ಗಿಜಿಗಿಡುತ್ತಿದ್ದ ಮಾಯಾನಗರ ಫುಲ್ ಸೈಲೆಂಟ್..! ಇಲ್ಲಿವೆ ಫೋಟೋಸ್

First Published 25, Mar 2020, 3:51 PM IST

ಕೊರೋನಾ ವೈರಸ್‌ ತಡೆಯಲು ದೇಶವೇ ಲಾಕ್‌ಡೌನ್ ಆಗಿದೆ. ಡ್ರೀಮ್ ಸಿಟಿ, ಮಾಯಾನಗರಿ ಮುಂಬೈಯೂ ಇದಕ್ಕೆ ಹೊರತಲ್ಲ. ದೇಶದೆಲ್ಲೆಡೆಯಿಂದ ಬರುತ್ತಿದ್ದ ಜನರನ್ನು ಯಾರು, ಏನು ಎಂದು ಕೇಳದೆ ತನ್ನ ತೆಕ್ಕೆಯಲ್ಲಿಟ್ಟು ಸಲಹುತ್ತಿದ್ದ ಮುಂಬಯಿ ಈಗ ಹೇಗಿದೆ..? ಸ್ತಬ್ಧವಾಗಿರುವ ಮುಂಬೈ ನಗರವನ್ನು ಊಹಿಸುವುದೂ ಕಷ್ಟ. ಆದರೆ ಈಗ ಸಂಪುರ್ಣ ಲಾಕ್‌ಡೌನ್‌. ಸದಾ ಬದುಕಿನ ಹಾಡು ಗುನುಗುವ ಮುಂಬೈ ಮೌನವಾಗಿದೆ. ಇಲ್ಲಿವೆ ಫೋಟೋಸ್..!

ನಿತ್ಯ ಸಾವಿರಾರು ಟ್ಯಾಕ್ಸಿ, ಖಾಸಗಿ ವಾಹನಗಳು ಓಡಾಡುವ ರಸ್ತೆಗಳು ಭಣಗುಟ್ಟುತ್ತಿರುವುದು.

ಮುಂಬೈಯ ಲೋಕಲ್ ಟ್ರೈನ್, ಮೆಟ್ರೋ ಸೇರಿ ಎಲ್ಲವೂ ಖಾಲಿ

ಚಾಟ್ಸ್‌, ಬಲೂನ್‌, ಗಾಗಲ್ಸ್ ಮಾರುವವರೂ, ಪ್ರವಾಸಿಗರಿಂದ ಗದ್ದಲ ಮಾಡುವ ಬೀಚ್‌ ಸದ್ಯದದ ಮಟ್ಟಿಗೆ ಸೈಲೆಂಟ್

ಸೂಟ್‌, ಗಾಗಲ್ಸ್, ಹೈ ಹೀಲ್ಸ್ ಹಾಕುವವರೇ ತುಂಬಿರುವ ಕಾರ್ಪೊರೇಟ್ ಕಟ್ಟಡಗಳೂ ಭಣ ಭಣ

ಕಾರ್ಮಿಕರಿಲ್ಲ, ಕೆಲಸವೂ ಇಲ್ಲ.. ಆದರೂ ಮುಂಬೈ ಸೌಂದರ್ಯ ಸ್ವಲ್ಪವೂ ಕಮ್ಮಿಯಾಗಿಲ್ಲ

ಕೊರೋನಾ ಭೀತಿಯಿಂದ ಯಾರೊಬ್ಬರೂ ರಸ್ತೆಗಳಿಯುತ್ತಿಲ್ಲ. ರಸ್ತೆಗಳೆಲ್ಲ ಸಂಪೂರ್ಣ ಸ್ವತಂತ್ರ..!

ಲಾಕ್‌ಡೌನ್‌ನಿಂದ ತತ್ತರಿಸಿ ಹೋಗಿರುವ ಮುಂಬೈಯ ಕಾರ್ಮಿಕ ವರ್ಗ..! ಅವರು ವರ್ಕ್ ಫ್ರಂ ಹೋಂ ಮಾಡುವುದು ಸಾಧ್ಯವಿಲ್ಲ ಅಲ್ಲವೇ..?

ಮುಂಬೈ ತಾಜ್ ಹೋಟೆಲ್‌ ಸುತ್ತ ಮುತ್ತ ಹಕ್ಕಿಗಳ ಕಲರವ ಬಿಟ್ಟು ಬೇರೆ ಸದ್ದಿಲ್ಲ

ಟ್ರಾಫಿಕ್ ಲೈಟ್‌ಗಳು ಬಣ್ಣ ಬದಲಾಯಿಸುತ್ತಿವೆ, ಆದರೆ ರಸ್ತೆಯಲ್ಲಿ ವಾಹನಗಳೇ ಇಲ್ಲ

ನಗರ ಜನರಿಲ್ಲದೆಯೂ ಇಷ್ಟೊಂದು ಸುಂದರವಾಗಿ ಕಾಣಬಲ್ಲದು

ಎಲ್ಲವೂ ನಗಣ್ಯ ಎಂದು ಪಿಸುಗುಡುತ್ತಿಲ್ಲವೇ ಈ ಚಿತ್ರ..?

ಹಳಿಗಳೂ, ಬದುಕೂ ಕೆಲ ದಿನಗಳಿಗೆ ಖಾಲಿ..!

ಹಳಿಗಳೂ, ಬದುಕೂ ಕೆಲ ದಿನಗಳಿಗೆ ಖಾಲಿ..!

ಜನರಿಲ್ಲದ ಮೆಟ್ರೋ ನಿಲ್ದಾಣ, ಬಸ್‌ ಸ್ಟಾಪ್ಸ್..

ಮರದ ನೆರಳಿನಲ್ಲಿ ಹಾಯಾಗಿ ವಾಕಿಂಗ್ ಹೋಗುವವರೆಲ್ಲ ನಾಲ್ಕು ಗೋಡೆಯ ಮಧ್ಯೆ ಬಂಧಿ

ಯಾರೂ ಇಲ್ಲದಿದ್ದರೂ ದಡಕ್ಕಪ್ಪಳಿಸುವ ಅಲೆಗಳನ್ನು ಎಣಿಸುತ್ತಾ ಕೂರುವ ಪ್ರೇಮಿಗಳೂ ಇಲ್ಲ.. ಸಂಪೂರ್ಣ ಖಾಲಿ ರಸ್ತೆಗಳು

ಪಾವ್ ಭಾಜಿ ಮಾಡುವವರಿಲ್ಲದೆ, ಕೊಳ್ಳುವವರಿಲ್ಲದೆ, ಭಣಗುಡುತ್ತಿರುವ ಮುಂಬೈ ಬೀಚ್..! ಲಾಠಿ ಹಿಡಿದಿರುವ ಖಾಕಿ ಪಡೆ ಮಾತ್ರ

ಷೇರುಪೇಟೆಯೂ ಇಲ್ಲ, ಗೂಳಿ ಆಟವೂ ತೋರುತ್ತಿಲ್ಲ. ಒಂದು ನೀರವ ಮೌನ

loader