MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ, ಸ್ಮಾರ್ಟ್ ಸನ್‌ಗ್ಲಾಸ್ ಬ್ಯಾನ್

ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ, ಸ್ಮಾರ್ಟ್ ಸನ್‌ಗ್ಲಾಸ್ ಬ್ಯಾನ್

ಐಪಿಎಲ್ ಟೂರ್ನಿಯಲ್ಲಿ ಬಿಸಿಸಿಐ ನಿಯಮ ಮತ್ತಷ್ಟು ಕಠಿಣಗೊಳಿಸಿದೆ. ಇದೀಗ 2ನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಕ್ಕೂ ಮುನ್ನ ಪ್ಲೇಯರ್ಸ್ ಹಾಗೂ ಅಂಪೈರ್ಸ್ ಸ್ಮಾರ್ಟ್ ಸನ್‌ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.

1 Min read
Author : Chethan Kumar
Published : May 29 2026, 04:13 PM IST
Share this Photo Gallery
  • FB
  • TW
  • Linkdin
  • Whatsapp
16
ಸನ್‌ಗ್ಲಾಸ್ ಬ್ಯಾನ್
Image Credit : stockPhoto

ಸನ್‌ಗ್ಲಾಸ್ ಬ್ಯಾನ್

ಐಪಿಎಲ್ 2026ರ ಟೂರ್ನಿಯ ಅಂತಿಮ ಘಟ್ಟದಲ್ಲಿ ಬಿಸಿಸಿಐ ಖಡಕ್ ವಾರ್ನಿಂಗ್ ಜೊತೆ ಆಟಗಾರರ ಕೆಲ ನಿರ್ಬಂಧ ಹೇರಿದೆ. ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಇದೀಗ ಐಪಿಎಲ್ ಫ್ರಾಂಚೈಸಿ ಹಾಗೂ ಆಟಗಾರರಿಗೆ ಮಹತ್ವದ ಸೂಚನೆ ನೀಡಿದೆ. ಇನ್ನು ಕೇವಲ ಎರಡು ಪಂದ್ಯ ಮಾತ್ರ ಬಾಕಿ ಇದೆ. ಅದಕ್ಕೂ ಮೊದಲೇ ಬಿಸಿಸಿಐ ಆಟಗಾರರು, ತಂಡದ ಸ್ಟಾಫ್ ಸ್ಮಾರ್ಟ್ ಸನ್‌ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸ್ಮಾರ್ಟ್ ಸನ್‌ಗ್ಲಾಸ್ ಯಾಕೆ ಬ್ಯಾನ್
Image Credit : ANI

ಸ್ಮಾರ್ಟ್ ಸನ್‌ಗ್ಲಾಸ್ ಯಾಕೆ ಬ್ಯಾನ್

ಹಲವು ಕಂಪನಿಗಳು ಪ್ರಮೋಶನ್ ಹೆಸರಿನಲ್ಲಿ ಆಟಗಾರರು, ತಂಡದ ಸಪೋರ್ಟ್ ಸ್ಟಾಫ್‌ಗೆ ಸ್ಮಾರ್ಟ್ ಸನ್‌ಗ್ಲಾಸ್ ಉಚಿತವಾಗಿ ನೀಡುತ್ತಿದೆ. ಈ ಸನ್‌ಗ್ಲಾಸ್‌ನಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ, ವಿಡಿಯೋ ಕಾಲ್, ವೈಫೈ ನೆಟ್‌ವರ್ಕ್, ಮೊಬೈಲ್ ಡೇಟಾ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರಿಂದ ಮಹತ್ವದ ಮಾಹಿತಿ ಸೋರಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಬಿಸಿಸಿಐ ಎಸಿಯು ವಿಭಾಗ ಸ್ಮಾರ್ಟ್ ಸನ್‌ಗ್ಲಾಸ್ ಬ್ಯಾನ್ ಮಾಡಿದೆ.

Related Articles

Related image1
15 ವರ್ಷದ ವೈಭವ್ ಸೂರ್ಯವಂಶಿ ಹರಾಜಿಗೆ ಬಂದ್ರೆ 50 ಕೋಟಿಗೆ ಬಿಡ್..! ಅಚ್ಚರಿ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
Related image2
IPL Winner ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡ ಯಾವುದು? ಸ್ಫೋಟಕ ಭವಿಷ್ಯ ನುಡಿದ ಗ್ರೊಕ್ ಎಐ
36
ಎಲ್ಲಾ ಕಮ್ಯೂನಿಕೇಶನ್ ಡಿವೈಸ್ ಬ್ಯಾನ್
Image Credit : X

ಎಲ್ಲಾ ಕಮ್ಯೂನಿಕೇಶನ್ ಡಿವೈಸ್ ಬ್ಯಾನ್

ಸ್ಮಾರ್ಟ್ ಸನ್‌ಗ್ಲಾಸ್ ಮಾತ್ರವಲ್ಲ, ಯಾವುದೇ ಕಮ್ಯೂನಿಕೇಶನ್ ಡಿವೈಸ್, ಲೈವ್ ಸ್ಟ್ರೀಮಿಂಗ್, ಟೆಕ್ಸ್ಟ್ ಮೆಸೇಜ್, ಆಡಿಯೋ, ವಿಡಿಯೋ ಕಾಲ್ ಡಿವೈಸ್ ಗಳನ್ನು ಬಳಸುವಂತಿಲ್ಲ ಎಂದು ಇತ್ತೀಚೆಗಷ್ಟೇ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿತ್ತು. ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ಆಟಗಾರ ರೋಮಿ ಬಿಂಧರ್ ಮೊಬೈಲ್ ಫೋನ್ ಬಳಸಿದ್ದ ಕಾರಣಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.

