ಕಾಲಿವುಡ್‌ಗೆ ಮಲ್ಲು ಗರ್ಲ್ ಎಂಟ್ರಿ: ಮೊದಲ ಸಿನಿಮಾ ಮಾಡ್ತಿರೋದೆ ವಿಜಯ್ ಜೊತೆ
First Published Apr 2, 2021, 10:42 AM IST
ದಳಪತಿ 65 ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಹೊಸ ನಟಿ | ಮೊದಲ ಸಿನಿಮಾವನ್ನೇ ವಿಜಯ್ ಜೊತೆ ಮಾಡ್ತಿರೋ ಲಕ್ಕೀ ಗರ್ಲ್ ಯಾರೀಕೆ ?

ಚೆನ್ನೈ ಬಳಿಯ ಸನ್ ಸ್ಟುಡಿಯೋದಲ್ಲಿ ನಡೆದ ವಿಜಯ್ ಅವರ ಮುಂದಿನ ಮೆಗಾ ಪ್ರಾಜೆಕ್ಟ್ 'ದಳಪತಿ 65' ನ ಪೂಜೆ ಇತ್ತೀಚೆಗಷ್ಟೇ ನಡೆದಿತ್ತು.

ಈ ಕಾರ್ಯಕ್ರಮದಲ್ಲಿ ನಟಿ ಪೂಜಾ ಹೆಗ್ಡೆ ಮಿಸ್ ಆಗಿದ್ದರು.

ದಲಪತಿ ವಿಜಯ್ ಹೊರತುಪಡಿಸಿ ಹೆಚ್ಚಿನ ಸಿಬ್ಬಂದಿ ಸದಸ್ಯರು ಹಾಜರಿದ್ದರು.

ನಟ ವಿ.ಟಿ.ವಿ ಗಣೇಶ್ ಮತ್ತು ಅಪರಿಚಿತ ಯುವ ನಟಿ ಮಾತ್ರ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ದಳಪತಿ 65' ಚಿತ್ರದಲ್ಲಿ ತಮಿಳಿಗೆ ಪಾದಾರ್ಪಣೆ ಮಾಡುತ್ತಿರುವ ಯುವ ನಟಿ ಕೇರಳ ಮೂಲದ ಅಪರ್ಣಾ ದಾಸ್.

ಈಗಾಗಲೇ ಎರಡು ಮಲಯಾಳಂ ಸಿನಿಮಾಗಳಾದ ಎನ್ಜನ್ ಪ್ರಕಾಶನ್ (2018) ಮತ್ತು ಮನೋಹರಂ (2019) ಚಿತ್ರಗಳಲ್ಲಿ ನಟಿಸಿದ್ದಾರೆ .

ತಮಿಳಿನಲ್ಲಿ ತನ್ನ ಮೊದಲ ಸಿನಿಮಾದಲ್ಲಿಯೇ ಮಾಸ್ ಹೀರೋ ವಿಜಯ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಯುವ ನಟಿ ತುಂಬಾ ಉತ್ಸುಕನಾಗಿದ್ದಾರೆ ಎನ್ನಲಾಗಿದೆ.

'ತಳಪತಿ 65' ಚಿತ್ರದಲ್ಲಿ ಪೂಜಾ ಹೆಗ್ಡೆ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ.

ಅಪರ್ಣಾ ದಾಸ್ ಮತ್ತೊಂದು ಜೋಡಿಯೋ ಅಥವಾ ಇತರ ಸಮಾನ ಪಾತ್ರದಲ್ಲಿ ನಟಿಸುತ್ತಾರೆಯೇ ಎಂಬುದು ಖಚಿತವಾಗಿಲ್ಲ.

ಈ ಚಿತ್ರವನ್ನು ನೆಲ್ಸನ್ ದಿಲಿಪ್ಕುಮಾರ್ ನಿರ್ದೇಶಿಸಿದ್ದಾರೆ.

ಸನ್ ಪಿಕ್ಚರ್ಸ್ ಮೆಗಾ ಬಜೆಟ್ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ.