MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru 2nd International Airport
Bengaluru Land Scam
Mahatma Gandhi Manuscript Auction
Divorce Laws India
ISI Backed Terror Network
Mohan Bhagavat Canada Visit
  • Home
  • Sports
  • Cricket
  • ಭಾರತ ವಿರುದ್ಧ ಕ್ಲೀನ್ ಸ್ವೀಪ್ ಗೆದ್ದರೂ ಇಂಗ್ಲೆಂಡ್ ಹೆಡ್ ಕೋಚ್ ಮೆಕಲಂ ಟೆಸ್ಟ್‌ನಿಂದ ಅಮಾನತು

ಭಾರತ ವಿರುದ್ಧ ಕ್ಲೀನ್ ಸ್ವೀಪ್ ಗೆದ್ದರೂ ಇಂಗ್ಲೆಂಡ್ ಹೆಡ್ ಕೋಚ್ ಮೆಕಲಂ ಟೆಸ್ಟ್‌ನಿಂದ ಅಮಾನತು

ಭಾರತದ ಹೀನಾಯ ಸೋಲಿನ ಬಳಿಕ ಕೋಚ್ ಬದಲಾವಣೆ ಆಗ್ರಹ ಕೇಳಿಬರುತ್ತಿದೆ. ಆದರೆ ಸರ್ಜರಿ ಆಗಿರೋದು ಗೆದ್ದ ಇಂಗ್ಲೆಂಡ್ ತಂಡದಲ್ಲಿ. 4-0 ಗೆಲುವಿನ ಹಿಂದಿನ ಕೋಚ್ ಬ್ರೆಂಡನ್ ಮೆಕಲಂ ಟೆಸ್ಟ್ ಕೋಚಿಂಗ್‌ನಿಂದ ವಜಾಗೊಂಡಿದ್ದಾರೆ.

2 Min read
Author : Chethan Kumar
Published : Jul 12 2026, 07:21 PM IST
Share this Photo Gallery
  • FB
  • TW
  • Linkdin
  • Whatsapp
16
ಇಂಗ್ಲೆಂಡ್ ತಂಡದಲ್ಲಿ ಮೇಜರ್ ಸರ್ಜರಿ
Image Credit : ANI

ಇಂಗ್ಲೆಂಡ್ ತಂಡದಲ್ಲಿ ಮೇಜರ್ ಸರ್ಜರಿ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 0-4 ಅಂತರದಲ್ಲಿ ಸರಣಿ ಸೋತು ಟೀಕೆಗೆ ಗುರಿಯಾಗಿದೆ. ಕೋಚ್ ಬದಲಾಗಬೇಕು, ತಂಡ ಬದಲಾಗಬೇಕು, ಆಯ್ಕೆಯಲ್ಲಿ ಬದಲಾವಣೆ ಬೇಕು ಸೇರಿದಂತೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗೆ ಆಗ್ರಹ ಕೇಳಿಬರುತ್ತಿದೆ. ಒತ್ತಡ ತೀವ್ರಗೊಳ್ಳುತ್ತಿದೆ. ಆದರೆ ಸದ್ಯ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬದಲಾಗಿ ಕ್ಲೀನ್ ಸ್ಪೀಪ್ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡದಲ್ಲಿ ಸರ್ಜರಿ ಮಾಡಲಾಗಿದೆ. ಗೆಲುವಿನ ಹಿಂದಿನ ಪ್ರಮುಖ ರೂವಾರಿ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ವಜಾ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏಕದಿನ ಹಾಗೂ ಟಿ20 ತಂಡದ ಕೋಚ್
Image Credit : Getty

ಏಕದಿನ ಹಾಗೂ ಟಿ20 ತಂಡದ ಕೋಚ್

ಬ್ರೆಂಡನ್ ಮೆಕಲಂ ಇಂಗ್ಲೆಂಡ್ ತಂಡದ ಪ್ರಧಾನ್ ಕೋಚ್. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಕೋಚ್ ಮೆಕಲಂ ವಜಾ ಮಾಡಿದೆ. ಆದರೆ ಭಾರತ ವಿರುದ್ದ 4-0 ಅಂತರದ ಗೆಲುವಿನ ಕಾರಣಾದ ಮಕೆಲಂ ಏಕದಿನ ಹಾಗೂ ಟಿ20 ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.

Related Articles

Related image1
ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ
Related image2
ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!
36
ಬೆನ್ ಸ್ಟೋಕ್ಸ್ ವಿದಾಯ ಬೆನ್ನಲ್ಲೇ ಮಕೆಲಂ ಅಮಾನತು
Image Credit : Getty

ಬೆನ್ ಸ್ಟೋಕ್ಸ್ ವಿದಾಯ ಬೆನ್ನಲ್ಲೇ ಮಕೆಲಂ ಅಮಾನತು

2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಮೆಕಲಂ ಹಲವು ಐತಿಹಾಸಿಕ ಗೆಲುವಿನಲ್ಲಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ನಾಯಕ, ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇದೀಗ ಮಕೆಲಂ ಅಮಾನತು ಹಲವು ಅನುಮಾನಗಳಿಗೆ ಕಾರಣವಾಗಿದೆ.

