ಡೈರೆಕ್ಟರ್ ಕಟ್ ಎಂದರೂ ಡಿಂಪಲ್ ಗೆ ಚುಂಬಿಸುತ್ತಲೇ ಇದ್ದ ಖನ್ನಾ!
ದಶಕಗಳ ಹಿಂದೆ, ನಟಿ ಡಿಂಪಲ್ ಕಪಾಡಿಯಾ (Dimple Kapdia) ಚಿತ್ರದ ಚಿತ್ರೀಕರಣದಲ್ಲಿದ್ದಾಗ. ಈ ವೇಳೆ ನಟಿ ತನ್ನ ಸಹನಟನ ಜೊತೆ ಇಂಟಿಮೇಟ್ ಬೆಡ್‌ರೂಮ್ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು, ಆದರೆ ಚಿತ್ರೀಕರಣದ ಸಮಯದಲ್ಲಿ ಚಿತ್ರದ ನಿರ್ದೇಶಕರು ಕಟ್ ಹೇಳಿದ ನಂತರವೂ ನಟರಿಗೆ ದೃಶ್ಯದಿಂದ ಹೊರಬರಲು ಸಾಧ್ಯವಾಗಲಿಲ್ಲ. ಆಘಾತಕ್ಕೆ ಒಳಾಗದ ಡಿಂಪಲ್ ಆ ನಟರಿಂದ ಬಿಡಿಸಿಕೊಳ್ಳಲು ಸಹಾಯಕ್ಕೆ ಕರೆಯಲು ಪ್ರಾರಂಭಿಸಿದ್ದರು. ಹಾಗಾದರೆ ಆ ಬಾಲಿವುಡ್ ನಟ ಯಾರು ಗೊತ್ತಾ? ಘಟನೆಯ ಪೂರ್ತಿ ವಿವರ ಇಲ್ಲಿದೆ.

ವರದಿಯ ಪ್ರಕಾರ, ನಿರ್ದೇಶಕರು 'ಕಟ್' ಹೇಳಿದ ನಂತರವೂ ವಿನೋದ್ ತನ್ನನ್ನು ತಾನು ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ.ಮಹೇಶ್ ಭಟ್ ಕಟ್ ಹೇಳಿದ ನಂತರ ವಿನೋದ್ ಖನ್ನಾ ಡಿಂಪಲ್ ಕಪಾಡಿಯಾರನ್ನು ಬಿಡಲಿಲ್ಲ.
ವಿನೋದ್ ಖನ್ನಾ ಅವರ ಈ ಕೃತ್ಯವು ಮಹೇಶ್ ಭಟ್ ಮಾತ್ರವಲ್ಲದೆ ನಟಿ ಡಿಂಪಲ್ ಅವರನ್ನೂ ಬೆಚ್ಚಿಬೀಳಿಸಿದೆ, ನಂತರ ಅವರು ಭಯಗೊಂಡು ನಿರ್ದೇಶಕರ ಸಹಾಯ ಕೇಳಿದರು. ಬಳಿಕ ತಮ್ಮ ಸಹಾಯಕರನ್ನು ಕಳುಹಿಸಿ ಸೀನ್ ಕಟ್ ಮಾಡಿದ್ದರು.
ಈ ದೃಶ್ಯದ ನಂತರ ತುಂಬಾ ಗಾಬರಿಯಾದ ಡಿಂಪಲ್ ಕಪಾಡಿಯಾ ಮೇಕಪ್ ಕೋಣೆಗೆ ಹೋಗಿ ಬಹಳ ಹೊತ್ತು ಅಳುತ್ತಾರೆ. ಈ ಬಗ್ಗೆ ವಿನೋದ್ ಖನ್ನಾ ಜೊತೆ ಮಾತನಾಡಿದ ಮಹೇಶ್ ಭಟ್ ಅವರು ನಟಿಯ ಕ್ಷಮೆಯನ್ನೂ ಕೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಂತರ, ವಿನೋದ್ ಖನ್ನಾ ಅವರು ಬಹಳ ಸಮಯದ ನಂತರ ಇಂಟಿಮೇಟ್ ದೃಶ್ಯಗಳನ್ನು ಚಿತ್ರೀಕರಿಸಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದೇನೆ ಎಂದು ಒಪ್ಪಿಕೊಂಡರು ಎಂದೂ ವರದಿಯಾಗಿತ್ತು.
ಆದರೆ ಪ್ರೇಮ್ ಧರ್ಮ್ ಸಿನಿಮಾ ತಯಾರಿಸಲು ಬಹಳ ಸಮಯ ತೆಗೆದುಕೊಂಡಿತು ಮತ್ತು ಅದರ ಥಿಯೇಟರ್ ಬಿಡುಗಡೆಯಾಗಲಿಲ್ಲ ಮತ್ತು ನಂತರ, ಇದನ್ನು ಮಾರ್ಗ್ ಎಂದು ಮರುನಾಮಕರಣ ಮಾಡಿ 1992 ರಲ್ಲಿ ಹೋಮ್ ವೀಡಿಯೊದಲ್ಲಿ ನೇರವಾಗಿ ಬಿಡುಗಡೆ ಮಾಡಲಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.