ಕೊರೋನಾ ಸಮರಕ್ಕೆ ಶಕ್ತಿ ತುಂಬಿದ 'ಮಾಸ್ಕ್ ಮಹಿಳೆ’ ಸುಹಾನಿಯ ಕಹಾನಿ!
ಚೀನಾದಿಂದ ಆರಂಭವಾದ ಮಾರಕ ಕೊರೋನಾ ಸದ್ಯ ವಿಶ್ವದಾದ್ಯಂತ ತನ್ನ ಅಟ್ಟಹಾಸ ಆರಂಭಿಸಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡಾ ಕೊರೋನಾ ರುದ್ರ ನರ್ತನಕ್ಕೆ ಅಕ್ಷರಶಃ ನಲುಗಿದೆ. ಹೀಗಿರುವಾಗ ಇದನ್ನು ನಿಯಂತ್ರಿಸಲು ಕೊರೋನಾ ಯೋಧರಾಗಿ ವೈದ್ಯರು, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹೀಗೆ ಅನೇಕ ಮಂದಿ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಸದ್ಯ ಈ ಸಮರಕ್ಕೆ ಸುಹಾನಿ ಮೋಹನ್ ಕೂಡಾ ಸಾಥ್ ನೀಡಿದ್ದಾರೆ. ಅಷ್ಟಕ್ಕೂ ಈ ಸುಹಾನಿ ಯಾರು? ಇಲ್ಲಿದೆ ನೋಡಿ ಈ ಸುಹಾನಿಯ ಕಹಾನಿ
113

ಸುಹಾನಿ ಮೋಹನ್. ಮೆಟಲರ್ಜಿಕಲ್ ಎಂಜಿನಿಯರಿಂಗ್ ಮತ್ತು ಮೆಟೀರಿಯಲ್ಸ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವೀಧರೆ. ಇನ್ನೂ ಮೂವತ್ತು ವರ್ಷ ವಯಸ್ಸು. ಏನಾದರೂ ಸಾಧಿಸಬೇಕೆಂಭ ಛಲದ ಯುವತಿ. ಇಷ್ಟು ಕಡಿಮೆ ವಯಸ್ಸಿನಲ್ಲಿ ದೇಶವೇ ಮೆಚ್ಚುವಂತ ಸಾಧನೆ ಮಾಡಿದ್ದಾಳೆ.

213
ಭಾರತದಲ್ಲಿ ಮೊದಲ ಬಾರಿಗೆ ಬಡ-ಗ್ರಾಮೀಣ ಮಹಿಳೆಯರಿಗೆ ಗುಣಮಟ್ಟದ ಅತ್ಯಂತ ಕೈಗೆಟಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್ಗ ಳನ್ನು ಪೂರೈಸಿ, ನೈರ್ಮಲ್ಯ ರಕ್ಷಣೆಯ ಅರಿವು ಮೂಡಿಸಿದ ದಿಟ್ಟ ಯುವತಿ ಈಕೆ.

313
ಐಐಟಿ ಬಾಂಬೆಯಲ್ಲಿ ಎಂಜಿನಿಯರಿಂಗ್ ಮುಗಿಸಿ ನಂತರ Deutsche ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಜೀವನ ತಿರುವು ಪಡೆಯುತ್ತದೆ. ಕೆಲಸದ ಮೇಲೆ ಒಮ್ಮೆ ಹಳ್ಳಿಗೆ ಹೋದಾಗ ಅಲ್ಲಿನ ಬಡ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಪಡುತ್ತಿರುವ ಪಾಡು, ಸಮಸ್ಯೆಗಳು ಆಕೆಯ ಅನುಭವಕ್ಕೆ ಬರುತ್ತದೆ.

