ವೈಭವ್ ಸೂರ್ಯವಂಶಿ ಆಟ ಹೊಗಳಿದ ಕ್ರಿಕೆಟ್ ದಿಗ್ಗಜ, ಬಿಸಿಸಿಐಗೆ ಕ್ಲೈವ್ ಲಾಯ್ಡ್ ವಾರ್ನಿಂಗ್
Clive Lloyd : ವಿಶ್ವದ ಕ್ರಿಕೆಟ್ ದಂತಕಥೆ ಕ್ಲೈವ್ ಲಾಯ್ಡ್ ಕಣ್ಣು ವೈಭವ್ ಸೂರ್ಯವಂಶಿ ಮೇಲೆ ಬಿದ್ದಿದೆ. ವೈಭವ್ ಆಟ ಮೆಚ್ಚಿಕೊಂಡಿರುವ ಮಾಜಿ ನಾಯಕ, ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.

ಸೂರ್ಯವಂಶಿ ಹೊಗಳಿದ ಕ್ಲೈವ್ ಲಾಯ್ಡ್
ವಿಶ್ವವೇ ವೈಭವ್ ಸೂರ್ಯವಂಶಿ ಆಟವನ್ನು ಹಾಡಿಹೊಗಳ್ತಿದೆ. ವೆಸ್ಟ್ ಇಂಡೀಸ್ ಮಾಜಿ ನಾಯಕ , ಎರಡು ಬಾರಿ ವಿಶ್ವಕಪ್ ವಿಜೇತ ಕ್ಲೈವ್ ಲಾಯ್ಡ್ ಕೂಡ ಇದ್ರಿಂದ ಹೊರತಾಗಿಲ್ಲ. ಅನುಭವಿ ಆಟಗಾರ ಕ್ಲೈವ್ ಲಾಯ್ಡ್ ಏನೇ ಹೇಳಿದ್ರೂ ಇಡೀ ಜಗತ್ತು ಒಮ್ಮೆ ತಿರುಗಿ ನೋಡುತ್ತೆ. 81 ವರ್ಷದ ದಂತಕಥೆ ಭಾರತೀಯ ಕ್ರಿಕೆಟ್ನ ಹೊಸ ಭರವಸೆ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಹೊಗಳಿದ್ದಾರೆ.ವೈಭವ್ ಸೂರ್ಯವಂಶಿ, ಜಗತ್ತು ದೀರ್ಘಕಾಲದವರೆಗೆ ನೋಡಬಹುದಾದ ಆಟಗಾರ ಎಂದು ಕ್ಲೈವ್ ಲಾಯ್ಡ್ ಬಣ್ಣಿಸಿದ್ದಾರೆ.
ಕ್ಲೈವ್ ಲಾಯ್ಡ್ ಹೇಳಿದ್ದೇನು?
ಕ್ಲೈವ್ ಲಾಯ್ಡ್ ಯುಗದ ಭಯಭೀತ ಬೌಲರ್ಗಳನ್ನು ವೈಭವ್ ಸೂರ್ಯವಂಶಿ ಎದುರಿಸಿದ್ರೆ ಏನಾಗ್ತಿತ್ತು ಅಂತ ಕ್ಲೈವ್ ಅವರನ್ನು ಕೇಳಲಾಗಿದೆ. ಲಾಯ್ಡ್ ನಗುತ್ತಾ ಅವರು ಈ ಯುವ ಆಟಗಾರನಿಗೆ ಕಠಿಣ ಪರೀಕ್ಷೆಯೊಡ್ಡುತ್ತಿದ್ದರು. ನಾವು ಅವರ ಪಾತ್ರ, ಅವರ ಕೌಶಲ್ಯ ಮತ್ತು ಅವರ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದೆವು ಎಂದಿದ್ದಾರೆ. ಆದ್ರೆ ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ತುಂಬಾ ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿದ್ದಾರೆ. ಚೆಂಡನ್ನು ಅಧ್ಬುತವಾಗಿ ಮತ್ತು ಶಕ್ತಿಯುತವಾಗಿ ಹೊಡೆಯುತ್ತಾರೆ ಎಂದು ಕ್ಲೈವ್ ಹೇಳಿದ್ದಾರೆ.ನಮ್ಮಲ್ಲಿದ್ದ ಬೌಲರ್ಗಳ ವಿರುದ್ಧ ರನ್ ಗಳಿಸುವುದು ಕಷ್ಟಕರವಾಗಿತ್ತು. ಅವರೆಲ್ಲರೂ ವಿಭಿನ್ನ ಶೈಲಿಗಳಲ್ಲಿ ಬೌಲಿಂಗ್ ಮಾಡ್ತಿದ್ರು. ಅವರಲ್ಲಿ ಯಾರೂ ಒಂದೇ ಆಗಿರಲಿಲ್ಲ. ಆದ್ದರಿಂದ, ವೈಭವ್ ಮತ್ತು ನಮ್ಮ ಬೌಲರ್ಗಳ ನಡುವಿನ ಆ ಸ್ಪರ್ಧೆಯು ಉತ್ತಮ ಟೆಸ್ಟ್ ಆಗಿರ್ತಿತ್ತು ಎಂದಿದ್ದಾರೆ.
ವಾರ್ನಿಂಗ್ ನೀಡಿದ ಕ್ಲೈವ್
ಟೆಸ್ಟ್ ಕ್ರಿಕೆಟ್ನಲ್ಲಿ 19 ಶತಕಗಳನ್ನು ಗಳಿಸಿದ ಕ್ಲೈವ್ ಲಾಯ್ಡ್, ವೈಭವ್ ನೈಸರ್ಗಿಕ ಆಟದ ಶೈಲಿಯನ್ನು ಹಾಳು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ವೈಭವ್ ಸೂರ್ಯವಂಶಿಗೆ ಅಗಾಧ ಪ್ರತಿಭೆ ಇದೆ. ಅವರು ಇದೇ ಶೈಲಿಯಲ್ಲಿ ಆಟವನ್ನು ಮುಂದುವರೆಸಬೇಕು. ಜನರು ಅವರ ಆಟದ ಶೈಲಿಯನ್ನು ಬದಲಾಯಿಸಲು ಪ್ರಯತ್ನಿಸದಿದ್ದರೆ, ನಾವು ದೀರ್ಘಕಾಲದವರೆಗೆ ಈ ಆಟಗಾರನನ್ನು ನಾವು ನೋಡ್ಬಹುದು ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ವೈಭವ್ ದಾಖಲೆ
ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ನಲ್ಲಿ ಕೇವಲ 11 ಎಸೆತಗಳಲ್ಲಿ ಲಿಸ್ಟ್ ಎ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಭಾನುವಾರ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದಾದ್ಮೇಲೆ ಕ್ಲೈವ್ ಲಾಯ್ಡ್ ಹೇಳಿಕೆ ಹೊರ ಬಿದ್ದಿದೆ. ಈ ಪಂದ್ಯದಲ್ಲಿ ವೈಭವ್ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ದಂತಕಥೆ ಕ್ಲೈವ್ ಲಾಯ್ಡ್ ಹೊಗಳಿಕೆ ವೈಭವ್ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

