ಏಷ್ಯಾಕಪ್‌ನಲ್ಲಿಂದು ಪಾಕ್, ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ!
ಅಬುಧಾಬಿ: ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಕಾದಾಡಲಿವೆ. ಈ ಪಂದ್ಯ ಉಭಯ ತಂಡಗಳ ಪಾಲಿಗೆ ಡು ಆರ್ ಡೈ ಮ್ಯಾಚ್ ಎನಿಸಿಕೊಂಡಿದೆ.

ಶ್ರೀಲಂಕಾ-ಪಾಕಿಸ್ತಾನ ಮುಖಾಮುಖಿ
ಸೂಪರ್ -4 ಹಂತವನ್ನು ಸೋಲಿನಿಂದ ಆರಂಭಿಸಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಮಂಗಳವಾರ ಮುಖಾಮುಖಿಯಾಗಲಿದ್ದು, ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.
ಮಾಡು ಇಲ್ಲವೇ ಮಡಿ ಪಂದ್ಯ
ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಲಂಕಾ ಸೋಲುಂಡರೆ, ಪಾಕಿಸ್ತಾನಕ್ಕೆ ಭಾರತ ಶರಣಾಗಿತ್ತು. ಹೀಗಾಗಿ, ಫೈನಲ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.
ಶೇಕ್ ಝಾಯೆದ್ ಮೈದಾನ ಆತಿಥ್ಯ
ಏಷ್ಯಾಕಪ್ ಟೂರ್ನಿಯ ಈ ಮಹತ್ವದ ಪಂದ್ಯಕ್ಕೆ ಅಬುಧಾಬಿಯ ಶೇಕ್ ಝಾಯೆದ್ ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಸೋತ ತಂಡ ಟೂರ್ನಿಯಿಂದ ಔಟ್
ಇಂದು ಸೋಲುವ ತಂಡದ ಏಷ್ಯಾಕಪ್ ಫೈನಲ್ ಬಾಗಿಲು ಬಹುತೇಕ ಬಂದ್ ಆಗಲಿದೆ. ಹೀಗಾಗಿ ಉಭಯ ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿವೆ.
ಸಮಸ್ಯೆಗಳ ಸರಮಾಲೆಯಲ್ಲಿರುವ ಉಭತ ತಂಡಗಳು
ಪಾಕ್, ಶ್ರೀಲಂಕಾ ಎರಡೂ ತಂಡಗಳು ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದು ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಿದೆ.
ಸಂಜೆ 8 ಗಂಟೆಗೆ ಪಂದ್ಯ ಆರಂಭ
ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ ಆರಂಭವಾಗಲಿದ್ದು, ಸೋನಿ ಸ್ಪೋರ್ಟ್ಸ್, ಸೋನಿ ಲೈವ್ ಹಾಗೂ ಫ್ಯಾನ್ ಕೋಡ್‌ನಲ್ಲಿ ಲೈವ್ ಮ್ಯಾಚ್ ವೀಕ್ಷಿಸಬಹುದಾಗಿದೆ.