413
ನಮ್ಮ ದೇಶದಲ್ಲಿ ಕೇವಲ ಶೇ.12 ಮಹಿಳೆಯರು ಪ್ಯಾಡ್ ಬಳಸುತ್ತಿದ್ದಾರೆ ಅಂತ ನಿಲ್ಸನ್ ಸರ್ವೆ ಹೇಳುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೇಯದು ಮೆಡಿಕಲ್ ಶಾಪ್ ಗಳಲ್ಲಿ ಹೆಚ್ಚಾಗಿ ಗಂಡಸರೇ ಇರುತ್ತಾರೆ, ಹೆಂಗಸರಿಗೆ ಪ್ಯಾಡ್ ಕೇಳಲು ಮುಜುಗರ. ಎರಡನೇಯ ಕಾರಣ ಅಂದರೆ ಪ್ಯಾಡ್ ಗಳು ದುಬಾರಿ. ಹೀಗಾಗಿ ಹಳ್ಳಿಗಳಲ್ಲಿ, ಬಡ ಕುಟುಂಬಗಳಲ್ಲಿ ಹೆಂಗಸರು ಬಟ್ಟೆಯನ್ನೇ ಬಳಸುತ್ತಾರೆ.

513
ಇದು ಸುಹಾನಿ ಮೋಹನ್ ಗೆ ತನ್ನ ಬ್ಯುಸಿನೆಸ್ ಟ್ರಿಪ್ ನಲ್ಲಿ ಅರಿವಿಗೆ ಬರುತ್ತದೆ. ಆ ಕ್ಷಣವೇ ಇದಕ್ಕೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾಳೆ. ಪ್ಯಾಡ್ ಬಳಕೆ ಹೆಚ್ಚಿಸಿ ಹೆಂಗಸರ ಆರೋಗ್ಯ ರಕ್ಷಣೆ ಮಾಡಬೇಕು ಅಂದರೆ ಮಹಿಳೆಯರೇ ಇದನ್ನು ಮಾರುವಂತಾಗಬೇಕು, ಎರಡನೆಯದಾಗಿ ಬೆಲೆ ಕಡಿಮೆಯಾಗಬೇಕು. ಇದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಾಳೆ ಸುಹಾನಿ. ಅಲ್ಲೇ ಆಕೆ ನಿರ್ಧಿರಿಸುತ್ತಾಳೆ. ಅಷ್ಟೆ, ಕೈತುಂಬ ಒಳ್ಳೆಯ ಆದಾಯ ತರುತ್ತಿದ್ದ ಕೆಲಸವನ್ನು ಬಿಟ್ಟು ಸ್ಯಾನಿಟರಿ ಪ್ಯಾಡ್ ತಯಾರಿಕೆಗಾಗಿ `ಸರಳ್ ಡಿಸೈನ್ ‘ ಹೆಸರಿನ ಕಂಪನಿ ಶುರು ಮಾಡುತ್ತಾಳೆ.

613
ಅವಳ ಈ ಪಯಣದಲ್ಲಿ ಜತೆ ಸೇರುತ್ತಾರೆ ಕಾರ್ತಿಕ್ ಮೆಹ್ತಾ. ಆತ ಐಐಟಿ ಮದ್ರಾಸ್ ನ ವಿದ್ಯಾರ್ಥಿ. ಹೊಸತೇನಾದರೂ ಅನ್ವೇಷಣೆ ಮಾಡಬೇಕೆಂದು ಕೊಂಡಿದ್ದ ಕಾರ್ತಿಕ್ ಗೆ ಈ ಅವಕಾಶ ಹೇಳಿ ಮಾಡಿಸಿದ ಹಾಗಿತ್ತು. ಅವರಿಬ್ಬರೂ ಸೇರಿ ನಡೆಸುತ್ತಿರುವ ಈ ಸ್ಯಾನಿಟರಿ ಪ್ಯಾಡ್ ಕಂಪನಿ ಗ್ರಾಮೀಣ ಪ್ರದೇಶದಲ್ಲಿ ಕ್ರಾಂತಿಯನ್ನೇ ಮಾಡುತ್ತದೆ.

