ಟೀಂ ಇಂಡಿಯಾದ 6 ಕ್ರಿಕೆಟಿಗರಿಗೆ SUV ಕಾರ್ ಗಿಫ್ಟ್ ಕೊಟ್ಟ ಆನಂದ್‌ ಮಹೀಂದ್ರ..!

First Published Jan 23, 2021, 5:31 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಐವರು ಆಟಗಾರರು ಸೇರಿದಂತೆ ಒಟ್ಟು 6 ಕ್ರಿಕೆಟಿಗರಿಗೆ ಮಹೀಂದ್ರ ಗ್ರೂಪ್‌ ಚೇರ್‌ಮನ್‌ ಆನಂದ್ ಮಹೀಂದ್ರ ಥಾರ್ SUV ಕಾರ್‌ಗಳನ್ನು ಗಿಫ್ಟ್‌ ನೀಡಿದ್ದಾರೆ.

4 ಪಂದ್ಯಗಳ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯನ್ನು ಅಜಿಂಕ್ಯ ರಹಾನೆ ಪಡೆ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟೆಸ್ಟ್‌ ಸರಣಿಯಲ್ಲಿ ಮಿಂಚಿದ ಯುವ ಪ್ರತಿಭಾನ್ವಿತ ಆಟಗಾರರಿಗೆ ಆನಂದ್ ಮಹೀಂದ್ರ ಬಂಪರ್ ಗಿಫ್ಟ್‌ ನೀಡಿದ್ದಾರೆ. ಆನಂದ್ ಮಹೀಂದ್ರ ಸೋಷಿಯಲ್‌ ಮೀಡಿಯಾದ ಮೂಲಕ 6 ಕ್ರಿಕೆಟಿಗರಿಗೆ ಥಾರ್‌ SUVs ನೀಡುವುದಾಗಿ ಘೋಷಿಸಿದ್ದಾರೆ.