46
ತವರಿನ ತಂಡದ ವಿರುದ್ಧ ಸೋಲು
Image Credit : google

ತವರಿನ ತಂಡದ ವಿರುದ್ಧ ಸೋಲು

ಬ್ರೆಂಡನ್ ಮೆಕಲಂ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ. ಮಕೆಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ವಿರುದ್ದ 1-2 ಅಂತರದಲ್ಲಿ ಟೆಸ್ಟ್ ಸರಣಿ ಸೋತಿತ್ತು. ಮಕೆಲಂ ತವರಿನ ತಂಡದ ವಿರುದ್ದ ಸರಣಿ ಸೋತ ಇಂಗ್ಲೆಂಡ್ ಮುಖಭಂಗ ಅನುಭವಿಸಿತ್ತು. ಇದೇ ಸೋಲು ಮಕೆಲಂ ಟೆಸ್ಟ್ ಕೋಚಿಂಗ್ ಕರಿಯರ್‌ಗೆ ಅಂತ್ಯ ಹಾಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ

56
ಅಮಾನತು ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ
Image Credit : Getty

ಅಮಾನತು ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ

ಟೆಸ್ಟ್ ತಂಡಕ್ಕೆ ಕೋಚಿಂಗ್ ಜವಾಬ್ದಾರಿಯನ್ನು ಹೆಚ್ಚು ಪ್ರೀತಿಯಿಂದ ನಿರ್ವಹಿಸಿದ್ದೇನೆ.ತಂಡವಾಗಿ ನಾವು ಸಾಧನೆ ಮಾಡಲು ಸಾಧ್ಯವಾಗಿದೆ. ಈ ಅವಧಿಯಲ್ಲಿ ಐತಿಹಾಸಿಕ ಗೆಲುವು ಹಾಗೂ ಸವಾಲಿನ ದಿನಗಳನ್ನು ಎದುರಿಸಿದ್ದೇನೆ. ಈ ಪ್ರಯಾಣದಲ್ಲಿ ನನಗೆ ಜೊತೆಯಾದ ತಂಡದ ಆಟಗಾರರು, ಸಪೋರ್ಟ್ ಸ್ಟಾಫ್, ಮ್ಯಾನೇಜ್ಮೆಂಟ್, ಮಂಡಳಿ ಹಾಗೂ ಅಭಿಮಾನಿಗಳಿಗೆ ಋಣಿಯಾಗಿದ್ದೇನೆ. ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ವೈಟ್ ಬಾಲ್ ಕೋಚಿಂಗ್ ಜವಾಬ್ದಾರಿ ಮುಂದುವರಿಸುತ್ತೇನೆ ಎಂದು ಮೆಕಲಂ ಹೇಳಿದ್ದಾರೆ.

66
ಟೀಂ ಇಂಡಿಯಾದಲ್ಲಿ ಯಾವಾಗ
Image Credit : bcci

ಟೀಂ ಇಂಡಿಯಾದಲ್ಲಿ ಯಾವಾಗ

ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ನಡೆಯಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಮೆಕಲಂ ಅಮಾನತು ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸರ್ಜರಿ, ಬದಲಾವಣೆ ಯಾವಾಗ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಇಂಗ್ಲೆಂಡ್ ಕ್ರಿಕೆಟ್
ಕ್ರಿಕೆಟ್
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಸಚಿನ್ ತೆಂಡೂಲ್ಕರ್ ಅಪರೂಪದ ವಿಶ್ವದಾಖಲೆ ಸರಿಗಟ್ಟಿದ ಜೋ ರೂಟ್! ಪಾಕ್ ವಿರುದ್ಧ ಇಂಗ್ಲೆಂಡ್ ನಾಯಕನ ಅಮೋಘ ಸಾಧನೆ
Recommended image2
ಮದುವೆ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡ ಮಾಸ್ಟರ್ ಬ್ಲಾಸ್ಟರ್ ಪುತ್ರ ಅರ್ಜುನ್ ತೆಂಡೂಲ್ಕರ್
Recommended image3
ರೋಹಿತ್ ಶರ್ಮಾ ಮಗಳು ಓದುತ್ತಿರೋರು ಈ ಪ್ರೀಮಿಯಂ ಶಾಲೆಯಲ್ಲಿ! ವಾರ್ಷಿಕ ಫೀಸ್ ಕೇಳಿದ್ರೆ ದಂಗಾಗ್ತೀರಾ!
Related Stories
Recommended image1
ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ
Recommended image2
ಸೋಲುವುದರಲ್ಲೂ ಕೆಟ್ಟ ದಾಖಲೆ ಬರೆದ ಗೌತಮ್ ಗಂಭೀರ್ ಮಾರ್ಗದರ್ಶನದ Team India!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved