MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್ 2026 ಟೂರ್ನಿಯಿಂದ ಹೊರಬಿದ್ದ ಸಿಎಸ್‌ಕೆ, ಒಂದು ಪಂದ್ಯ ಆಡದೇ ಧೋನಿ ವಿದಾಯ?

ಐಪಿಎಲ್ 2026 ಟೂರ್ನಿಯಿಂದ ಹೊರಬಿದ್ದ ಸಿಎಸ್‌ಕೆ, ಒಂದು ಪಂದ್ಯ ಆಡದೇ ಧೋನಿ ವಿದಾಯ?

ಐಪಿಎಲ್ 2026 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬಿದ್ದಿದೆ. 14 ಪಂದ್ಯದಲ್ಲಿ 12 ಅಂಕ ಪಡೆದ ಸಿಎಸ್‌ಕೆ ಗುಜರಾತ್ ವಿರುದ್ದ ಸೋಲು ಕಂಡು ಪ್ಲೇ ಆಫ್ ಕನಸು ನುಚ್ಚು ನೂರಾಗಿದ್ದು ಮಾತ್ರವಲ್ಲ, ಟೂರ್ನಿಯಿಂದಲೇ ಹೊರಬಿದ್ದಿದೆ. ಧೋನಿ ಕತೆ ಏನು?

2 Min read
Author : Chethan Kumar
Published : May 21 2026, 11:44 PM IST
Share this Photo Gallery
  • FB
  • TW
  • Linkdin
  • Whatsapp
15
ಸಿಎಸ್‌ಕೆ ಟೂರ್ನಿಯಿಂದ ಔಟ್
Image Credit : ANI

ಸಿಎಸ್‌ಕೆ ಟೂರ್ನಿಯಿಂದ ಔಟ್

ಐಪಿಎಲ್ 2026ರ ಪ್ಲೇ ಆಫ್ ಆಸೆ ಜೀವಂತವಾಗಿರಿಸಲು ಕೊನೆಯ ಅವಕಾಶವನ್ನು ಸಿಎಸ್‌ಕೆ ಕೈಚೆಲ್ಲಿದೆ. ಗುಜರಾತ್ ಟೈಟಾನ್ಸ್ ವಿರುದ್ದ ಹೀನಾಯ ಸೋಲು ಕಂಡ ಸಿಎಸ್‌ಕೆ ಐಪಿಎಲ್ 2026 ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಸಿಎಸ್‌ಕೆಯ ಈ ಬಾರಿಯ ಹೋರಾಟ ಅಂತ್ಯಗೊಂಡಿದೆ. ಸೋಲು, ಧೋನಿ ಅನುಪಸ್ಥಿತಿ ಸೇರಿದಂತೆ ಹಲವು ಕಾರಣಗಳಿಂದ ಈ ಬಾರಿಯ ಸಿಎಸ್‌ಕೆ ಜರ್ನಿ ಅಭಿಮಾನಿಗಳಿಗೆ ಕಹಿ ಅನುಭವವೇ ಹೆಚ್ಚು ನೀಡಿದೆ.

Add Asianetnews Kannada as a Preferred SourcegooglePreferred
25
ಚೆನ್ನೈಗೆ ಬಿಗ್ ಟಾರ್ಗೆಟ್
Image Credit : ANI

ಚೆನ್ನೈಗೆ ಬಿಗ್ ಟಾರ್ಗೆಟ್

ಮೊದಲು ಬ್ಯಾಟ್ ಮಾಡಿದ ಗುಜರಾತ್ ನೀಡಿದ 230 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ, 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್ ಆಗಿ 89 ರನ್‌ಗಳ ಹೀನಾಯ ಸೋಲು ಕಂಡಿತು. ಸಂಜು ಸ್ಯಾಮ್ಸನ್ ಗೋಲ್ಡನ್ ಡಕ್ ಆದರೆ, 17 ಎಸೆತಗಳಲ್ಲಿ 47 ರನ್ ಚಚ್ಚಿದ ಶಿವಂ ದುಬೆ ಚೆನ್ನೈ ಪರ ಟಾಪ್ ಸ್ಕೋರರ್ ಎನಿಸಿದರು. ಮ್ಯಾಥ್ಯೂ ಶಾರ್ಟ್ 14 ಎಸೆತಗಳಲ್ಲಿ 24 ರನ್ ಗಳಿಸಿದರೆ, ನಾಯಕ ರುತುರಾಜ್ ಗಾಯಕ್ವಾಡ್ 7 ಎಸೆತಗಳಲ್ಲಿ 16 ಮತ್ತು ಅಂಶುಲ್ ಕಾಂಬೋಜ್ 8 ಎಸೆತಗಳಲ್ಲಿ 19 ರನ್ ಗಳಿಸಿದರು.

