- Home
- Sports
- Cricket
- ಫೀಲ್ಡ್‌ನಲ್ಲಿ ಮಾಡಬಾರದ ತಪ್ಪು ಮಾಡಿದ ಶುಭಮನ್ ಗಿಲ್; ಇಂಡಿಯನ್ ಮಮ್ಮಿ ಕಣ್ಣಿಗೆ ಬಿದ್ರೆ ಅಷ್ಟೇ ಕಥೆ!
ಫೀಲ್ಡ್‌ನಲ್ಲಿ ಮಾಡಬಾರದ ತಪ್ಪು ಮಾಡಿದ ಶುಭಮನ್ ಗಿಲ್; ಇಂಡಿಯನ್ ಮಮ್ಮಿ ಕಣ್ಣಿಗೆ ಬಿದ್ರೆ ಅಷ್ಟೇ ಕಥೆ!
Cricketer Shubman Gill: ಇತ್ತೀಚೆಗೆ ಐಪಿಎಲ್ ಆಡುವಾಗ ಕ್ರಿಕೆಟರ್ ಶುಭಮನ್ ಗಿಲ್ ಅವರು ಬಾಳೆಹಣ್ಣು ತಿಂದ ಕೆಲವೇ ಸೆಕೆಂಡ್‌ಗೆ ನೀರು ಕುಡಿದರು. ಇದನ್ನು ನೋಡಿದರೆ ಭಾರತೀಯ ತಾಯಂದಿರು ಸಿಟ್ಟು ಮಾಡಿಕೊಳ್ತಾರೆ ಎಂಬ ವಿಡಿಯೋ ವೈರಲ್ ಆಗ್ತಿದೆ. ಇದರ ಹಿಂದೆ ಬೇರೆ ಕಾರಣವೇ ಇದೆ.

cricketer shubman gill
ಬಾಳೆಹಣ್ಣು ನಿಜಕ್ಕೂ ಪೌಷ್ಟಿಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿ ಪೊಟಾಷಿಯಂ, ಫೈಬರ್, ವಿಟಮಿನ್‌ಗಳು ವವೆ. ಆದರೆ ಅದನ್ನು ತಿಂದ ಬಳಿಕ ನೀರು ಕುಡಿಯುವುದು ಕೆಲವು ಸಮಸ್ಯೆ ಮಾಡಬಹುದು.
ಜೀರ್ಣಕ್ರಿಯೆಗೆ ಸಮಸ್ಯೆ ಆಗುವುದು
ಬಾಳೆಹಣ್ಣು ತಿಂದ ಬಳಿಕ ನೀರು ಕುಡಿದರೆ ಹೊಟ್ಟೆಯ ಜೀರ್ಣಕ್ರಿಯೆ ನಿಧಾನ ಆಗಬಹುದು. ಇದರಿಂದ ಗ್ಯಾಸ್, ಅಜೀರ್ಣ ಸಮಸ್ಯೆ ಆಗಬಹುದು.
ಕಫ ಸಮಸ್ಯೆ ಆಗುವುದು
ಆಯುರ್ವೇದದ ಪ್ರಕಾರ, ಬಾಳೆಹಣ್ಣು, ನೀರು ಒಟ್ಟಿಗೆ ಸೇವಿಸಿದರೆ ದೇಹದಲ್ಲಿ ಕಫ ಹೆಚ್ಚಾಗಬಹುದು. ಇದರಿಂದ ಶೀತ, ಕೆಮ್ಮು ಸಮಸ್ಯೆ ಆಗುವುದು. ಬಾಳೆಹಣ್ಣು ತಿಂದ ಬಳಿಕ ತಕ್ಷಣ ನೀರು ಕುಡಿದರೆ ಹೊಟ್ಟೆಯ ಆಸಿಡ್ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಬಹುದು. ಕೆಲವರಿಗೆ ಹೊಟ್ಟೆ ತುಂಬಿದಂತೆ, ಉಬ್ಬರವಾದಂತೆ ಅನುಭವವಾಗಬಹುದು.
ಯಾವಾಗ ತಿನ್ನಬೇಕು?
ಬಾಳೆಹಣ್ಣು ತಿಂದು, ಕನಿಷ್ಠ 20–30 ನಿಮಿಷಗಳ ಬಳಿಕ ನೀರು ಕುಡಿಯುವುದು ಉತ್ತಮ. ತುಂಬ ದಾಹವಾಗಿದ್ದರೆ, ಸ್ವಲ್ಪ ಸಿಪ್‌ಗಳಲ್ಲಿ ಮಾತ್ರ ನೀರು ಕುಡಿಯಬಹುದು. ಎಲ್ಲರಿಗೂ ಇದು ಕಡ್ಡಾಯವಲ್ಲ. ಕೆಲವರಿಗೆ ಯಾವುದೇ ಸಮಸ್ಯೆ ಆಗದೆ ಇರಬಹುದು. ಆದರೆ ಜೀರ್ಣ ಸಮಸ್ಯೆ, ಶೀತ-ಕೆಮ್ಮು ಇರುವವರು ಸ್ವಲ್ಪ ಜಾಗರೂಕರಾಗಿರುವುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

