ಭಾರತ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ? ಆ್ಯಪ್‌ನಲ್ಲಿದೆಯಾ ಲೈವ್ ಟೆಲಿಕಾಸ್ಟ್?
ಭಾರತ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ? ಆ್ಯಪ್‌ನಲ್ಲಿದೆಯಾ ಲೈವ್ ಟೆಲಿಕಾಸ್ಟ್? ಪಂದ್ಯದ ದಿನಾಂಕ, ಸ್ಥಳ, ಕ್ರೀಡಾಂಗಣ ಸೇರಿದಂತೆ ಪ್ರಶಸ್ತಿ ಸುತ್ತಿನ ಹೋರಾಟದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಟ್ರೋಫಿಗಾಗಿ ಭಾರತ ಪಾಕಿಸ್ತಾನ ಹೋರಾಟ
ಟ್ರೋಫಿಗಾಗಿ ಭಾರತ ಪಾಕಿಸ್ತಾನ ಹೋರಾಟ
ಏಷ್ಯಾಕಪ್ ಟೂರ್ನಿ ಅಂತಿಮ ಘಟ್ಟಕ್ಕೆ ತಲುಪಿದೆ. ಭಾರತ ಹಾಗೂ ಪಾಕಿಸ್ತಾನ ಫೈನಲ್ ಪ್ರವೇಶಿಸಿದ್ದು, ಟ್ರೋಫಿಗಾಗಿ ಹೋರಾಟ ನಡೆಸಲಿದೆ. ಏಷ್ಯಾಕಪ್ 2025ರಲ್ಲಿ ಲೀಗ್, ಸೂಪರ್ ಫೋರ್ ಹಂತದಲ್ಲಿ ಭಾರತ -ಪಾಕಿಸ್ತಾನ ಮುಖಾಮುಖಿಯಾಗಿದೆ. ಇದೀಗ 3ನೇ ಬಾರಿಗೆ ಫೈನಲ್ ಪಂದ್ಯದಲ್ಲಿ ಹೋರಾಟ ನಡಸೆಲಿದೆ.
ಸೆ.28ಕ್ಕೆ ಏಷ್ಯಾಕಪ್ ಫೈನಲ್
ಸೆ.28ಕ್ಕೆ ಏಷ್ಯಾಕಪ್ ಫೈನಲ್
ಸೆ.28 (ಭಾನುವಾರ) ಏಷ್ಯಾಕಪ್ ಫೈನಲ್ ಪಂದ್ಯ ನಡೆಯಲಿದೆ. ಕುತೂಹಲ ಹೆಚ್ಚಾಗಿದೆ. ಸೆಪ್ಟೆಂಬರ್ 9 ರಂದು 2025ರ ಏಷ್ಯಾಕಪ್ ಟೂರ್ನಿ ಆರಂಭಗೊಂಡಿತ್ತು. ಯುಎಇ ಆತಿಥ್ಯವಹಿಸಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಅದ್ಭುತ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದೆ.ಇತ್ತ ಪಾಕಿಸ್ತಾನ ಪ್ರಯಾಸದ ಮೂಲಕ ಫೈನಲ್ ಪ್ರವೇಶ ಪಡೆದಿದೆ.
8 ಗಂಟೆಗೆ ಆರಂಭಗೊಳ್ಳಲಿದೆ ಪಂದ್ಯ
8 ಗಂಟೆಗೆ ಆರಂಭಗೊಳ್ಳಲಿದೆ ಪಂದ್ಯ
ಏಷ್ಯಾಕಪ್ 2025ರ ಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ನಡೆಯಲಿದೆ. ಟಾಸ್ 7.30ಕ್ಕೆ ಪೂರ್ಣಗೊಳ್ಳಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಳ್ಳಲಿದೆ. ಭಾನುವಾರ ಸಂಜೆ ಭಾರತೀಯರು ಪಂದ್ಯ ವೀಕ್ಷಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ರೋಚಕ ಹೋರಾಟದ ನಿರೀಕ್ಷೆಯಲ್ಲಿದ್ದಾರೆ.
ಲೈವ್ ಟೆಲಿಕಾಸ್ಟ್ ಎಲ್ಲಿ?
ಲೈವ್ ಟೆಲಿಕಾಸ್ಟ್ ಎಲ್ಲಿ?
ಏಷ್ಯಾಕಪ್ 2025 ಟೂರ್ನಿಯ ಪ್ರಸಾರ ಹಕ್ಕು ಸೋನಿ ಟಿವಿ ಪಡೆದುಕೊಂಡಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಇಂಡಿಯಾದ ಸೋನಿ ಟಿವಿಯಲ್ಲಿ ಭಾರತ ಪಾಕಿಸ್ತಾನ ಪಂದ್ಯದ ನೇರ ಪ್ರಸಾರ ನಡೆಯಲಿದೆ. ಇನ್ನು ಸೋನಿ ಲೈಪ್ ಆ್ಯಪ್ ಹಾಗೂ ಫ್ಯಾನ್ ಕೋಡ್ ಆ್ಯಪ್‌ಗಳಲ್ಲೂ ಲೈವ್ ಪಂದ್ಯಕ್ಷ ವೀಕ್ಷಣೆ ಸಾಧ್ಯವಿದೆ.
ಹ್ಯಾಂಡ್ ಶೇಕ್ ಇಲ್ಲ
ಹ್ಯಾಂಡ್ ಶೇಕ್ ಇಲ್ಲ
ಪಾಕಿಸ್ತಾನ ವಿರುದ್ದ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ 2 ಬಾರಿ ಮುಖಾಮುಖಿಯಾಗಿದೆ. ಎರಡೂ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಸಂಭ್ರಮ ಆಚರಿಸಿತ್ತು. ಇದೀಗ ಮೂರನೇ ಮುಖಾಮುಖಿಯಾಗಿದೆ. ಆದರೆ ಎರಡೂ ಪಂದ್ಯದಲ್ಲಿ ಭಾರತ ಹ್ಯಾಂಡ್‌ಶೇಕ್ ಮಾಡಿಲ್ಲ. ಟಾಸ್ ವೇಳೆ ಸೂರ್ಯಕುಮಾರ್ ಯಾದವ್, ಇನ್ನು ಪಂದ್ಯದ ಮುಗಿದ ಬಳಿಕ ಟೀಂ ಇಂಡಿಯಾದ ಯಾವುದೇ ಕ್ರಿಕೆಟಿಗರು ಹ್ಯಾಂಡ್‌ಶೇಕ್ ಮಾಡಿಲ್ಲ.