46
ಬಿಸಿಸಿಐ ನಿಯಮ
Image Credit : X

ಬಿಸಿಸಿಐ ನಿಯಮ

ಸ್ಮಾರ್ಟ್ ಡಿವೈಸ್‌ಗಳನ್ನು ಪಂದ್ಯ ಆರಂಭಕ್ಕೂ ಮೊದಲೇ ಸೆಕ್ಯೂರಿಟಿ ಬಳಿ ಡೆಪಾಸಿಟ್ ಮಾಡಬೇಕು. ಯಾವುದನ್ನು ತೆಗೆದುಕೊಂಡು ಹೋಗುವಂತಿಲ್ಲ. ಪ್ರತಿಯೊಂದು ನಿಯಮಗಳು ಕಠಿಣವಾಗುತ್ತಿದೆ. ಆಟಗಾರರು, ತಂಡದ ಸಪೋರ್ಟ್ ಸ್ಟಾಪ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ.

56
ಹೊಟೆಲ್ ರೂಂಗೆ ಅಪರಿಚಿತರ ಎಂಟ್ರಿ ಬ್ಯಾನ್
Image Credit : Asianet News

ಹೊಟೆಲ್ ರೂಂಗೆ ಅಪರಿಚಿತರ ಎಂಟ್ರಿ ಬ್ಯಾನ್

ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಹನಿ ಟ್ರಾಪ್ ಆತಂಕ ಎದುರಾಗಿತ್ತು. ಹೀಗಾಗಿ ಹೊಟೆಲ್ ರೂಂಗಳಿಗೆ ಅಪರಿಚಿತರ ಎಂಟ್ರಿಯನ್ನು ಬಿಸಿಸಿಐ ಬ್ಯಾನ್ ಮಾಡಿದೆ. ಪಾರ್ಟಿ ಸೇರಿದಂತೆ ಹಲವು ನೆಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾಗಿರುವ, ತಂಡದ ಹೊರಗಿನವರು ಆಟಗಾರರ ರೂಂ ಎಂಟ್ರಿಕೊಡುವುದು ಬ್ಯಾನ್ ಮಾಡಲಾಗಿದೆ.

66
ಐಪಿಎಲ್ 2026 ನಿಯಮ ಉಲ್ಲಂಘನೆ
Image Credit : Asianet News

ಐಪಿಎಲ್ 2026 ನಿಯಮ ಉಲ್ಲಂಘನೆ

2026ರ ಐಪಿಎಲ್ ಟೂರ್ನಿಯಲ್ಲಿ ಕೆಲ ಆಟಗಾರರಿಂದ ನಿಯಮದ ಉಲ್ಲಂಘನೆಯಾಗಿದೆ. ಈ ಕುರಿತು ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಖಡಕ್ ವಾರ್ನಿಂಗ್ ನೀಡಿದೆ. ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ. ಐಪಿಎಲ್ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬಿಸಿಸಿಐ ಫ್ರಾಂಚೈಸಿಗಳಿಗೆ ವಾರ್ನಿಂಗ್ ನೀಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಪಿಎಲ್
ಬಿಸಿಸಿಐ
ಕ್ರಿಕೆಟ್

Latest Videos
Recommended Stories
Recommended image1
IPL Winner ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡ ಯಾವುದು? ಸ್ಫೋಟಕ ಭವಿಷ್ಯ ನುಡಿದ ಗ್ರೊಕ್ ಎಐ
Recommended image2
IPL ಕ್ವಾಲಿಫೈಯರ್-2: ರಾಜಸ್ಥಾನ ಎದುರಿನ ಹೈವೋಲ್ಟೇಜ್ ಮ್ಯಾಚ್‌ಗೆ ಗುಜರಾತ್ ತಂಡದಲ್ಲಿ 2 ಮೇಜರ್ ಚೇಂಜ್! ಸ್ಟಾರ್ ಆಟಗಾರರು ಔಟ್
Recommended image3
IPL 2026 GT vs RR ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ; ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲೆ!
Related Stories
Recommended image1
15 ವರ್ಷದ ವೈಭವ್ ಸೂರ್ಯವಂಶಿ ಹರಾಜಿಗೆ ಬಂದ್ರೆ 50 ಕೋಟಿಗೆ ಬಿಡ್..! ಅಚ್ಚರಿ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
Recommended image2
IPL Winner ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡ ಯಾವುದು? ಸ್ಫೋಟಕ ಭವಿಷ್ಯ ನುಡಿದ ಗ್ರೊಕ್ ಎಐ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved