ನನ್ನ ಭಾರತ ಬೆಳಗುತಿರಲಿ: ಕೊರೋನಾ ಸಮರಕ್ಕೆ ಮತ್ತೆ ಒಗ್ಗಟ್ಟಿನ ಮಂತ್ರ!

First Published 6, Apr 2020, 7:58 AM

ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೋನಾ ವೈರಸ್‌ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ದೀಪ ಹಚ್ಚುವ ಆಂದೋಲನಕ್ಕೆ ನಿರೀಕ್ಷೆಯಂತೆಯೇ ಅಭೂತಪೂರ್ವ ಸ್ಪಂದನೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ದೇಶದ ಮೂಲೆ ಮೂಲೆಯಲ್ಲೂ ದೀಪಗಳು ಬೆಳಗಿವೆ. ಸಿನಿ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಮಾತ್ರವಲ್ಲದೇ ದೇಶದ ಪ್ರತಿಯೊಬ್ಬ ನಾಗರಿಕರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಂದು ಕೊರೋನಾ ಯೋಧರಿಗೆ ಅಭಿನಂದಿಸಿ ಚಪ್ಪಾಳೆ ಹೊಡೆಯಲು ಭಿಕ್ಷುಕನೂ ಸಾಥ್ ನೀಡಿದ್ದ, ಈ ಬಾರಿ ರಸ್ತೆ ಬದಿಯ ಜೋಪಡಿಗಳಿಂದಲೂ ದೀಪದ ಬೆಳಕು ಹರಡಿತ್ತು. ಇಲ್ಲಿದೆ ನೋಡಿ, ಭಾರತ ಬೆಳಗಿದ ಒಂದು ನೋಟ

ಕೊರೋನಾ ಸಮರಕ್ಕೆ ಸಾಥ್ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಯಿಂದ 9  ನಿಮಿಷಕ್ಕೆ ದೀಪ ಬೆಳಗಿಸಿ ಎಂದು ಕೊಟ್ಟ ಕರೆಗೆ ಸಿಕ್ಕ ಅಭೂತಪೂರ್ವ ಬೆಂಬಲ.

ದೇಶದ ಮೂಲೆ ಮೂಲೆಯಲ್ಲೂ ದೀಪದ ಬೆಳಕು ಪಸರಿಸಿದೆ.

ಬಡ ವರ್ಗದ ಜನರೂ ತಮ್ಮ ಮನೆ ಬಾಗಿಲಿನಲ್ಲಿ ದೀಪ ಬೆಳಗಿ ಒಗ್ಗಟ್ಟ ಪ್ರದರ್ಶಿಸಿದ್ದಾರೆ.

ರಸ್ತೆ ಬದಿಯ ಜೋಪಡಿಗಳಲ್ಲೂ ಕಂಡು ಬಂದ ದೀಪದ ಬೆಳಕು.

ಒಗ್ಗಟ್ಟಿನ ಮಂತ್ರ ಜಪಿಸಿದ ಭಾರತೀಯರು.

ಒಗ್ಗಟ್ಟಿನ ಮಂತ್ರ ಜಪಿಸಿದ ಭಾರತೀಯರು.

ನನ್ನ ಭಾರತ ಯಾವತ್ತೂ ಬೆಳಗುತ್ತಿರಲಿ ಎಂಬ ಸಂದೇಶ ಕೊಟ್ಟ ಬಡ ವರ್ಗದ ಜನ

ಮನೆಯ ಬಾಗಿಲಲ್ಲಿ ದೀಪ ಬೆಳಗಿದ ವೃದ್ಧ ದಂಪತಿ.

ಮನೆಯ ಬಾಗಿಲಲ್ಲಿ ದೀಪ ಬೆಳಗಿದ ವೃದ್ಧ ದಂಪತಿ.

ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರುಬಡ್ನಿಯಲ್ಲಿ ದೀಪ ಬೆಳಗಿಸಿದ ಸಿಂಗರ್ ಹನುಮಂತ.  ಕುರಿಗಾಯಿ‌ ಸಿಂಗರ್ ಮನೆಯ ಮುಂದೆ ಕುಟುಂಬದ ಸದಸ್ಯರ ಜೊತೆಗೆ ದೀಪ ಬೆಳೆಗಿದ ಹನುಮಂತ ಲಮಾಣಿ. ದೀಪ ಬೆಳಗಿಸೋ ಮೂಲಕ ಕೊರೊನಾ ಸೋಂಕು ಹರಡೋದನ್ನ ತಡೆಯುವಂತೆ ಮನವಿ.

ಸದ್ಯ ಈ ಎಲ್ಲಾ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ಒಗ್ಗಟ್ಟು ಕೊರೋನಾ ಮಾತ್ರವಲ್ಲ ಅದೆಷ್ಟೇ ದೊಡ್ಡ ಸಂಕಟವಿದ್ದರೂ ನಾವೆಲ್ಲಾ ಒಂದಾಗಿ ಎದುರಿಸುತ್ತೇವೆ ಎಂಬ ಸಂದೇಶ ನೀಡಿದೆ.

loader