Related Articles

Related image1
"ಮನೆಗೆ ಹೋಗಿ ವಿಸಿಲ್ ಹೊಡೆಯಿರಿ" ಚೆಪಾಕ್ ಮೈದಾನದಲ್ಲೇ ಚೆನ್ನೈ ಫ್ಯಾನ್ಸ್ ಕಾಲೆಳೆದ ಇಶಾನ್ ಕಿಶನ್! ವಿಡಿಯೋ ವೈರಲ್
Related image2
ಚೆನ್ನೈ ಸೂಪರ್ ಕಿಂಗ್ಸ್ ಆತನ ಮೇಲೆ ವಿಶ್ವಾಸವಿಟ್ಟಿದ್ದಾದ್ರೂ ಹೇಗೆ? ಯುವ ಆಟಗಾರನ ಮೇಲೆ ಕಿಡಿಕಾರಿದ ಕೃಷ್ಣಮಾಚಾರಿ ಶ್ರೀಕಾಂತ್
35
140 ರನ್‌ಗೆ ಸಿಎಸ್‌ಕೆ ಆಲೌಟ್
Image Credit : ANI

140 ರನ್‌ಗೆ ಸಿಎಸ್‌ಕೆ ಆಲೌಟ್

ಗುಜರಾತ್ ಪರ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಸೋಲಿನೊಂದಿಗೆ ಚೆನ್ನೈ 14 ಪಂದ್ಯಗಳಲ್ಲಿ 6 ಗೆಲುವು, 8 ಸೋಲುಗಳೊಂದಿಗೆ 12 ಅಂಕ ಪಡೆದು ಏಳನೇ ಸ್ಥಾನದಲ್ಲಿ ಸೀಸನ್ ಮುಗಿಸಿತು. ಇತ್ತ 18 ಅಂಕಗಳೊಂದಿಗೆ ಗುಜರಾತ್ ಮೊದಲ ಕ್ವಾಲಿಫೈಯರ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಐಪಿಎಲ್ ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ಚೆನ್ನೈ ತಂಡದ ಅತ್ಯಂತ ದೊಡ್ಡ ಸೋಲು ಇದಾಗಿದೆ. ಸ್ಕೋರ್: ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 229-4, ಚೆನ್ನೈ ಸೂಪರ್ ಕಿಂಗ್ಸ್ 13.4 ಓವರ್‌ಗಳಲ್ಲಿ 140ಕ್ಕೆ ಆಲೌಟ್.

45
ಧೋನಿ ಆಡಲೇ ಇಲ್ಲ ಒಂದು ಪಂದ್ಯ
Image Credit : Getty

ಧೋನಿ ಆಡಲೇ ಇಲ್ಲ ಒಂದು ಪಂದ್ಯ

ಐಪಿಎಲ್ 2026 ಟೂರ್ನಿಯಲ್ಲಿ ಧೋನಿ ಒಂದು ಪಂದ್ಯ ಆಡಿಲ್ಲ. ಇಂಜುರಿ ಕಾರಣದಿಂದ ಹೊರಗುಳಿದ ಧೋನಿ ಚೇತರಿಸಿಕೊಳ್ಳಲೇ ಇಲ್ಲ. ಅಭಿಮಾನಿಗಳು ಧೋನಿ ಇಂದು ಕಣಕ್ಕಿಳೀತಾರೆ, ನಾಳೆ ಕಣಕ್ಕಿಳಿತಾರೆ ಎಂದು ಕಾಯುತ್ತಾ ಕುಳಿತಿದ್ದೇ ಬಂತು. ಟೂರ್ನಿಯಿಂದಲೇ ಸಿಎಸ್‌ಕೆ ಹೊರಬಿದ್ದಿದೆ.

