ತಮನ್ನಾಗೆ ವಿಜಯ್ ವರ್ಮಾ ಹೀಗೆ ಮಾಡಿದ್ದು ನಿಜನಾ? ಬ್ರೇಕಪ್‌ಗೆ ಕಾರಣ ಇದಂತೆ!
ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬೇರೆ ಬೇರೆಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದು, ಇದಕ್ಕೆ ಕಾರಣ ಏನು ಎಂಬ ಬಗ್ಗೆ ಕೆಲವು ಮಾಹಿತಿ ಲಭ್ಯವಾಗಿದೆ. ಕಳೆದ 3 ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ಘೋಷಿಸಿದ್ದರು ಕೂಡ. ಈಗ ಇವರ ಸಂಬಂಧ ಮುರಿದು ಬಿದ್ದಿದೆ. ಬ್ರೇಕಪ್ ಗೆ ಕಾರಣ ವಿಜಯ್ ವರ್ಮಾ ಎನ್ನಲಾಗಿದೆ.

ದಕ್ಷಿಣ ಭಾರತದ ನಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಇವರ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ, ಪ್ರಶಸ್ತಿ ಸಮಾರಂಭಗಳು ಮತ್ತು ಚಲನಚಿತ್ರೋತ್ಸವಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದರು.
ಈ ಪ್ರೇಮ ಸಂಬಂಧ ಮದುವೆಯತ್ತ ಸಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ದಿಢೀರ್ ಅಂತ್ಯವಾಗಿದೆ ಎಂಬ ಮಾಹಿತಿ ಚಿತ್ರರಂಗದವರು ಮತ್ತು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ತಮನ್ನಾ - ವಿಜಯ್ ವರ್ಮಾ ಒಟ್ಟಿಗೆ ಇರುವ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ.
ತಮನ್ನಾ - ವಿಜಯ್ ವರ್ಮಾ ಬೇರೆಯಾಗಲು ಕಾರಣ ಏನು?:
ತಮನ್ನಾ ಮತ್ತು ವಿಜಯ್ ವರ್ಮಾ ಸಂಬಂಧ ಮುರಿದು ಬಿದ್ದಿದೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಅಭಿಮಾನಿಗಳಲ್ಲೂ ಸಂಚಲನ ಮೂಡಿಸಿದೆ. ತಮನ್ನಾ - ವಿಜಯ್ ವರ್ಮಾ ಬೇರೆಯಾಗಲು ಕಾರಣ ಏನು ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
35 ವರ್ಷ ವಯಸ್ಸಿನ ನಟಿ ತಮನ್ನಾ ಈ ವರ್ಷ ಮದುವೆಯಾಗಬೇಕೆಂದು ವಿಜಯ್ ವರ್ಮಾ ಬಳಿ ಕೇಳಿಕೊಂಡಿದ್ದಾರಂತೆ. ಆದರೆ ವಿಜಯ್ ವರ್ಮಾ ಈಗ ಮದುವೆಯಾಗಲು ಒಪ್ಪುತ್ತಿಲ್ಲ ಎನ್ನಲಾಗಿದೆ. ಇನ್ನೂ ಕೆಲವು ವರ್ಷ ಪ್ರೀತಿಸಿ ನಂತರ ಮದುವೆಯಾಗಬಹುದು ಎಂದು ಹೇಳಿದ್ದಾರಂತೆ. ಇದನ್ನು ತಮನ್ನಾ ಮತ್ತು ಅವರ ಪೋಷಕರು ಒಪ್ಪಿಲ್ಲ ಎನ್ನಲಾಗಿದೆ.
ಮದುವೆಗಾಗಿ ಹೋರಾಡಿ ಸಂಬಂಧದಿಂದ ಹೊರಬಂದ ತಮನ್ನಾ:
ಈ ಸಮಸ್ಯೆಯೇ ಒಂದು ಹಂತದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರಬಹುದು. ಮದುವೆಯ ವಿಚಾರಕ್ಕೆ ಜಗಳವಾಡಿ ತಮನ್ನಾ ಬೇರೆಯಾಗಿದ್ದಾರೆ ಎನ್ನಲಾಗಿದೆ.