ಸೂಪರ್‌ ಹಿಟ್‌ ಸಿನಿಮಾದ ನಂತರವೂ ನಟನೆಯಿಂದ ಭಾಗ್ಯಶ್ರೀ ದೂರ ಆಗಿದ್ದೇಕೆ?

First Published Jun 1, 2020, 6:10 PM IST

ಭಾಗ್ಯಶ್ರೀ ಸಿನಿಮಾ ಕೆರಿಯರ್‌ 1989ರಲ್ಲಿ ಬಿಡುಗಡೆಯಾದ ಮೈನೆ ಪ್ಯಾರ್ ಕಿಯಾದೊಂದಿಗೆ ಪ್ರಾರಂಭವಾಗಿತ್ತು. ಆದರೆ, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ಬಾಲ್ಯದ ಗೆಳೆಯ ಹಿಮಾಲಯ್‌ ದಾಸಾನಿಯನ್ನು ಮದುವೆಯಾಗಲು ನಿರ್ಧರಿಸಿದರು. ಮತ್ತದೇ ನಿರ್ಧಾರದಿಂದ ಅವರನ್ನು ಚಿತ್ರರಂಗದಿಂದ ದೂರ ಮಾಡಿತು. ಮೈನೆ ಪ್ಯಾರ್ ಕಿಯಾ'  ಸೂಪರ್‌ ಹಿಟ್‌ ಸಿನಿಮಾದಲ್ಲಿ ಸಲ್ಮಾನ್  ಜೊತೆ ನಟಿಸಿದ ಭಾಗ್ಯಶ್ರೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚಿತ್ರ ಮತ್ತು  ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗ್ಯಶ್ರೀ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಏಕೆ ನಿಲ್ಲಿಸಿದರು ಎಂದು ಹೇಳಿದ್ದರು.