ಆಸ್ಕರ್ 2023ರ ಕೆಟ್ಟ ಉಡುಗೆ ಧರಿಸಿದವರ ಪಟ್ಟಿಯಲ್ಲಿ ರಿಹನ್ನಾ, ಲೇಡಿ ಗಾಗಾ
ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಿಂಚಿದ್ದಾರೆ. ಭಾರತದ ನಿರೂಪಕಿಯಾಗಿ ಕಾಣಿಸಿಕೊಂಡ ದೀಪಿಕಾ ಕಪ್ಪು ಗೌನ್ ಮತ್ತು ಡೈಮಂಡ್ ನೆಕ್ಲೇಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದು ಎಲ್ಲರ ಗಮನ ಸೆಳೆದರು. ಅದೇ ಸಮಯದಲ್ಲಿ, ಕೆಲವು ನಟಿಯರು ವಿಚಿತ್ರವಾದ ಉಡುಗೆಗಳಲ್ಲಿ ಕಾಣಿಸಿಕೊಂಡರು.

ಹಾಲಿವುಡ್ ಪಾಪ್‌ಸ್ಟಾರ್ ರಿಹಾನ್ನಾ ಆಸ್ಕರ್ ಸಮಾರಂಭದಲ್ಲಿ ಬೇಬಿ ಬಂಪ್ ಅನ್ನು ಪ್ರದರ್ಶಿಸಿದರು. ರಿಹಾನ್ನಾ ಕಪ್ಪು ಬಣ್ಣದ ಗೌನ್ ನಲ್ಲಿ ಡಾರ್ಕ್ ಸೆಕ್ಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಫ್ಲಾರೆನ್ಸ್ ಪಗ್ ಅವರು ಡಿಸೈನರ್ ವ್ಯಾಲೆಂಟಿನೋ ಕೌಚರ್ ಅವರ ಉಡುಪಿನಲ್ಲಿ ಕಾಣಿಸಿಕೊಂಡರು. ಆದರೆ, ಆಕೆಯ ಈ ಗೌನ್ ತುಂಬಾ ವಿಚಿತ್ರ ಲುಕ್ ನೀಡುತ್ತಿತ್ತು.
ನಟಿ ಸಾಂಡ್ರಾ ಓಹ್ ಡಿಸೈನರ್ ಗಿಯಾಂಬಟ್ಟಿಸ್ಟಾ ವಲ್ಲಿ ಅವರ ಹಳದಿ ಗೌನ್‌ನಲ್ಲಿ ಕಾಣಿಸಿಕೊಂಡರು. ಪೆಂಡೆಂಟ್ ಕೂಡ ಹಾಕಿಕೊಂಡಿದ್ದರು. ಅದರೂ ಈ ಔಟ್‌ಫಿಟ್ ವರ್ಸ್ ಡ್ರೆಸ್ಡ್ ಎಂದು ಪರಿಗಣಿಸಲಾಗಿದೆ.
ಜಾನೆಲ್ಲೆ ಮೊನೆ ಡಿಸೈನರ್ ವೆರಾ ವಾಂಗ್ ಅವರ ಕಪ್ಪು ಕಾರ್ಸೆಟ್ ಟಾಪ್ ಮತ್ತು ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಸ್ಲಿಂಕಿ ಸ್ಕರ್ಟ್ ಅನ್ನು ಧರಿಸಿದ್ದರು.
ಆಸ್ಕರ್ ಸಮಾರಂಭದಲ್ಲಿ ಗಾಯಕಿ ಲೇಡಿ ಗಾಗಾ ವರ್ಸೇಸ್‌ನ ಡಿಸೈನರ್ ಕಪ್ಪು ಗೌನ್‌ನಲ್ಲಿ ಕಾಣಿಸಿಕೊಂಡರು. ಅವಳ ಉಡುಗೆ ಸೊಂಟದ ಮೇಲೆ ಪಾರದರ್ಶಕವಾಗಿತ್ತು.
ಎಲಿಜಬೆತ್ ಬ್ಯಾಂಕ್ಸ್ ಕಪ್ಪು ಮತ್ತು ಬಿಳಿ ಗೌನ್‌ನಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಆದರೆ, ಆಕೆಯ ಈ ಡ್ರೆಸ್ ವಿಚಿತ್ರವಾಗಿ ಕಾಣಿಸುತ್ತಿತ್ತು ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯ್ ಕೂಡ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ತಲುಪಿದ್ದಾರೆ. ಈ ಸಮಯದಲ್ಲಿ, ಡಿಸೈನರ್ ರಾಲ್ಫ್ ಲಾರೆನ್ ಅವರ ಹೊಳೆಯುವ ಗೌನ್‌ನಲ್ಲಿ ಮಲಾಲಾ ಪೋಸ್ ನೀಡಿದ್ದರು.
ಡಿಸೈನರ್ ಜುಹೇರ್ ಮುರಾದ್ ಅವರ ಡಿಸೈನರ್ ವೈಟ್ ಗೋಲ್ಡನ್ ಗೌನ್‌ನಲ್ಲಿ ಇವಾ ಲಾಂಗೋರಿಯಾ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಆಸ್ಕರ್ ಪ್ರಶಸ್ತಿಗಳಲ್ಲಿ ಕೇಟ್ ಹಡ್ಸನ್ ಅವರ ಉಡುಗೆ ಕೂಡ ಮೆಚ್ಚುಗೆ ಗಳಿಸಿಲ್ಲ. ಈ ನಟಿ ಡಿಸೈನರ್ ಲೂಯಿ ವಿಟಾನ್ ಅವರ ಹೊಳೆಯುವ ಗೌನ್‌ನಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಡಿಸೈನರ್ ಗಿಯಾಂಬಟ್ಟಿಸ್ಟಾ ವಲ್ಲಿ ಅವರ ಡಿಸೈನರ್ ಗೌನ್‌ನಲ್ಲಿ ಆಲಿಸನ್ ವಿಲಿಯಮ್ಸ್ ಪೋಸ್ ನೀಡಿದ್ದಾರೆ. ಆದರೆ ಅವರ ಈ ಲುಕ್ ಮೆಚ್ಚುಗೆ ಗಳಿಸಲು ಫೇಲ್ ಆಗಿದೆ.
ನಟಿ ಮಿಂಡಿ ಕಾಲಿಂಗ್ ಡಿಸೈನರ್ ವೆರಾ ವಾಂಗ್ ಅವರ ಬಿಳಿ ಗೌನ್‌ನಲ್ಲಿ ಪೋಸ್ ನೀಡಿದ್ದಾರೆ. ಈ ವಿಚಿತ್ರ ಡ್ರೆಸ್ ಆಸ್ಕರ್ ಸಮಾರಂಭದಲ್ಲಿ ಮೆಚ್ಚುಗೆ ಗಳಿಸಿಲ್ಲ.
.
ಥೇಮ್ಸ್ ಬಿಳಿ ಗೌನ್‌ನಲ್ಲಿ ಕಾಣಿಸಿಕೊಂಡರು. ಅವರ ಡ್ರೆಸ್ ತುಂಬಾ ಓವರ್ ಎಂದು ಪರಿಗಣಿಸಲಾಯಿತು ಮತ್ತು ಥೇಮ್ಸ್ ಅವರನ್ನು ವಿಚಿತ್ರ ಉಡುಪು ಧರಿಸಿದವರ ಪಟ್ಟಿಯಲ್ಲಿ ಸೇರಿಸಲಾಯಿತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.