ರಶ್ಮಿಕಾ,ವಿಜಯ್ ದೇವರಕೊಂಡ ಮೊದಲು ಭೇಟಿಯಾಗಿದ್ದೆಲ್ಲಿ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಅವರ ತೆರೆ ಮೇಲಿನ ಕೆಮಿಸ್ಟ್ರಿ ಸಖತ್ ಸೌಂಡ್ ಮಾಡಿದೆ ಹಾಗೇ ಅಂದಿನಿಂದ ಅವರ ಸಂಬಂಧದ ಬಗ್ಗೆ ವದಂತಿಗಳು ಹಬ್ಬುತ್ತಿವೆ. ಅವರಿಬ್ಬರೂ ಮೊದಲು ಎಲ್ಲಿ ಯಾವಾಗ ಭೇಟಿಯಾದರು? ಮುಂದೆ ಏನಾಯಿತು? ಇಲ್ಲಿದೆ ವಿವರ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಅತ್ಯಂತ ರೊಮ್ಯಾಂಟಿಕ್ ಜೋಡಿಯಾಗಿ ಪ್ರಸಿದ್ಧರಾಗಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಬೇರೆ ಬೇರೆ ಸಿನಿಮಾಗಳ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅನನ್ಯ ಪಾಂಡೆ ಅಭಿನಯದ ಮುಂಬರುವ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ‘ಲಿಗರ್’ ಚಿತ್ರದ ಚಿತ್ರೀಕರಣದಲ್ಲಿ ವಿಜಯ್ ನಿರತರಾಗಿದ್ದಾರೆ. ಮತ್ತೊಂದೆಡೆ, ರಶ್ಮಿಕಾ ಮಂದಣ್ಣ 'ಮಿಷನ್ ಮಜ್ನು' ಮತ್ತು ಅಮಿತಾಬ್ ಬಚ್ಚನ್ ಅಭಿನಯದ 'ಗುಡ್‌ಬೈ' ಚಿತ್ರದೊಂದಿಗೆ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ
ರಶ್ಮಿಕಾ ಮತ್ತು ವಿಜಯ್ ತಮ್ಮ ಗೀತಾ ಗೋವಿಂದಂ ಚಿತ್ರದ ಸೆಟ್‌ಗಳಲ್ಲಿ ಮೊದಲು ಭೇಟಿಯಾದರು.
ಗೀತಾ ಗೋವಿಂದಮ್ ಮತ್ತು ಡಿಯರ್ ಕಾಮ್ರೇಡ್ ಸಿನಿಮಾದಲ್ಲಿನ ಅವರ ಅನ್‌ಸ್ಕ್ರೀನ್ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಅಂದಿನಿಂದಲೂ, ಈ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ವಂದತಿ ಬಹಳ ಕಾಲದಿಂದ ಹರಿದಾಡುತ್ತಿದ್ದು, ಇಬ್ಬರ ಪ್ರೀತಿಯ ಬಗ್ಗೆ ಅನೇಕ ವರದಿಗಳು ಬಂದವು.
ಕನ್ನಡ ನಿರ್ದೇಶಕ ನಟ ರಕ್ಷಿ ಶೆಟ್ಟಿ ಜೊತೆಯ ರಶ್ಮಿಕಾರ ಬ್ರೇಕಪ್‌ಗೆ ಇದೇ ಕಾರಣ ಎಂದು ಜನರು ಆರೋಪಿಸಿದ್ದಾರೆ.
ಐಬಿಟೈಮ್ಸ್ ಸಂದರ್ಶನವೊಂದರ ಪ್ರಕಾರ, ತನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿ ಜೊತೆಯ ಬ್ರೇಕಪ್‌ನಿಂದ ಹೊರಬರಲು ಸಹಾಯ ಮಾಡಿದವನು ವಿಜಯ್ ದೇವರಕೊಂಡ ಎಂದು ರಶ್ಮಿಕಾ ಬಹಿರಂಗಪಡಿಸಿದ್ದರು.
'ನಾನು ರಕ್ಷಿತ್ ಶೆಟ್ಟಿ ಅವರೊಂದಿಗಿನ ಬ್ರೇಕಪ್‌ನಿದ ಚೇತರಿಸಿಕೊಳ್ಳುತ್ತಿದ್ದೆ. ನನಗೆ ಕಂಫರ್ಟ್ ಮತ್ತು ಕೇರ್ ಅಗತ್ಯವಿತ್ತು, ಅದನ್ನು ನಾನು ದೇವರಕೊಂಡನಲ್ಲಿ ಕಂಡುಕೊಂಡೆ. ನನ್ನ ಭಾವನೆಗಳನ್ನು ನಿಭಾಯಿಸಲು ನಾನು ಹೆಣಗಾಡುತ್ತಿದ್ದೆ ಮತ್ತು ನನ್ನ ಉತ್ಸಾಹವನ್ನು ಎತ್ತಿ ಹೊರಗೆ ಬೇರೆ ಜಗತ್ತಿದೆ. ಅದು ನನ್ನನ್ನು ಅಪ್ಪಿಕೊಳ್ಳಲು ಕಾಯುತ್ತಿದೆ, ಎಂದು ನನಗೆ ಅರ್ಥ ಮಾಡಿಸಿದವನು ದೇವರಕೊಂಡ,' ಎಂದು ಹೇಳಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ತಮ್ಮ ಸಂಬಂಧದ ವದಂತಿಗಳ ಬಗ್ಗೆ ನಿರಾಕರಿಸತ್ತಲೇ ಬಂದಿದ್ದಾರೆ.
TOI ಗೆ ನೀಡಿದ ಸಂದರ್ಶನದಲ್ಲಿ, ವಿಜಯ್ ಅವರ ಜೀವನದ ಪ್ರೀತಿ ಬಗ್ಗೆ ಕೇಳಲಾಯಿತು.ಅವರು ಸಂಬಂಧದಲ್ಲಿದ್ದರೆ ಅದನ್ನು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಲು ಬಯಸುತ್ತಾರೆ ಎಂದು ನಟ ಬಹಿರಂಗ ಪಡಿಸಿದರು .