ಮಲೈಕಾ ಅರೋರಾರಂತೆ ಸೆಕ್ಸಿಯಾಗಿರಲು 'ಸರಿಯಾದ ರೀತಿಯಲ್ಲಿ' ನೀರು ಕುಡಿಯಿರಿ

First Published Jun 8, 2020, 4:47 PM IST

ಬಾಲಿವುಡ್‌ ಮಾಡೆಲ್‌ ಕಮ್‌ ನಟಿ ಮಲೈಕಾ ಅರೋರಾ ವಯಸ್ಸು 46 ಆದರೂ ಇನ್ನೂ ಮುಖದಲ್ಲಿ ಸುಕ್ಕಿಲ್ಲ. ಆಳೆತ್ತರ ಬೆಳೆದ ಮಗನಿದ್ದರೂ, ಮತ್ತೊಂದು ಮದುವೆಯಾಗೋ ಬಗ್ಗೆ ಯೋಚಿಸುವಷ್ಟು ಫಿಟ್‌ ಆಂಡ್‌ ಫರ್ಫೆಕ್ಟ್‌. ಯುವಕರ ನಿದ್ರೆಗೆಡಿಸುವ ಈ ನಟಿಯ ಬ್ಯೂಟಿಗೆ ಇವರಿಗಿಂತ ಚಿಕ್ಕ ವಯಸ್ಸಿನ ನಟ ಮರಳಾಗಿರುವುದು ಸಹಜವೇ. ಮಲೈಕಾ ಅರೋರಾರಂತೆ ಸೆಕ್ಸಿಯಾಗಿ, ಫಿಟ್‌ ಹಾಗೂ ಯಂಗ್‌ ಆಗಿ ಕಾಣಿಸಲು ಎಲ್ಲರೂ ಬಯಸುತ್ತಾರೆ. ಅದಕ್ಕೆ ಏನು ಮಾಡಬೇಕು ಅಂತ ನಟಿ ಟಿಪ್ಸ್‌ ಕೊಟ್ಟಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುವ  ಮಲೈಕಾ ಇನ್ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್‌ ಮಾಡಿದ್ದಾರೆ.