MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟೀಂ ಇಂಡಿಯಾ ಟಿ20 ಸೋಲಿಗೆ ಆಟಗಾರರಲ್ಲ ಐಪಿಎಲ್ ಕಾರಣ, ಮಾಜಿ ಕ್ರಿಕೆಟಿನ ಮಾತಿಗೆ ಬೆಚ್ಚಿ ಬಿದ್ದ ಬಿಸಿಸಿಐ

ಟೀಂ ಇಂಡಿಯಾ ಟಿ20 ಸೋಲಿಗೆ ಆಟಗಾರರಲ್ಲ ಐಪಿಎಲ್ ಕಾರಣ, ಮಾಜಿ ಕ್ರಿಕೆಟಿನ ಮಾತಿಗೆ ಬೆಚ್ಚಿ ಬಿದ್ದ ಬಿಸಿಸಿಐ

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಸೋಲಿಗೆ ಆಟಗಾರರು ಮೇಲೆ ಹೊಣೆ ಮಾಡಲಾಗುತ್ತಿದೆ. ಆದರೆ ಸೋಲಿಗೆ ನೇರ ಕಾರಣ ಐಪಿಎಲ್ ಹಾಗೂ ಬಿಸಿಸಿಐ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಈ ಗಂಭೀರ ಆರೋಪ ಬಿಸಿಸಿಐಗೆ ಸಂಕಷ್ಟ ತರಿಸಿದೆ.

2 Min read
Author : Chethan Kumar
Published : Jul 12 2026, 04:33 PM IST
Share this Photo Gallery
  • FB
  • TW
  • Linkdin
  • Whatsapp
16
ಸೋಲಿಗೆ ಐಪಿಎಲ್, ಬಿಸಿಸಿಐ ಕಾರಣ
Image Credit : stockPhoto

ಸೋಲಿಗೆ ಐಪಿಎಲ್, ಬಿಸಿಸಿಐ ಕಾರಣ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಅಭಿಮಾನಿಗಳಿಗೆ ಬೇಸರ ತರಿಸಿದೆ. 0-4 ಅಂತರದ ಸೋಲು ಭಾರತೀಯ ಅಭಿಮಾನಿಗಳು ನಿರೀಕ್ಷೆ ಮಾಡಿರಲಿಲ್ಲ. ಸೋಲಿನ ಬಳಿಕ ತಂಡದ ಆಯ್ಕೆ, ಕೋಚಿಂಗ್, ಆಟಗಾರರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಈ ಸೋಲಿಗೆ ಐಪಿಎಲ್ ಹಾಗೂ ಬಿಸಿಸಿಐ ಕಾರಣ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಂಜ್ರೇಕರ್ ಹೇಳಿದ್ದೇನು?
Image Credit : X@ipl

ಮಂಜ್ರೇಕರ್ ಹೇಳಿದ್ದೇನು?

ಟೀಂ ಇಂಡಿಯಾದ ಸೋಲಿಗೆ ಹಲವು ಕಾರಣಗಳಿವೆ. ಆದರೆ ಸಂಜಯ್ ಮಂಜ್ರೇಕರ್ ಮಾತು ಬಿಸಿಸಿಐಗೆ ಇರಿಸು ಮುರಿಸು ತಂದಿದೆ. ಐಪಿಎಲ್ ಪಂದ್ಯಗಳಲ್ಲಿ ಬ್ಯಾಟರ್ ಬೌಂಡರಿ ಸಿಕ್ಸರ್ ಸುಲಭವಾಗಿ ಹೊಡೆಯುತ್ತಾರೆ. ಆದರೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್‌ಗೆ ಪಿಚ್‌ಗಳಿಲ್ಲ. ಐಪಿಎಲ್ ಟೂರ್ನಿಯಲ್ಲಿ ಒಂದೊಂದು ತಂಡವನ್ನು ಗೆಲ್ಲಿಸಿಕೊಟ್ಟ ಆಟಗಾರರು ಇಂಗ್ಲೆಂಡ್ ಪಿಚ್‌ನಲ್ಲಿ ವಿಫಲರಾಗಿದ್ದಾರೆ. ಐಪಿಎಲ್ ಪ್ಲ್ಯಾಟ್ ಫಿಚ್‌ನಲ್ಲಿ ಆಡುವ ಆಟಗಾರರು ವಿದೇಶಿ ಪಿಚ್‌ನಲ್ಲಿ ಬೌಲಿಂಗ್ ದಾಳಿ ಎದುರಿಸಲು ವಿಫಲರಾಗುತ್ತಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.

Related Articles

Related image1
ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರೆ ವೈಭವ್ ಸೂರ್ಯವಂಶಿ! ಈ 3 ತಪ್ಪು ತಿದ್ದಿಕೊಳ್ಳದಿದ್ರೆ, ಟೀಂ ಇಂಡಿಯಾದಿಂದ ಗೇಟ್‌ಪಾಸ್ ಗ್ಯಾರಂಟಿ!
Related image2
ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ
36
ಬ್ಯಾಟರ್‌ಗೆ ಐಪಿಎಲ್ ಮೇಕಪ್
Image Credit : Instagram/sanjaysphotos + Getty

ಬ್ಯಾಟರ್‌ಗೆ ಐಪಿಎಲ್ ಮೇಕಪ್

ಟೀಂ ಇಂಡಿಯಾ ಬ್ಯಾಟರ್‌ಗಳಿಗೆ ಐಪಿಎಲ್ ಮೇಕಪ್ ಮಾಡಿ ವಿದೇಶಿ ಪಿಚ್‌ಗಳಿಗೆ ಕಳುಹಿಸಿದರೆ ಫಲಿತಾಂಶ ಹೀಗೆ ಆಗುತ್ತದೆ ಎಂದು ಮಂಜ್ರೇಕರ್ ಹೇಳಿದ್ದಾರೆ. ಟಿ20 ಸರಣಿ ಸೋಲಿಗೆ ಆಟಾಗರರನ್ನು ಹೊಣೆಗಾರರನ್ನಾಗಿ ಮಾಡುವುದು ಸುಲಭ, ಸೋಲಿನ ಹೊಣೆ ಐಪಿಎಲ್ ಆಯೋಜನೆ ಮಾಡಿದವರಿಗೆ ಹೋಗಬೇಕು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

46
ಮಂಜ್ರೇಕರ್ ಮಾತಿಗೆ ಪರ ವಿರೋಧ
Image Credit : Getty

ಮಂಜ್ರೇಕರ್ ಮಾತಿಗೆ ಪರ ವಿರೋಧ

ಸಂಜಯ್ ಮಂಜ್ರೇಕರ್ ಐಪಿಎಲ್ ಟೂರ್ನಿ ಹಾಗೂ ಬಿಸಿಸಿಐ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಹಲವರು ಮಂಜ್ರೇಕರ್ ವಾದವನ್ನು ಒಪ್ಪಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಿಂದ ಭಾರತದಲ್ಲಿ ಎಲ್ಲರೂ ಅಬ್ಬರಿಸುತ್ತಾರೆ, ವಿದೇಶ ಪಿಚ್‌ಗಳಲ್ಲಿ ಮಂಕಾಗುತ್ತಾರೆ ಎಂದಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಇದ್ದಾರೆ, ಅವರು ವಿದೇಶದಲ್ಲೂ ಆಡುತ್ತಾರೆ, ಭಾರತದಲ್ಲೂ ಆಡುತ್ತಾರೆ. ಐಪಿಎಲ್ ಯಾಕೆ ಹೊಣೆಯಾಗಬೇಕು ಎಂದು ಪ್ರಶ್ನಿಸಿದ್ದಾರೆ.

56
ಟೀಂ ಇಂಡಿಯಾಗೆ 4 ಸೋಲು
Image Credit : bcci

ಟೀಂ ಇಂಡಿಯಾಗೆ 4 ಸೋಲು

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಸತತ 4 ಸೋಲು ಕಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ಮೊದಲ ಬಾರಿಗೆ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಆದರೆ ಫಲಿತಾಂಶ ನಿರಾಸೆಯಾಗಿತ್ತು.

66
ಐರ್ಲೆಂಡ್ ವಿರುದ್ಧವೂ ಸೋಲು
Image Credit : Getty

ಐರ್ಲೆಂಡ್ ವಿರುದ್ಧವೂ ಸೋಲು

ಇಂಗ್ಲೆಂಡ್ ಸರಣಿಗೂ ಮೊದಲು 11ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ದ ಟೀಂ ಇಂಡಿಯಾ 2 ಟಿ20 ಪಂದ್ಯ ಆಡಿತ್ತು. ಎರಡರಲ್ಲೂ ಭಾರತ ಸೋಲು ಕಂಡಿತ್ತು. ಈ ವೇಳೆ ಇಂಗ್ಲೆಂಡ್ ವಿರುದ್ಧ ಸಿಡಿದೆಳುವ ವಿಶ್ವಾಸದಲ್ಲಿತ್ತು. ಇದೀಗ ಇಂಗ್ಲೆಂಡ್ ವಿರುದ್ದವೂ ಸೋಲು ಕಂಡು ಮುಖಭಂಗ ಅನುಭವಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಟೀಮ್ ಇಂಡಿಯಾ
ಕ್ರಿಕೆಟ್
ಇಂಗ್ಲೆಂಡ್ ಕ್ರಿಕೆಟ್

Latest Videos
Recommended Stories
Recommended image1
ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿ ಹಾಲಿ ಚಾಂಪಿಯನ್ನರಿಗೆ ಕ್ರಿಕೆಟ್ ಪಾಠ ಮಾಡಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್!
Recommended image2
ಟಿ20 ಮುಖಭಂಗ ಬಳಿಕ ಸೈಲೆಂಟ್ ಆಗಿ ಇಬ್ಬರ ಬದಲಿಸಿದ ಬಿಸಿಸಿಐ, ಸೋಲಿನಿಂದ ಎಚ್ಚೆತ್ತುಕೊಳ್ಳುತ್ತಾ ಭಾರತ?
Recommended image3
ಇಂಗ್ಲೆಂಡ್ ಎದುರು ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ; ವಿಶ್ವಕಪ್ ಸ್ಟಾರ್ ಜಿಂಬಾಬ್ವೆ ಎದುರಿನ ಸರಣಿಯಿಂದ ಔಟ್?
Related Stories
Recommended image1
ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರೆ ವೈಭವ್ ಸೂರ್ಯವಂಶಿ! ಈ 3 ತಪ್ಪು ತಿದ್ದಿಕೊಳ್ಳದಿದ್ರೆ, ಟೀಂ ಇಂಡಿಯಾದಿಂದ ಗೇಟ್‌ಪಾಸ್ ಗ್ಯಾರಂಟಿ!
Recommended image2
ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved