೆಟ್ ದೇವರು, ಸಚಿನ್ ತೆಂಡೂಲ್ಕರ್ ಮುಂಬೈನ ಬಾಂದ್ರಾದ ಐಷಾರಾಮಿ ಪ್ರದೇಶದಲ್ಲಿ ಅದ್ದೂರಿ ಮನೆಯನ್ನು ಕಂಡುಕೊಂಡಿದ್ದಾರೆ. ಇದನ್ನು ಮೂಲತಃ ಡೋರಾಬ್ ವಿಲ್ಲಾ ಎಂದು ಕರೆಯಲಾಗುತ್ತಿತ್ತು 2007 ರಲ್ಲಿ ಸಚಿನ್ ಖರೀದಿಸಿದರು. ಇದು ಮೊದಲು ಪಾರ್ಸಿ ಕುಟುಂಬದ ಒಡೆತನದಲ್ಲಿತ್ತು. ಬಹಳಷ್ಟು ನವೀಕರಣಗಳ ನಂತರ ತೆಂಡೂಲ್ಕರ್‌  2011 ರಲ್ಲಿ ಈ ಮನೆಗೆ ಸ್ಥಳಾಂತರಗೊಂಡರು.  ಸಚಿನ್ ಅವರ ಮನೆಯು 5 ಅಂತಸ್ತಿನ ಬಂಗಲೆ, ನಿವಾಸಕ್ಕೆ ಮೂರು ಮಹಡಿಗಳು, ಎರಡು ನೆಲಮಾಳಿಗೆಗಳು ಮತ್ತು ಟೆರೇಸ್ ಅನ್ನು ಒಳಗೊಂಡಿದೆ. 6000 ಚದರ ಅಡಿ ಜಾಗದಲ್ಲಿ ಹರಡಿರುವ ಈ ಮನೆಯ ಮೌಲ್ಯ ರೂ. 38 ಕೋಟಿ. ಇದು ಮಣ್ಣಿನ ಟೋನ್ಗಳು, ಸೊಗಸಾದ ಪೀಠೋಪಕರಣಗಳು ಮತ್ತು ಪ್ರಶಾಂತವಾದ ಹಿತ್ತಲನ್ನು ಹೊಂದಿದೆ.

911

ವಿರಾಟ್ ಕೊಹ್ಲಿ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಐಶಾರಾಮಿ DLF ಹಂತ 1  ಪ್ರದೇಶದಲ್ಲಿ  ತಮ್ಮ ಸ್ವೀಟ್ ಹೋಮ್ ಅನ್ನು ಹೊಂದಿದ್ದಾರೆ 500 ಚದರ ಗಜಗಳಷ್ಟು ಜಾಗದಲ್ಲಿ ಈ ಸ್ಥಳವು ಅತ್ಯಂತ ಆಧುನಿಕ ಮತ್ತು ಅತಿರಂಜಿತವಾಗಿ ನಿರ್ಮಾಣ ಮಾಡಲಾಗಿದೆ. 10,000 ಚದರ ಅಡಿ ಜಾಗದಲ್ಲಿ ಈಜುಕೊಳ, ಹೋಂ ಬಾರ್ ಮುಂತಾದ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಈ ಆಸ್ತಿ ಅಂದಾಜು ರೂ. 80 ಕೋಟಿ. ಮೌಲ್ಯದ್ದಾಗಿದೆ. ಇಲ್ಲಿ ವಿರಾಟ್ ಕುಟುಂಬದವರೆಲ್ಲರೂ ಇದ್ದಾರೆ. ಇದಲ್ಲದೆ ಅನುಷ್ಕಾ ಮತ್ತು ವಿರಾಟ್ ಕೊಹ್ಲಿಗೆ ಒಟ್ಟು ಮೂರು ಮನೆಗಳಿವೆ. ಮುಂಬೈನಲ್ಲಿ ಮನೆಯೊಂದಿದೆ ಅದಲ್ಲದೆ. ಮುಂಬೈನ ಅಲಿಬಾಗ್ ಪ್ರದೇಶದಲ್ಲಿ ಬಂಗಲೆಯನ್ನು ಹೊಂದಿದ್ದಾರೆ. 

1011

ಲೆಜೆಂಡರಿ ಕ್ರಿಕೆಟಿಗ, ಸುನಿಲ್ ಗವಾಸ್ಕರ್ ಗೋವಾದಲ್ಲಿ 5000 ಚದರ ಅಡಿ ವಿಸ್ತೀರ್ಣದ ಪ್ರಶಾಂತ ಮತ್ತು ಐಷಾರಾಮಿ ವಿಲ್ಲಾವನ್ನು ಹೊಂದಿದ್ದಾರೆ. ಗವಾಸ್ಕರ್ ಕುಟುಂಬವು 2017 ರಲ್ಲಿ ಈ ಆಸ್ತಿಯನ್ನು ಖರೀದಿಸಿತ್ತು.  ಇದು ISPRAVA ವಿಲ್ಲಾ ಯೋಜನೆಯ ಭಾಗವಾಗಿದೆ. ಇದು ಪುರಾತನ ಪೀಠೋಪಕರಣಗಳೊಂದಿಗೆ ಸುಸಜ್ಜಿತವಾದ ಸೌಕರ್ಯ ಹೊಂದಿದೆ. ಈ ವಿಲ್ಲಾವು  ಹಚ್ಚ ಹಸಿರಿನಿಂದ ಸುತ್ತುವರಿದಿದೆ. ಇದಲ್ಲದೆ ಮುಂಬೈನಲ್ಲಿ ಎರಡು ಮನೆಯನ್ನು ಗವಾಸ್ಕರ್ ಹೊಂದಿದ್ದಾರೆ.

1111

ಇನ್ನು ಕನ್ನಡದವರೇ ಆದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಹುಲ್‌ ದ್ರಾವಿಡ್ ಅವರಿಗೆ ಬೆಂಗಳೂರಿನಲ್ಲಿ ಎರಡು ಮನೆ ಇದೆ ಎನ್ನಲಾಗಿದೆ. ಇನ್ನು ಕನ್ನಡದವರೇ ಆದ ಕೆಎಲ್‌ ರಾಹುಲ್‌ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದು , ಬೆಂಗಳೂರಿನಲ್ಲೂ ಮನೆ ಹೊಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕ್ರಿಕೆಟ್
ಕ್ರೀಡೆಗಳು
ವಿರಾಟ್ ಕೊಹ್ಲಿ
ಹಾರ್ದಿಕ್ ಪಾಂಡ್ಯ
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ಟೆಸ್ಟ್ ಮ್ಯಾಚ್‌ನಿಂದ ಡ್ರಾಪ್ ಆಗುತ್ತಿದ್ದಂತೆ ಕಣ್ಣೀರಿಟ್ಟ ಸಿರಾಜ್; ಗಾಗಲ್ ಹಾಕಿಕೊಂಡು ಅಳು ಮುಚ್ಚಿಟ್ಟ ವಿಡಿಯೋ ವೈರಲ್
Recommended image2
ಮುಂಬೈ ಇಂಡಿಯನ್ಸ್ ನಾಯಕತ್ವ ಸಿಗುತ್ತಿದ್ದಂತೆ ರೋಹಿತ್ ಮೊದಲ ರಿಯಾಕ್ಷನ್; ಮನದಾಳದ ಮಾತು ಬಿಚ್ಚಿಟ್ಟ ಹಿಟ್‌ಮ್ಯಾನ್!
Recommended image3
ರೋಹಿತ್ ಶರ್ಮಾಗೆ ಮತ್ತೆ ನಾಯಕ ಪಟ್ಟ ಕಟ್ಟಿದ ಮುಂಬೈ ಇಂಡಿಯನ್ಸ್; ಕ್ಯಾಪ್ಟನ್ ಆದ ಬೆನ್ನಲ್ಲೇ ಹಿಟ್‌ಮ್ಯಾನ್ ಭಾವುಕ ಸಂದೇಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved