#MeToo: ಚಿತ್ರಗಂದಾ ಪರವಾಗಿ ನವಾಜುದ್ದೀನ್ ನಿಲ್ಲಲಿಲ್ಲವಂತೆ, ಯಾಕೆ ಗೊತ್ತಾ?...
ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೋರಿಸಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಮತ್ತೆ #MeToo ಗದ್ದಲ ಎದ್ದಿದೆ. ಈ ಹಿಂದೆ ಹಲವು ನಟಿಯರು ತಮ್ಮಗಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ನಟಿ ಚಿತ್ರಾಂಗದ ಸಿಂಗ್ ಕುಶನ್ ನಂದಿ ಅವರ 2016 ರ ಚಿತ್ರ ಬಾಬುಮೋಶೈ ಬಂಧೂಕ್‌ಬಾಜ್ ಚಿತ್ರದ ಸೆಟ್‌ಗಳಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದಾಗಿ ಮತ್ತು ಆ ಸಮಯದಲ್ಲ್ಲಿಅಲ್ಲೇ ಇದ್ದ ನಟ ನವಾಜುದ್ದೀನ್ ಸಿದ್ದಿಕಿ ಅವಳ ಪರವಾಗಿ ನಿಲ್ಲಲಿಲ್ಲ ಎಂದು ಅರೋಪಿಸಿದ್ದಾರೆ.
#MeToo ಚಳವಳಿಯ ಸಂದರ್ಭದಲ್ಲಿ, ಚಿತ್ರಾಂಗದ ಸಿಂಗ್ ಕುಶನ್ ನಂದಿಯವರ 2016 ರ ಚಿತ್ರ ಬಾಬುಮೋಶೈ ಬಂಧೂಕ್‌ಬಾಜ್ ಚಿತ್ರದ ಸೆಟ್‌ಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಈ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಕೂಡ ನಟಿಸಿದ್ದಾರೆ.
ನಟಿಯನ್ನು ಸೀರೆಯನ್ನು ತೆಗೆಯಿರಿ, ನಾಯಕನ ಮೇಲೆ ಹೋಗಿ ದೇಹವನ್ನು ರಬ್ ಮಾಡಿ ಎಂದು ಕೇಳಲಾಗಿದೆ ಎಂದು ವರದಿಯಾಗಿದೆ.
'ನಿರ್ಮಾಪಕರು ಮತ್ತು ನಿರ್ದೇಶಕರು ನಿರ್ದಿಷ್ಟ ದೃಶ್ಯಕ್ಕಾಗಿ ಕಿರುಕುಳ ನೀಡುತ್ತಿದ್ದರು, ಸಿದ್ದಿಕಿ ನಟಿಯನ್ನು ಬೆಂಬಲಿಸುವ ಬದಲು ವಿಷಯ ಇತ್ಯರ್ಥವಾಗಲೂ ಕಾಯುತ್ತಿದ್ದರು ಎಂದು ಸಿಂಗ್ ಹೇಳಿದ್ದಾರೆ' ಎಂದು ಬಾಲಿವುಡ್ ಹಂಗಮಾ ವರದಿ ಮಾಡಿದೆ.
'ಇದು ನನ್ನ ಕಂಫರ್ಟ್ ಜೋನ್ ಅಲ್ಲ. ನಾನು ಸೀರೆಯ ಕೆಳಗೆ ಪೆಟಿಕೋಟ್ ಮಾತ್ರ ಧರಿಸಿದ್ದೇನೆ ಎಂದು ಹೇಳಿದರು. ಗಲಾಟೆ ಮಾಡಬೇಡಿ ಮತ್ತು ಅಗತ್ಯವಿರುವದನ್ನು ಮಾಡಿ ಎಂದು ನಿರ್ದೇಶಕರು ಹೇಳಿದ್ದರು. ನನ್ನನ್ನು ಭಯಭೀತರಾಗಿಸಿದರು, ಬೆದರಿಸುತ್ತಿದರು ಮತ್ತು ಅದನ್ನು ಮಾಡಲು ಬೆದರಿಕೆ ಹಾಕಿದರು. ಆದರೆ, ನವಾಜ್ ಏನು ಹೇಳದೆ ಕಾಯುತ್ತಾ ಕುಳಿತರು' ಎಂದು ಅವರು ಹೇಳಿದರು.
'ನವಾಜ್ ನನ್ನ ಕಿರುಕುಳದ ವಿರುದ್ಧ ಒಂದು ನಿಲುವನ್ನು ತೆಗೆದುಕೊಳ್ಳಬಹುದಿತ್ತು, ಅವರು ಹಾಗೆ ಮಾಡಲಿಲ್ಲ. ಇಂಡಸ್ಟ್ರಿಯ ಎಮ್‌ಪವರ್ಡ್ ಪುರುಷರು ಒಂದು ನಿಲುವನ್ನು ತೆಗೆದುಕೊಳ್ಳದಿದ್ದಾಗ, ಕಿರುಕುಳ ನೀಡುವವರಿಗೆ ಪ್ರೋತ್ಸಾಹಿಸಿದ ಫೀಲ್ ಅಗುತ್ತದೆ' ಎಂದ ಚಿತ್ರಂಗದಾ ಸಿಂಗ್.
'ಮಹಿಳೆಯರಿಗೆ ಮಹಿಳೆಯರೇ ಕೆಟ್ಟ ಶತ್ರುಗಳು ಎಂಬುದು ನಿಜ. ಬಾಬುಮೋಶೈ ಬಂಡೂಕ್‌ಬಾಜ್‌ನ ಸೆಟ್‌ಗಳಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾಗಲೂ, ಅಲ್ಲಿದ್ದ ಚಿತ್ರದ ಲೇಡಿ ಪ್ರಡ್ಯೂಸರ್ ನನಗೆ ಕೆಟ್ಟದ್ದನ್ನುಂಟು ಮಾಡುತ್ತಿದ್ದರು' ಎಂದು ಅವರು ಉದ್ಯಮದ ಮಹಿಳೆಯರನ್ನೂ ದೂಷಿಸಿದರು.
'ನಾನು ದಾಖಲೆಯ ಪ್ರಕಾರ ಹೇಳುತ್ತೇನೆ . ಚಿತ್ರಾಂಗದಾಳ ಆರೋಪಗಳು ಸುಳ್ಳು. 3 ನೇ ದಿನದಿಂದ ಅವರು ಸೆಟ್‌ಗೆಲ್ಲಿ ತಡವಾಗಿ ಬರಲು ಪ್ರಾರಂಭಿಸಿದರು. ನಾನು ಕಳೆದ ವರ್ಷ ನಾವು ಅವಳೊಂದಿಗೆ ಪಶ್ಚಿಮ ಬಂಗಾಳದಲ್ಲಿ ಶೆಡ್ಯೂಲಗಗ ಶೂಟ್ ಮಾಡಿದಾಗ ಅವಳಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಹಾಗೆ ಇದ್ದಿದ್ದರೆ ನಾನು ಅವಳನ್ನು ಲಕ್ನೋಗೆ ಕರೆತರುತ್ತಿರಲಿಲ್ಲ....
... ನವಾಜ್ ಮತ್ತು ಕುಶನ್ ಜೊತೆ ಮೀಟಿಂಗ್ ಕರೆದು ಸ್ಕ್ರಿಪ್ಟ್‌ನಲ್ಲಿ ಬದಲಾವಣೆಗಳನ್ನು ಕೇಳಿದರು. ಅವರ ಸಲಹೆಗಳು ನೆಗೋಶಬಲ್ ಅಲ್ಲ, ಇಲ್ಲದಿದ್ದರೆ ಅವರು ಚಿತ್ರವನ್ನು ತೊರೆಯುತ್ತಾರೆ ಎಂದು ಹೇಳಿದರು. ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಕುಶನ್‌ಗೆ ಮನವರಿಕೆ ಮಾಡಿಕೊಡಬೇಕೆಂದು ಅವಳು ಇನ್ನೂ ನವಾಜ್‌ಗೆ ಸಂದೇಶ ಕಳುಹಿಸುತ್ತಿದ್ದಾಳೆ ಎಂಬುದು ನಿಮಗೆ ತಿಳಿದಿದೆಯೇ?' ಎಂದು ನಂತರ, ಕುಶನ್ ನಂದಿಯ ಬ್ಯುಸಿನೆಸ್ ಪಾರ್ಟನರ್ ಕಿರಣ್ ಶ್ರಾಫ್ ಘಟನೆಯ ಆವೃತ್ತಿಯ ಬಗ್ಗೆ ಹೀಗೆ ಹೇಳಿದ್ದಾರೆ.
'ವಾಸ್ತವವಾಗಿ, ಚಿತ್ರಾಂಗದಾ ಲೋ ಕಟ್ ಬ್ಲೌಸ್ ಧರಿಸಲು ಬಯಸುತ್ತಾರೆ ಎಂದು ಸೂಚಿಸಿದರು. ನವಾಜ್ ನನ್ನನ್ನು ಮೊದಲ ಬಾರಿಗೆ ನೋಡುವ ಮತ್ತು ನನ್ನಿಂದ ಆಕರ್ಷಿತರಾಗುವ ದೃಶ್ಯಕ್ಕೆ ಇದು ಸೂಕ್ತವಾಗಿದೆ ಎಂದು ಅವರು ನಮಗೆ ತಿಳಿಸಿದರು. ತನ್ನ ಬ್ಲೌಸ್‌ನಿಂದ ಒಂದು ಗುಂಡಿಯನ್ನು ಹರಿದು ಅಲ್ಲಿ ಒಂದು ಪಿನ್ ಸೇರಿಸಲು ಬಯಸಿದ್ದಾಳೆ ಎಂದು ಅವಳು ಹೇಳಿದಳು. ಕುಶಾನ್ ವಿರುದ್ಧದ ಅವಳ ಆರೋಪವೆಂದರೆ 'ನವಾಜ್ ಮೇಲೆ ಹೋಗು ರಬ್ ಮಾಡು' ಎಂದು. ಆದರೆ ಚಿತ್ರಾಂಗದಾ ಆ ದೃಶ್ಯವನ್ನು ಸರಿಯಾಗಿ ಮಾಡುತ್ತಿರಲಿಲ್ಲ ಅಷ್ಷೇ.....
....ನಮ್ಮಲ್ಲಿ ಉತ್ತಮವಾದ ಸ್ಕ್ರಿಪ್ಟ್ ಇದೆ ಮತ್ತು ಚಿತ್ರಾಂಗದಾಳ ಮಾಹಿತಿಗಾಗಿ, ಅವಳು ಕಲ್ಪಿಸಿಕೊಂಡಂತೆ ನಾವು ಯಾವುದೇ ಕಾಮಪ್ರಚೋದಕ ಚಲನಚಿತ್ರವನ್ನು ಮಾಡುತ್ತಿಲ್ಲ. ನಾವು ಇಲ್ಲಿಯವರೆಗೆ ಆ ರೀತಿ ಯಾವುದನ್ನು ಮಾಡಲಿಲ್ಲ ಹಾಗಾಗಿ ಈಗ ಯಾಕೆ ಮಾಡುತ್ತೀವಿ? ಎಂದು ಅವರು ಮತ್ತಷ್ಟು ಹೇಳಿದ್ದಾರೆ,