713
ಕಂಪನಿ ಶುರುವಾಗಿದ್ದು 2014ರಲ್ಲಿ. ಪಯಣ ಅಷ್ಟು ಸುಲಭ ಇರಲಿಲ್ಲ. ಎರಡು ವರ್ಷಗಳ ಸತತ ಪ್ರಯತ್ನದ ನಂತರ ಅವರ ಪ್ಯಾಡ್ ಯಂತ್ರದ ವಿನ್ಯಾಸ ಕಾರ್ಯರೂಪಕ್ಕೆ ಬರುತ್ತದೆ. ಒಂದು ದಿನಕ್ಕೆ 7,000 ಪ್ಯಾಡ್ ತಯಾರಿಸಬಲ್ಲದು ಆ ಯಂತ್ರ. ಆರು ರೂಪಾಯಿಗೆ ಒಂದು ಪ್ಯಾಡ್. ಅಷ್ಟೊಂದು ಸೋವಿಯಲ್ಲಿ ಮಾರಾಟವಾಗುತ್ತದೆ. ಒಂದು ವರ್ಷದಲ್ಲಿ ಹತ್ತು ಲಕ್ಷ ಪ್ಯಾಡ್ ಮಾರಾಟ ಮಾಡುತ್ತಾರೆ. ಮಹಿಳೆಯರೇ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಅಷ್ಟೇ ಅಲ್ಲ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಮಷಿನ್ ತಯಾರಿಸಿ ಮಾರುತ್ತಾರೆ. ಆ ಮಷಿನ್ ಬಳಸಿ ಮಹಿಳೆಯರು ಇಂದು ಗ್ರಾಮೋದ್ಯೋಗ ಶುರುಮಾಡಿದ್ದಾರೆ. ದೇಶಾದ್ಯಂತ ಸರಳ್ ಡಿಸೈನ್ ಮಷಿನ್ ಗಳು ಕೆಲಸ ಮಾಡುತ್ತಿವೆ.

813
ಈಗೊಂದು ತಿಂಗಳ ಹಿಂದೆ, ಕೊರೋನಾ ವೈರಸ್ ಹರಡುವಿಕೆ ಶುರುವಾಗಿದ್ದು ಜನವರಿಯ ಶುರುವಿನಲ್ಲಿ. ಅದು ಚೀನಾದಲ್ಲಿ ಕೈಮೀರಿದಾಗ ಭಾರತದಲ್ಲೂ ಹರಡಬಹುದು ಎನ್ನುವ ಮುಂನ್ಸೂಚನೆ ಸಿಕ್ಕಿತ್ತು ಸುಹಾನಿಗೆ. ಹೇಗೂ ಪ್ಯಾಡ್ ಮಾಡುತ್ತಿದ್ದೇವೆ. ಮಾಸ್ಕ್ ಯಾಕೆ ಮಾಡಬಾರದು ಎಂಬ ಯೋಚನೆ ಬಂದಿತ್ತು ಸುಹಾನಿಗೆ. ಏಕೆಂದರೆ ಸ್ಯಾನಿಟರಿ ಪ್ಯಾಡ್ ಮತ್ತು ಮುಖಗವಸುಗಳನ್ನು ತಯಾರಿಸಲು ಬಳಸುವ ತಂತ್ರಜ್ಞಾನ ಒಂದೇ ಆಗಿತ್ತು. ಜತೆಗೆ ಬ್ಯಾಂಡ್ವಿಡ್ತ್ ಇದೆ. ನಾಳೆ ಭಾರತದಲ್ಲಿ ಕಮ್ಮಿ ಬಿದ್ದರೆ ತಾವು ಸರಬರಾಜು ಮಾಡಬಹುದಲ್ಲ ಎನ್ನುವ ವಿಚಾರ ತಲೆಯಲ್ಲಿ ಸುಳಿದಿತ್ತು. ಯಾವುದಕ್ಕೂ ಇರಲಿ ಎಂದು ತಮ್ಮ ಮಷಿನ್ ವಿನ್ಯಾಸ ಬದಲಾಯಿಸಿ ಮಾರ್ಚ್ 15 ರೊಳಗೆ ತಯಾರಾಗಿದ್ದರು.

913
ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಾಗ ಕೊರೋನಾ ಭಾರತ್ಕಕೆ ಕಾಲಿಟ್ಟಿತ್ತು. ನಿರೀಕ್ಷಿಸಿದ ಆತಂಕ ನಿಜವಾಗಿತ್ತು. ಸೋಂಕು ತಡೆಗಾಗಿ ಮುಖಗವಸು(ಮಾಸ್ಕ್) ಧರಿಸುವುದು ಅನಿವಾರ್ಯ ಎಂಬ ಸ್ಥಿುತಿ ನಿರ್ಮಾಣವಾಯಿತು. ಭಾರತದಲ್ಲಿ ಕೋವಿಡ್-19ರ ಪ್ರಕರಣಗಳು ಹೆಚ್ಚಲಾರಂಭಿಸುತ್ತಿದ್ದಂತೆ ಔಷಧ ವ್ಯಾಪಾರಿಗಳು ಮನಬಂದ ದರಕ್ಕೆ ಮಾಸ್ಕ್ಗಾಳನ್ನು ಮಾರಲಾರಂಭಿಸಿದರು.

1013
200-300 ರೂ. ತೆತ್ತರೂ ಮಾಸ್ಕ್ ಸಿಗದ ಪರಿಸ್ಥಿತಿ ನಿರ್ಮಾಣವಾಯಿತು. ಇದನ್ನು ಗಮನಿಸಿದ, ಸುಹಾನಿ ಮತ್ತವರ ತಂಡ ತಾವು ರಂಗಕ್ಕೆ ಧುಮುಕಲು ಇದು ಸಕಾಲ ಎಂದು ಯೋಚಿಸಿತು. ಆದರೆ ಇವರ ಐಡಿಯಾವನ್ನು ಸ್ವೀಕರಿಸಿ ಅದರ ಉತ್ಪಾದನೆಗೆ ಯಾರೂ ಮುಂದೆ ಬರುವವರಿರಲಿಲ್ಲ. ಸಾಕಷ್ಟು ಜನರನ್ನು ಸುಹಾನಿ ಸಂಪರ್ಕ ಮಾಡುತ್ತಾಳೆ. ಆದರೆ ಯಾರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ. ಎಲ್ಲ ಪ್ರಯತ್ನಗಳೂ ವಿಫಲವಾಗುತ್ತದೆ. ಆದರೆ ಸುಹಾನಿ ಸೋಲನ್ನು ಸ್ವೀಕರಿಸುವುದಿಲ್ಲ.

1113
ಇದೇ ಪ್ರಯತ್ನದಲ್ಲಿ ಆನಂದ್ ಮಹೀಂದ್ರಾರವರ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ತನ್ನ ಗೆಳತಿ ಶ್ರುತಿಗೆ ಕರೆ ಮಾಡುತ್ತಾಳೆ ಸುಹಾನಿ. ಆಕೆ, ಐಐಟಿ ಬಾಂಬೆಯಲ್ಲಿ ಸುಹಾನಿಯ ಜ್ಯೂನಿಯರ್. ಆಕೆಯ ನೆರವನ್ನು ಕೋರಿದ ಸುಹಾನಿ, 'ನಮ್ಮದು ಪ್ಯಾಡ್ ಕಂಪನಿ ಇದೆ, ಮಷಿನ್ ಇದೆ. ಇವತ್ತು ನಮ್ಮ ದೇಶದಲ್ಲಿ ಮಾಸ್ಕ್ನ ಕೊರತೆ ಇದೆ. ಮುಂದೆ ಕೊರತೆ ಇನ್ನಷ್ಟು ಹೆಚ್ಚಬಹುದು ನಾವು ಏನಾದರೂ ಮಾಡಬೇಕು' ಎಂದರು. ಗೆಳತಿಗೂ ಇದು ಮನವರಿಕೆಯಾಗಿ ಇಬ್ಬರೂ ಚರ್ಚಿಸಿದರು. ತಕ್ಷಣವೇ ಶ್ರುತಿ ತನ್ನ ಬಾಸ್ ಮಹೀಂದ್ರಾ ಅವರನ್ನು ಸಂಪರ್ಕಿಸಿ ತಮ್ಮ ವಿಚಾರವನ್ನು ಮುಂದಿಡುತ್ತಾಳೆ. 'ಅವರ ವಿನ್ಯಾಸ, ನಮ್ಮ ಫ್ಯಾಕ್ಟರಿ ' ಎಂಬ ಶ್ರುತಿಯ ಪ್ರಸ್ತಾಪ ತಕ್ಷಣವೇ ಬಾಸ್ ಒಪ್ಪಿಗೆ ನೀಡುತ್ತಾರೆ. ಸತ್ತು ಹೋಗಿದ್ದ ಒಂದು ವಿಚಾರಕ್ಕೆ ಮತ್ತೆ ಜೀವ ಬರುತ್ತದೆ!

1213
ಆನಂದ್ ಮಹೀಂದ್ರಾ ಅವರು ಕೇವಲ ನಾಲ್ಕು ಗಂಟೆಗಳಲ್ಲಿ, ತಮ್ಮ ಆಟೋಮೋಟಿವ್ ಮುಖ್ಯಸ್ಥರನ್ನು ಅವರೊಂದಿಗೆ ಸಂಪರ್ಕಿಸಿದರು. ಎಲ್ಲ ಅವಶ್ಯಕತೆಗಳಲ್ಲಿ ಯುವಕರ ಯೋಜನೆಯನ್ನು ಬೆಂಬಲಿಸುವ ಮೂಲಕ ಸಹಾಯಕ್ಕೆ ನಿಂತರು. ಮುಂಬಯಿಯಲ್ಲಿರುವ ಮಹೀಂದ್ರಾ ಫ್ಯಾಕ್ಟರಿಯಲ್ಲಿ ಸರಳ್ ಡಿಸೈನ್ ಕಂಪನಿಯ ಮಷಿನ್ ಬರುತ್ತದೆ. ಕೇವಲ 100 ತಾಸಿನಲ್ಲಿ ಪ್ಯಾಡ್ ಮಷಿನನ್ನು, ಮಾಸ್ಕ್ ಮಷಿನ್ ಆಗಿ ಬದಲಾಯಿಸಲಾಗುತ್ತದೆ. ಹೆಚ್ಚು ಜನ ಸೇರಬಾರದು ಅದಕ್ಕಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ರಿಮೋಟ್ ನಲ್ಲಿದ್ದು ಕಾರ್ತಿಕ್ ಡಿಸೈನ್ ಸಂಬಂಧಪಟ್ಟ ಕೆಲಸ ನೋಡಿಕೊಳ್ಳುತ್ತಾರೆ. ಈಗ ಅಲ್ಲಿ ಅತೀ ಕಡಿಮೆ ಬೆಲೆಯ ಮಾಸ್ಕ್ ತಯಾರಿಕೆಯ ಮಷಿನ್ ತಯಾರಾಗಿದೆ, ಕೆಲಸ ಮಾಡುತ್ತಿದೆ.

1313
ದೇಶಕ್ಕೆ ಈ ಸಮಯಕ್ಕೆ ಏನು ಬೇಕು ಎನ್ನುವುದು ಮುಖ್ಯ. ಲಾಭವೊಂದೇ ವ್ಯಾಪಾರದ ಗುರಿ ಆಗಬಾರದು. ಪ್ಯಾಡ್ ಅಗತ್ಯ ಇತ್ತು ಪ್ಯಾಡ್ ಮಹಿಳೆ ಆದಳು. ಈಗ ಮಾಸ್ಕ್ ಬೇಕು ಅದಕ್ಕೂ ರೆಡಿ. ಯೋಜನೆಗೆ ತಕ್ಕಂತೆ ಕೆಲಸಾದರೆ ಸುಹಾನಿ ನಿಜವಾಗಿಯೂ ಭಾರತದ ಮಾಸ್ಕ್ ಮಹಿಳೆ.

Latest Videos