ಸೋಶಿಯಲ್ ಮೀಡಿಯಾದಲ್ಲಿ ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಸಖತ್ ಆಕ್ಟೀವ್.
ಧೋನಿಗೆ ಹೋಲಿಸಿದರೆ, ಸಾಕ್ಷಿ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ವಿಚಾರ ಹಂಚಿಕೊಳ್ಳುತ್ತಾರೆ.
ಎರಡು ದಿನಗಳ ಹಿಂದೆ ಅವರು ತಮ್ಮ Throwback ಫೋಟೋ ಹಂಚಿಕೊಂಡಿದ್ದಾರೆ.
ಶಾಲಾ ದಿನಗಳು, ಪ್ರವಾಸ ಹಾಗೂ ಸ್ನೇಹಿತರ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಹೆಚ್ಚಿನ ಫೋಟೋಗಳಲ್ಲಿ ಅವರು ತಮ್ಮ ಗೆಳತಿಯರ ಜೊತೆ ಸಂಭ್ರಮಿಸಿದ್ದು ಕಂಡಿದೆ.
ಆದರೆ, ನೆಟ್ಟಿಗರಿಗೆ ಇದೆಲ್ಲ ಫೋಟೋಗಿಂತ ಒಂದು ಪೋಟೋ ಸಖತ್ ಇಂಟ್ರಸ್ಟಿಂಗ್ ಆಗಿ ಕಂಡಿದೆ.
ಹೌದು, ಹೃತಿಕ್ ರೋಶನ್ ಜೊತೆ ಇದ್ದ ಸಾಕ್ಷಿ ಸಿಂಗ್ ಧೋನಿ Throwback ಫೋಟೋ ವೈರಲ್ ಆಗಿದೆ.
ಹೃತಿಕ್ ರೋಶನ್ ಕ್ರಿಶ್ ಸಿನಿಮಾದ ಶೂಟಿಂಗ್ನಲ್ಲಿನ ಚಿತ್ರ ಸಾಕಷ್ಟು ವೈರಲ್ ಆಗಿದೆ.
ಈ ಸಿನಿಮಾದಲ್ಲಿ ನೀವು ಬಾಲನಟಿಯಾಗಿದ್ರಾ ಎಂದು ನೆಟ್ಟಿಗರು ಪ್ರಶ್ನೆ ಕೇಳಲಾರಂಭಿಸಿದ್ದಾರೆ.
ವಿಚಾರ ಏನೆಂದರೆ, ಕ್ರಿಶ್ ಸಿನಿಮಾ ಶೂಟಿಂಗ್ ವೇಳೆ ಸಾಕ್ಷಿ ಸಿಂಗ್ ಧೋನಿ ಅಲ್ಲಿಗೆ ಪ್ರವಾಸಕ್ಕೆ ಹೋಗಿದ್ದರು.
ಈ ವೇಳೆ ಹೃತಿಕ್ ರೋಶನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನೇ ಈಗ ಪೋಸ್ಟ್ಮಾಡಿದ್ದಾರೆ.
ಇದು 2000 ಇಸವಿಯಿಂದ 2006ರವರೆಗಿನ ನೆನಪುಗಳು ಎಂದು ಸಾಕ್ಷಿ ಸಿಂಗ್ ಧೋನಿ ಬರೆದುಕೊಂಡಿದ್ದಾರೆ.
ನೀವು ಒಂಚೂರು ಬದಲಾಗಿಲ್ಲ. ನಿಮ್ಮ ಸ್ಮೈಲ್ ಈಗಲೂ ಹಾಗೆಯೇ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಫೋಟೋ ಹಂಚಿಕೊಂಡು 'ಡಾರ್ಲಿಂಗ್..' ಎಂದು ಬರೆದ ಸಾರಾ ತೆಂಡುಲ್ಕರ್
ರೋಹಿತ್ ಶರ್ಮಾ ನಂತರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 5 ಸಕ್ರಿಯ ಬ್ಯಾಟರ್ಗಳಿವರು!
IND vs SA ಏಕದಿನ: ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಬ್ಯಾಟರ್ಗಳು!
WPL 2026: ಪ್ರತಿ ತಂಡದಲ್ಲಿರುವ ಅತ್ಯಂತ ದುಬಾರಿ ಆಟಗಾರ್ತಿಯವರಿವರು!