- Home
- Sports
- Cricket
- ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ: ಪಟ್ಟು ಹಿಡಿದು ಎರಡನೇ ಬಾರಿಗೆ ಐಸಿಸಿಗೆ ಪತ್ರ ಬರೆದ ಬಾಂಗ್ಲಾದೇಶ!
ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ: ಪಟ್ಟು ಹಿಡಿದು ಎರಡನೇ ಬಾರಿಗೆ ಐಸಿಸಿಗೆ ಪತ್ರ ಬರೆದ ಬಾಂಗ್ಲಾದೇಶ!
ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ತಿಕ್ಕಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ತಮ್ಮ ಪಾಲಿನ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸಿ ಎಂದು ಎರಡನೇ ಬಾರಿಗೆ ಐಸಿಸಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ಗೆ ಪತ್ರ ಬರೆದಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಪಟ್ಟು ಹಿಡಿದ ಬಾಂಗ್ಲಾದೇಶ
ಫೆಬ್ರವರಿ 7ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಭಾರತದಲ್ಲಿ ಆಡದಿರಲು ಕೈಗೊಂಡಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಟ್ಟು ಹಿಡಿದಿದೆ.
ಐಸಿಸಿ ಎರಡನೇ ಬಾರಿಗೆ ಪತ್ರ ಬರೆದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್
ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸಿ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಅಂ.ರಾ. ಕ್ರಿಕೆಟ್ ಸಮಿತಿ (ಐಸಿಸಿ)ಗೆ 2ನೇ ಬಾರಿಗೆ ಪತ್ರ ಬರೆದಿದೆ.
ಐಸಿಸಿ ಪ್ರಶ್ನೆಗಳಿಗೆ ವಿಸ್ತೃತವಾಗಿ ವಿವರಿಸಿರುವ ಬಿಸಿಬಿ
ಬಿಸಿಬಿ ತನ್ನ ಮೊದಲ ಪತ್ರದಲ್ಲಿ, ‘ಭಾರತದಲ್ಲಿ ನಮಗೆ ಭದ್ರತಾ ಸಮಸ್ಯೆ ಎದುರಾಗಬಹುದು’ ಎಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಐಸಿಸಿ, ‘ಯಾವ ರೀತಿಯ ಭದ್ರತಾ ಸಮಸ್ಯೆ ಎದುರಾಗಬಹುದು ಎಂದು ನಿಮಗೆ ಅನಿಸುತ್ತದೆ?’ ಎಂದು ಪ್ರಶ್ನಿಸಿತ್ತು. 2ನೇ ಪತ್ರದಲ್ಲಿ ಐಸಿಸಿಯ ಪ್ರಶ್ನೆಗಳಿಗೆ ವಿಸ್ತೃತವಾಗಿ ಉತ್ತರಿಸಿರುವುದಾಗಿ ಬಿಸಿಬಿ ಹೇಳಿಕೊಂಡಿದೆ.
ಬಿಸಿಬಿಯಲ್ಲಿ ಒಡಕು?:
ಬಾಂಗ್ಲಾ ಕ್ರೀಡಾ ಸಚಿವ ಆಸಿಫ್ ನಜ್ರುಲ್ ತಮ್ಮ ದೇಶದ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ನಿಲುವು ಕೈಗೊಂಡಿದ್ದಾರೆ. ಅವರ ಈ ನಿರ್ಧಾರದ ಬಗ್ಗೆ ಬಿಸಿಬಿಯೊಳಗೇ ಒಮ್ಮತವಿಲ್ಲ ಎಂದು ತಿಳಿದುಬಂದಿದೆ.
ಗೊಂದಲದ ಗೂಡಾದ ಬಾಂಗ್ಲಾ ಕ್ರಿಕೆಟ್ ಬೋರ್ಡ್
ಕೆಲ ಸದಸ್ಯರು ನಜ್ರುಲ್ ಮಾಡುತ್ತಿರುವುದು ಸರಿ ಎನ್ನುತ್ತಿದ್ದು, ಇನ್ನೂ ಕೆಲವರು ಈ ನಿರ್ಧಾರದಿಂದ ಬಾಂಗ್ಲಾ ಕ್ರಿಕೆಟ್‌ಗೆ ಸಮಸ್ಯೆಯಾಗಲಿದೆ. ಐಸಿಸಿ ಹಾಗೂ ಬಿಸಿಸಿಐ ಸೂಚನೆ ಪಾಲಿಸೋಣ ಎನ್ನುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

