- Home
- Entertainment
- Cine World
- 41ನೇ ವಯಸ್ಸಿನಲ್ಲಿ ಖ್ಯಾತ ನಟಿ ಜೊತೆ ಮದುವೆಗೆ ರೆಡಿಯಾದ ನಟ ವಿಶಾಲ್! Age Gap ಎಷ್ಟು?
41ನೇ ವಯಸ್ಸಿನಲ್ಲಿ ಖ್ಯಾತ ನಟಿ ಜೊತೆ ಮದುವೆಗೆ ರೆಡಿಯಾದ ನಟ ವಿಶಾಲ್! Age Gap ಎಷ್ಟು?
ಒಮ್ಮೆ ನಿಶ್ಚಿತಾರ್ಥ ಮುರಿದುಕೊಂಡಿರೋ ನಟ ವಿಶಾಲ್ ಅವರು 41ನೇ ವಯಸ್ಸಿಗೆ ಮದುವೆ ಆಗಲು ರೆಡಿಯಾಗಿದ್ದಾರೆ. ಹಾಗಾದರೆ ಹುಡುಗಿ ಯಾರು? ಯಾವಾಗ ಮದುವೆ ಆಗಲಿದೆಯಂತೆ?

ಕೆಲವು ವರ್ಷಗಳಿಂದ ತಮಿಳು ನಟ ವಿಶಾಲ್ ಈ ವರ್ಷ ಮದುವೆ ಆಗ್ತಾರೆ, ಮುಂದಿನ ವರ್ಷ ಮದುವೆ ಆಗ್ತಾರೆ ಎಂಬ ಮಾತು ಕೇಳಿ ಬರುತ್ತಲಿದೆ. ಇವರ ಮದುವೆ ಯೋಜನೆಗಳ ಬಗ್ಗೆ ಆಗಾಗ ಅನೇಕ ಊಹಾಪೋಹಗಳು ಕೇಳಿಬರುತ್ತಲಿರುತ್ತವೆ. ಇತ್ತೀಚಿಗೆ ನಟ ವಿಶಾಲ್ ಅವರು ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ನಡಿಗರ್ ಸಂಘದ (ತಮಿಳು ಚಲನಚಿತ್ರ ನಟರ ಸಂಘ) ಭಾಗವಾಗಿರುವ ವಿಶಾಲ್, 9 ವರ್ಷಗಳ ಹಿಂದೆ ನಿಧಿ ಸಂಗ್ರಹಿಸಿದ ಬಳಿಕ ನಡಿಗರ್ ಸಂಘದ ಕಟ್ಟಡ ನಿರ್ಮಾಣ ಪೂರ್ಣ ಆದ್ಮೇಲೆ ಮದುವೆ ಆಗೋದಾಗಿ ಹೇಳಿದ್ದರು. ಕೆಲವು ದಿನಗಳ ಹಿಂದೆ ಮಾಧ್ಯಮದೊಂದಿಗಿನ ಸಂವಾದದಲ್ಲಿ, ನಡಿಗರ್ ಸಂಘದ ಕಟ್ಟಡವು ಈಗ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ವಿವಾಹದ ಬಗ್ಗೆ ಪ್ರಶ್ನಿಸಲಾಯಿತು.
ವಿಶಾಲ್ ಅವರು, “ಹೌದು, ನನ್ನ ಸಂಗಾತಿ ಯಾರೆಂದು ಕಂಡುಹಿಡಿದುಕೊಂಡಿದ್ದೇನೆ. ನಾವು ವಿವಾಹದ ಬಗ್ಗೆ ಮಾತುಕತೆ ನಡೆಸಿದ್ದೇವೆ ಮತ್ತು ಇದು ಪ್ರೀತಿಯ ವಿವಾಹವಾಗಿರುತ್ತದೆ. ವಧುವಿನ ವಿವರಗಳು ಮತ್ತು ವಿವಾಹದ ದಿನಾಂಕದ ಬಗ್ಗೆ ಶೀಘ್ರದಲ್ಲೇ ಘೋಷಿಸುತ್ತೇನೆ” ಎಂದು ಹೇಳಿದ್ದಾರೆ.
ಸಾಕಷ್ಟು ಊಹಾಪೋಹಗಳ ನಂತರದಲ್ಲಿ ಸಾಯಿ ಧನ್ಶಿಕಾ ಅವರನ್ನು ವಿಶಾಲ್ ವಿವಾಹವಾಗಲಿದ್ದಾರೆ ಎಂಬ ಸುದ್ದಿಯನ್ನು ಖಚಿತಪಡಿಸಿವೆ. ವಾಸ್ತವವಾಗಿ, ಸಾಯಿ ಧನ್ಶಿಕಾ ಅಭಿನಯದ ಯೋಗಿ ಡಾ ಚಿತ್ರದ ಕಾರ್ಯಕ್ರಮಕ್ಕೆ ವಿಶಾಲ್ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದಾರೆ. ಈ ಕಾರ್ಯಕ್ರಮ ಸೋಮವಾರ ಸಂಜೆ ನಡೆಯಲಿದೆ. ಈ ಯೋಗಿ ಡಾ ಕಾರ್ಯಕ್ರಮದಲ್ಲಿ ಅವರು ವಿವಾಹದ ಘೋಷಣೆ ಮಾಡಬಹುದೆಂಬ ಊಹಾಪೋಹಗಳಿವೆ.
ಕೆಲವು ತಿಂಗಳುಗಳ ಹಿಂದೆ ಈ ಇಬ್ಬರು ನಟರು ಭೇಟಿಯಾಗಿದ್ದರು ಎನ್ನಲಾಗಿದೆ ಮತ್ತು ಅಂದಿನಿಂದ ಅವರ ಸ್ನೇಹ ಬೆಳೆದಿದೆ. ವಿಶಾಲ್ ಮಾಧ್ಯಮಗಳಿಗೆ ತಿಳಿಸಿರುವಂತೆ, ವಿವಾಹವು ಇನ್ನೂ 4 ತಿಂಗಳುಗಳ ಬಳಿಕ ನಡೆಯಲಿದೆ ಎಂದು ಹೇಳಿದ್ದು, ಶೀಘ್ರದಲ್ಲೇ ನಿಶ್ಚಿತಾರ್ಥ ನಡೆಯುವ ಸಾಧ್ಯತೆ ಇದೆ. ಸಾಯಿ ಧನ್ಶಿಕಾ ಅಥವಾ ವಿಶಾಲ್‌ರಿಂದ ಯಾವುದೇ ಅಧಿಕೃತ ಸುದ್ದಿ ಬಂದಿಲ್ಲ. ವಿಶಾಲ್ ಶೀಘ್ರದಲ್ಲೇ ಮದುವೆ ಸುದ್ದಿ ಘೋಷಿಸುವುದಾಗಿ ಹೇಳಿದ್ದರಿಂದ ಜನರು ಈ ಕುತೂಹಲದಿಂದ ಕಾಯುತ್ತಿದ್ದಾರೆ.
ಸಾಯಿ ಧನ್ಶಿಕಾ ಜೊತೆಗಿನ ಅವರ ವಿವಾಹದ ವಿಷಯವು ಭಾರೀ ಸಂಚಲನ ಮೂಡಿಸಿದೆ. ಈ ಹಿಂದೆ ವಿಶಾಲ್, ವರಲಕ್ಷ್ಮೀ ಶರತ್‌ಕುಮಾರ್ ಜೊತೆಗಿನ ಡೇಟಿಂಗ್ ಊಹಾಪೋಹದಿಂದ ಮಾತ್ರ ಸುದ್ದಿಯಾಗಿತ್ತು.
ಅಂದಹಾಗೆ ಧನ್ಶಿಕಾ ಅವರಿಗೆ ಈಗ 36 ವರ್ಷ ಎನ್ನಲಾಗಿದೆ. ಹೀಗಾಗಿ ಈ ಜೋಡಿ ಮಧ್ಯೆ 5 ವರ್ಷಗಳ ನಡುವಿನ ಅಂತರವಿದೆ. ವಿಶಾಲ್ ಇತ್ತೀಚೆಗೆ ವಿಲ್ಲುಪುರಂನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಮೂರ್ಛೆ ಹೋಗಿದ್ದರು. ಶೀಘ್ರವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಶೀಘ್ರವಾಗಿ ಚೇತರಿಸಿಕೊಂಡರು.