MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ

ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ

ಬೆಂಗಳೂರು: ಇದೇ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಇದರ ಜತೆಗೆ ಆರು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ. 

1 Min read
Author : Naveen Kodase
Published : Jun 06 2026, 05:24 PM IST
Share this Photo Gallery
  • FB
  • TW
  • Linkdin
  • Whatsapp
16
1. ಸೂರ್ಯಕುಮಾರ್ ಯಾದವ್ ಗೇಟ್‌ಪಾಸ್; ಶ್ರೇಯಸ್ ಅಯ್ಯರ್ ನಾಯಕ!
Image Credit : Getty

1. ಸೂರ್ಯಕುಮಾರ್ ಯಾದವ್ ಗೇಟ್‌ಪಾಸ್; ಶ್ರೇಯಸ್ ಅಯ್ಯರ್ ನಾಯಕ!

ಕೆಲ ತಿಂಗಳ ಹಿಂದಷ್ಟೇ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸಿ ಶ್ರೇಯಸ್ ಅಯ್ಯರ್‌ಗೆ ಭಾರತ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ಪಟ್ಟ ಕಟ್ಟಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿ, 2028ರ ಒಲಿಂಪಿಕ್ಸ್‌ನಲ್ಲೂ ಶ್ರೇಯಸ್ ಅಯ್ಯರ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವುದು ಖಚಿತ ಎನ್ನಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
2. ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು?
Image Credit : ANI

2. ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು?

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ ಅದ್ಭುತ ಆಟ ಪ್ರದರ್ಶಿಸಿದ್ದರು. ಹೀಗಿದ್ದೂ ಈ ಇಬ್ಬರನ್ನು ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಇದರ ಜತೆಗೆ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಟ್ಟಿರುವುದರಿಂದ ಈ ಮೂವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

Related Articles

Related image1
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
Related image2
ರೋಹಿತ್ ಶರ್ಮಾ, ಕೊಹ್ಲಿ ಅಭಿಮಾನಿಗಳಿಗೆ ಬಂಪರ್, ಖುಷಿ ಸುದ್ದಿ ನೀಡಿದ ಬಿಸಿಸಿಐ
36
3. ಎರಡು ಐಪಿಎಲ್‌ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ:
Image Credit : ANI

3. ಎರಡು ಐಪಿಎಲ್‌ ಟ್ರೋಫಿ ಗೆದ್ದ ನಾಯಕನಿಗಿಲ್ಲ ಸ್ಥಾನ:

ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಸತತ ಎರಡು ಐಪಿಎಲ್ ಟ್ರೋಫಿ ಗೆಲ್ಲುವುದರ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಆರ್‌ಸಿಬಿ ನಾಯಕನಿಗೆ ಮತ್ತೆ ಆಯ್ಕೆ ಸಮಿತಿ ಅನ್ಯಾಯ ಮಾಡಿದೆ ಎನ್ನುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಡಲಾರಂಭಿಸಿದೆ.

46
4. ಗಂಭೀರ್ ಕಾಲಘಟ್ಟದಲ್ಲಿ ಆರ್‌ಸಿಬಿ ಆಟಗಾರರಿಗಿಲ್ಲ ಸ್ಥಾನ?
Image Credit : X/RCBTweets

4. ಗಂಭೀರ್ ಕಾಲಘಟ್ಟದಲ್ಲಿ ಆರ್‌ಸಿಬಿ ಆಟಗಾರರಿಗಿಲ್ಲ ಸ್ಥಾನ?

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದರಲ್ಲೂ ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್, ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ, ರಸಿಕ್ ಸಲಂ ಧರ್ ಹೀಗೆ ಹಲವು ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಿದ್ದೂ ಗಂಭೀರ್-ಅಗರ್ಕರ್‌ ಜೋಡಿ ಮತ್ತೊಮ್ಮೆ ಆರ್‌ಸಿಬಿ ಆಟಗಾರರನ್ನು ಕಡೆಗಣಿಸಿದೆ.

56
5. ಭವಿಷ್ಯದ ನಾಯಕನಾಗಿ ತಿಲಕ್ ವರ್ಮಾಗೆ ಮಣೆ:
Image Credit : ANI

5. ಭವಿಷ್ಯದ ನಾಯಕನಾಗಿ ತಿಲಕ್ ವರ್ಮಾಗೆ ಮಣೆ:

ಇನ್ನು ಭಾರತ ತಂಡದ ಭವಿಷ್ಯದ ನಾಯಕನನ್ನಾಗಿ ರೂಪಿಸುವ ನಿಟ್ಟಿನಲ್ಲಿ ತಿಲಕ್ ವರ್ಮಾಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಈ ಅವಕಾಶವನ್ನು ಯಾವ ರೀತಿ ತಿಲಕ್ ವರ್ಮಾ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

66
6. ರಿಂಕು ದೇಶಿ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತು ಮಾಡಿದರಷ್ಟೇ ಚಾನ್ಸ್?
Image Credit : Getty

6. ರಿಂಕು ದೇಶಿ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತು ಮಾಡಿದರಷ್ಟೇ ಚಾನ್ಸ್?

ಇನ್ನು ರಿಂಕು ಸಿಂಗ್ ಇತ್ತೀಚೆಗೆ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಹೀಗಾಗಿ ದೇಶಿ ಕ್ರಿಕೆಟ್‌ನಲ್ಲಿ ರಿಂಕು ಸಿಂಗ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಎನ್ನುವ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಆಯ್ಕೆ ಸಮಿತಿಯು ರವಾನಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಬಿಸಿಸಿಐ
ಶ್ರೇಯಸ್ ಅಯ್ಯರ್
Latest Videos
Recommended Stories
Recommended image1
ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್
Recommended image2
IPL 2026 ಫೈನಲ್ ಸೋಲಿನ ಬೆನ್ನಲ್ಲೇ ಈ ಮೂವರಿಗೆ ಗುಜರಾತ್ ಟೈಟಾನ್ಸ್ ಗೇಟ್‌ಪಾಸ್? ಈ ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು
Recommended image3
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
Related Stories
Recommended image1
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
Recommended image2
ರೋಹಿತ್ ಶರ್ಮಾ, ಕೊಹ್ಲಿ ಅಭಿಮಾನಿಗಳಿಗೆ ಬಂಪರ್, ಖುಷಿ ಸುದ್ದಿ ನೀಡಿದ ಬಿಸಿಸಿಐ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved