Keerthy Suresh And Mohanlal : ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಭೇಟಿಯಾದ ಕೀರ್ತಿ, ಪೋಟೋಗಳು
ಡಿಸೆಂಬರ್ 19ರ ರಾತ್ರಿ ತಮಿಳು ನಟಿ ಕೀರ್ತಿ ಸುರೇಶ್ (Keerthy Suresh) ಅವರು ಅಮ್ಮಾ (AMMA) ಮೀಟ್‌ನಲ್ಲಿದ್ದರು. ಈ ಸಮಯದಲ್ಲಿ ಅವರು ಮಲಯಾಳಂ ಸೂಪರ್‌ಸ್ಟಾರ್‌ಗಳಾದ ಮೋಹನ್‌ಲಾಲ್ (Mohanlal), ಮಮ್ಮುಟ್ಟಿ (Mammootty) ಮತ್ತು ಇನ್ನೂ ಕೆಲವರನ್ನು ಭೇಟಿ ಮಾಡಿದ್ದಾರೆ. ನಟಿ ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಜನರಲ್ ಬಾಡಿ ಕೆಲವು ಹುದ್ದೆಗಳಿಗೆ ಚುನಾವಣೆ ನೆಡೆದ ಕಾರಣ ನಿನ್ನೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಒಂದು ದೊಡ್ಡ ದಿನವಾಗಿತ್ತು. ಅಧ್ಯಕ್ಷರಾಗಿ ಮೋಹನ್ ಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ಎಡವೇಲ ಬಾಬು, ಖಜಾಂಚಿಯಾಗಿ ಸಿದ್ದಿಕ್ ಮತ್ತು ಜಂಟಿ ಕಾರ್ಯದರ್ಶಿಯಾಗಿ ಜಯಸೂರ್ಯ ಅವಿರೋಧವಾಗಿ ಆಯ್ಕೆಯಾದರು.
Keerthy suresh
ನಿವಿನ್ ಪೌಲಿ, ಹನಿ ರೋಸ್ ಮತ್ತು ನಜರ್ ಲತೀಫ್ ಅವರು ಕಾರ್ಯಕಾರಿ ಸಮಿತಿಗೆ ಚುನಾವಣೆಯಲ್ಲಿ ಸೋತರು.11 ಸದಸ್ಯರ ಕಾರ್ಯಕಾರಿ ಸಮಿತಿಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಬಂದಿದೆ, ಅದರಲ್ಲಿ ನಾಲ್ವರು ನಟಿಯರನ್ನು ಸೇರಿಸಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರನ್ನು ಉತ್ತಮ ಪೈಪೋಟಿಯ ಮೂಲಕ ಆಯ್ಕೆ ಮಾಡಲಾಯಿತು.
Keerthy suresh
ಬಾಬು ರಾಜ್, ಲೀನಾ, ರಚನಾ ನಾರಾಯಣನ್‌ಕುಟ್ಟಿ, ಮಂಜು ಪಿಳ್ಳೈ, ಸುರಭಿ, ಸುಧೀರ್ ಕರಮಾನ, ಟೊವಿನೋ ಥಾಮಸ್, ಟಿನಿ ಟಾಮ್ ಮತ್ತು ಉನ್ನಿ ಮುಕುಂದನ್ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.
Instagram ನಲ್ಲಿ ಕೀರ್ತಿ ಸುರೇಶ್ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ನಟಿ ಕೀರ್ತಿ ಸುರೇಶ್ ಅವರು ಮಾಲಿವುಡ್ ಸ್ಟಾರ್‌ಗಳ ಜೊತೆ ಕೆಲವು ಅದ್ಭುತ ಸಮಯವನ್ನು ಕಳೆದಿರುವುದು ಕಂಡು ಬರುತ್ತದೆ.
ಈವೆಂಟ್‌ನಲ್ಲಿ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರ ಜೊತೆಗಿನ ನ ಕೆಲವು ಫೋಟೋಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. 'ಮೊದಲ ಬಾರಿಗೆ ಅಸೋಸಿಯೇಷನ್ ಆಫ್ ಮಲಯಾಳಂ ಕಲಾವಿದರ ಸಭೆಯಲ್ಲಿ ಕೆಲವು ನೆಚ್ಚಿನ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಭೇಟಿಯಾಗಲು ತುಂಬಾ ಸಂತೋಷವಾಯಿತು. ಈ ಅವಕಾಶವನ್ನು ಸೃಷ್ಟಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು, ಅಮ್ಮಾ!' ಎಂದು ಕೀರ್ತಿ ಬರೆದಿದ್ದಾರೆ.
ಇಬ್ಬರು ಉಪಾಧ್ಯಕ್ಷರುಗಳಾದ ಶ್ವೇತಾ ಮೆನನ್ ಮತ್ತು ಮಣಿಯನ್ ಪಿಲ್ಲಾ ರಾಜು 316 ಮತದಾರರ ಸುಸಂಘಟಿತ ಮತದಾನದ ಮೂಲಕ ಚುನಾಯಿತರಾದರು. ಕೀರ್ತಿ ಪ್ರಸ್ತುತ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಪರಶುರಾಮ್ ಅವರ ಸರ್ಕಾರ ವಾರಿ ಪಟ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್, 14 ರೀಲ್ಸ್ ಪ್ಲಸ್ ಮತ್ತು ಜಿ. ಮಹೇಶ್ ಬಾಬು ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ಸರ್ಕಾರ ವಾರಿ ಪಟವನ್ನು 1 ಏಪ್ರಿಲ್ 2022 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ಕೀರ್ತಿ ತನ್ನ ಮುಂದಿನ ಮಲಯಾಳಂ ಚಿತ್ರವಾದ ವಾಶಿಯಲ್ಲಿ ಸುಂದರ ಟೋವಿನೋ ಥಾಮಸ್ ಅವರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.