RCB ಪರ IPL ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಕ್ರಿಕೆಟಿಗರಿವರು..!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೇವಲ ಬೆಂಗಳೂರು ಮಾತ್ರವಲ್ಲ, ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಕಳೆದ 16 ಸೀಸನ್‌ಗಳನ್ನಾಡಿ ಕಪ್ ಗೆಲ್ಲದಿದ್ದರೂ ಅಭಿಮಾನಿಗಳಿಗೆ ಆರ್‌ಸಿಬಿ ಮೇಲಿನ ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ. ಕಾರಣ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ ದಿಗ್ಗಜ ಬ್ಯಾಟರ್‌ಗಳು. ಆರ್‌ಸಿಬಿ ತಂಡದ ಪರ 2024ರ ಐಪಿಎಲ್ ಟೂರ್ನಿಗೂ ಮುನ್ನ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳು ಯಾರು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
1. ವಿರಾಟ್ ಕೊಹ್ಲಿ: 7,263 ರನ್
ಐಪಿಎಲ್ ಚೊಚ್ಚಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ಪರ 237 ಪಂದ್ಯಗಳನ್ನಾಡಿ 7,263 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
2. ಎಬಿ ಡಿವಿಲಿಯರ್ಸ್: 4,491 ರನ್
ಆರ್‌ಸಿಬಿ ಪಾಲಿನ ಆಪತ್ಬಾಂಧವ ಎನಿಸಿಕೊಂಡಿದ್ದ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್, ಬೆಂಗಳೂರು ಪರ 156 ಐಪಿಎಲ್ ಪಂದ್ಯಗಳನ್ನಾಡಿ 4491 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.
3. ಕ್ರಿಸ್ ಗೇಲ್: 3,163 ರನ್
ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಪರ 85 ಐಪಿಎಲ್ ಪಂದ್ಯಗಳನ್ನಾಡಿ 3163 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
4. ಗ್ಲೆನ್ ಮ್ಯಾಕ್ಸ್‌ವೆಲ್: 1,214 ರನ್
ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಸದ್ಯ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ಪರ ಮ್ಯಾಕ್ಸಿ 1,214 ರನ್ ಸಿಡಿಸಿದ್ದಾರೆ.
5. ಫಾಫ್ ಡು ಪ್ಲೆಸಿಸ್: 1,198 ರನ್
ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಕಳೆದ ಎರಡು ಸೀಸನ್‌ಗಳಲ್ಲಿ ಅಮೋಘ ಪ್ರದರ್ಶನದ ಮೂಲಕ 1,198 ರನ್ ಸಿಡಿಸಿ, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
6. ಜಾಕ್ ಕಾಲಿಸ್: 1,132 ರನ್
ದಕ್ಷಿಣ ಆಫ್ರಿಕಾ ಮೂಲದ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್ ಆರ್‌ಸಿಬಿ ಪರ 42 ಪಂದ್ಯಗಳನ್ನಾಡಿ 1,132 ರನ್ ಬಾರಿಸುವ ಮೂಲಕ ಬೆಂಗಳೂರು ಪರ ಅತಿಹೆಚ್ಚು ರನ್ ಬಾರಿಸಿದ ಕ್ರಿಕೆಟಿಗರ ಪೈಕಿ ಆರನೇ ಸ್ಥಾನದಲ್ಲಿದ್ದಾರೆ.
7. ರಾಹುಲ್ ದ್ರಾವಿಡ್:
ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಆರ್‌ಸಿಬಿ ತಂಡದ ಮೊದಲ ನಾಯಕರಾಗಿದ್ದರು. ಆರ್‌ಸಿಬಿ ಪರ ದ್ರಾವಿಡ್ 43 ಪಂದ್ಯಗಳನ್ನಾಡಿ 898 ರನ್ ಸಿಡಿಸಿದ್ದಾರೆ.
8. ದೇವದತ್ ಪಡಿಕ್ಕಲ್:
ಕನ್ನಡಿಗ ದೇವದತ್ ಪಡಿಕ್ಕಲ್ ಆರ್‌ಸಿಬಿ ಪರ ಮೂರು ಸೀಸನ್‌ಗಳಿಂದ 29 ಪಂದ್ಯಗಳನ್ನಾಡಿ 883 ರನ್ ಸಿಡಿಸಿದ್ದಾರೆ. ಈ ಮೂಲಕ ಆರ್‌ಸಿಬಿ ಪರ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
9. ಪಾರ್ಥಿವ್ ಪಟೇಲ್: 731 ರನ್
ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ ಪಾರ್ಥಿವ್ ಪಟೇಲ್ ಬೆಂಗಳೂರು ತಂಡದ ಪರ 32 ಪಂದ್ಯಗಳನ್ನಾಡಿ 731 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.