55
ಧೋನಿ ವಿದಾಯ?
Image Credit : X

ಧೋನಿ ವಿದಾಯ?

ಈ ಐಪಿಎಲ್ ಟೂರ್ನಿಯಲ್ಲೇ ಧೋನಿ ಇಂಜುರಿ, ಫಿಟ್ನೆಸ್ ಕಾರಣದಿಂದ ಆಡಲು ಸಾಧ್ಯವಾಗಿಲ್ಲ. ಮುಂದಿನ ವರ್ಷ ಅಂದರೆ 45ನೇ ವಯಸ್ಸಿನಲ್ಲಿ ಧೋನಿ ಇದಕ್ಕಿಂತ ಉತ್ತಮ ಫಿಟ್ನೆಸ್ ಹಾಗೂ ಇಂಜುರಿ ಫ್ರಿಯಾಗಿ ಆಡಲು ಸಾಧ್ಯವಿಲ್ಲ. ಹೀಗಾಗಿ ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿ ಆದರೂ ಅಚ್ಚರಿ ಇಲ್ಲ. ಇಷ್ಟೇ ಅಲ್ಲ ಧೋನಿ ಸಂಪ್ರದಾಯದಂತೆ ಸೈಲೆಂಟ್ ಆಗಿ ಐಪಿಎಲ್ ಟೂರ್ನಿಯಿಂದ ಶೀಘ್ರದಲ್ಲೇ ವಿದಾಯ ಹೇಳಳಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್
ಕ್ರಿಕೆಟ್
ಎಂ.ಎಸ್. ಧೋನಿ

Latest Videos
Recommended Stories
Recommended image1
ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಕಲ್ಯಾಣ ಫಿಕ್ಸ್.. ಸನ್‌ ರೈಸರ್ಸ್‌ ಹೈದರಾಬಾದ್ ಓನರ್-‌ಮ್ಯೂಸಿಕ್ ಡೈರೆಕ್ಟರ್‌ 'ಏನಿಲ್ಲ' ಅಂದಿದ್ದು ಸುಳ್ಳು?
Recommended image2
ಸ್ಕಾಚ್, ಸಿಗರೇಟ್ 1983ರ ವಿಶ್ವಕಪ್ ಗೆಲುವಿನ ಸಂಭ್ರಮ ಟೀಂ ಇಂಡಿಯಾ ಪಾರ್ಟಿ ಬಿಲ್ ವೈರಲ್; ಸತ್ಯ ಬಿಚ್ಚಿಟ್ಟ ಕೀರ್ತಿ!
Recommended image3
IPL ಪ್ಲೇ ಆಫ್‌ಗೂ ಮೊದಲೇ ಆರ್‌ಸಿಬಿಗೆ ಗುಡ್ ನ್ಯೂಸ್! ರಣಬೇಟೆಗಾರನ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು ಫ್ರಾಂಚೈಸಿ
Related Stories
Recommended image1
"ಮನೆಗೆ ಹೋಗಿ ವಿಸಿಲ್ ಹೊಡೆಯಿರಿ" ಚೆಪಾಕ್ ಮೈದಾನದಲ್ಲೇ ಚೆನ್ನೈ ಫ್ಯಾನ್ಸ್ ಕಾಲೆಳೆದ ಇಶಾನ್ ಕಿಶನ್! ವಿಡಿಯೋ ವೈರಲ್
Recommended image2
ಚೆನ್ನೈ ಸೂಪರ್ ಕಿಂಗ್ಸ್ ಆತನ ಮೇಲೆ ವಿಶ್ವಾಸವಿಟ್ಟಿದ್ದಾದ್ರೂ ಹೇಗೆ? ಯುವ ಆಟಗಾರನ ಮೇಲೆ ಕಿಡಿಕಾರಿದ ಕೃಷ್ಣಮಾಚಾರಿ ಶ್ರೀಕಾಂತ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved